Saturday 10th, May 2025
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಗೋಕುಲ ಸಾಯನ್ ಆಶ್ರಯದಲ್ಲಿ ದೀಪಾರಾಧನೆ

Published On : 28 Oct 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.27: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿಎಸ್‍ಕೆಬಿ ಅಸೋಸಿಯೇಶನ್ ಇವುಗಳ ಸಹಯೋಗದೊಂದಿಗೆ ಶರನ್ನವರಾತ್ರಿಯ ಮಹಾ ನವಮಿ ಪರ್ವದಿನವಾದ ಕಳೆದ ಶನಿವಾರ ದೀಪಾರಾಧನೆಯನ್ನು, ಕೊರೋನಾ ಸಾಂಕ್ರಾಮಿಕದ ನಿಮಿತ್ತ ಸದ್ಯ ಚಾಲ್ತಿಯಲ್ಲಿರುವ ನಿರ್ಬಂಧಗಳ ಕಾರಣ, ಕೆಲವೇ ಕೆಲವು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳ ಉಪಸ್ಥಿತಿಯಲ್ಲಿ, ಆಶ್ರಯ ಸಭಾಗೃಹದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆದರೆ ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿತು.

ಪ್ರಧಾನ ಪುರೋಹಿತ, ವೇದಮೂರ್ತಿ ಶ್ರೀ ದಿನೇಶ್ ಉಪ್ಪರ್ಣ ಅವರು ಸಹ ಪುರೋಹಿತವರ್ಗದವರ ನೆರವಿನಿಂದ ಮಂಡಲ ರಚಿಸಿ, ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಸಪ್ತಶತಿ ಪಾರಾಯಣದೊಂದಿಗೆ ಶ್ರೀ ದೇವಿಗೆ ದೀಪಾರಾಧನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಬಿಎಸ್‍ಕೆಬಿ ಸಂಸ್ಥೆಯ ಗೌ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಮತ್ತು ಸಹನಾ ಪೆÇೀತಿ ದಂಪತಿ ಪೂಜೆಯ ಯಜಮಾನ ಸ್ಥಾನ ವಹಿಸಿದ್ದರು. ಶ್ರೀ ದೇವಿಗೆ ಮಹಾ ಮಂಗಳಾರತಿಯಾದ ನಂತರ ಬದ್ರಿ ನಾರಾಯಣ ಪಿಲಿಂಜೆ ಪರಿವಾರದ ಪ್ರಾಯೋಜಕತ್ವದಲ್ಲಿ ಕನ್ನಿಕೆ ಮತ್ತು ಸುವಾಸಿನಿ ಪೂಜೆ ನೆರವೇರಿತು. ಕನ್ನಿಕಾ ಸ್ಥಾನವನ್ನು ಕುಮಾರಿ ಅನ್ವಿತಾ ಹಾಗೂ ಮಹಾಕಾಳಿ, ಮಹಾಲಕ್ಷಿ ್ಮೀ, ಮಹಾ ಸರಸ್ವತಿ ಸ್ತಾನವನ್ನು ಜಯಲಕ್ಷಿ ್ಮ ಹೊಳ್ಳ, ಆಷಾ ಭಟ್ ಮತ್ತು ವಿಜಯಲಕ್ಷಿ ್ಮ ರಾವ್ ಅಲಂಕರಿಸಿದ್ದರು.

ದುಷ್ಟ ಶಕ್ತಿಗಳ ದಮನ ಮಾಡಿ ಶಿಷ್ಟರನ್ನು ಸದಾ ಕಾಪಾಡುತ್ತಿರುವ ಸರ್ವಮಂಗಳೆ ದುರ್ಗಾಮಾತೆ, ಸದ್ಯದ ಸಂಕಟ ನಿವಾರಣೆ ಮಾಡಿ ಜಗತ್ತಿಗೆ ಮಂಗಲವನ್ನುಂಟು ಮಾಡಲಿ, ಗೋಕುಲ ಪುನರ್ ನಿರ್ಮಾಣ ಕಾರ್ಯವು ಶೀಘ್ರವಾಗಿ ಪೂರ್ಣಗೊಂಡು ಭವ್ಯವಾದ ಮಂದಿರದಲ್ಲಿ ಶ್ರೀ ಕೃಷ್ಣನ ಪುನರ್ ಪ್ರತಿಷ್ಠೆಯಾಗುವಂತೆ ಅನುಗ್ರಹಿಸಲಿ, ಭಕ್ತರೆಲ್ಲೆರ ಮನೋಭಿಲಾಷೆಗಳೆಲ್ಲವನ್ನು ಶ್ರೀದೇವಿ ಈಡೇರಿಸಲಿ ಎಂದು ವೇ| ಮೂ| ದಿನೇಶ್ ಉಪ್ಪರ್ಣ ಅವರು ತಮ್ಮ ಪ್ರಾರ್ಥನೆಯಲ್ಲಿ ಅನುಗ್ರಹಿಸಿದರು.

ಇದೇ ಸಂದರ್ಭದಲ್ಲಿ, ಶಾರದಾ ಮಾತೆಯ ಭಾವಚಿತ್ರ ಹಾಗೂ ದಾರ್ಮಿಕ ಗ್ರಂಥಗಳನ್ನು ಇರಿಸಿ ಶ್ರೀ ಸರಸ್ವತಿ ದೇವಿಯನ್ನು ಆರಾಧಿಸಲಾಯಿತು. ಗೋಕುಲ ಭಜನಾ ಮಂಡಳಿಯಿಂದ ದೇವಿ ಭಜನೆ, ಸ್ತೋತ್ರ ಪಠನೆ ಇತ್ಯಾದಿ ನೆರವೇರಿತು. ಸೀಮಿತ ಸಂಖ್ಯೆಯಲ್ಲಿ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here