Thursday 28th, March 2024
canara news

ಗಾಯಕಿ ಅನಿತಾ ಡಿಸೋಜ ಇವರಿಗೆ 16ನೇ ಕಲಾಕಾರ್ ಪುರಸ್ಕಾರ

Published On : 29 Oct 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.27: ಗಾಯನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 16ನೇ ಕಲಾಕಾರ್ ಪುರಸ್ಕಾರವು ಕೊಂಕಣಿ ಗಾಯಕಿ ಅನಿತಾ ಡಿಸೋಜ ಇವರಿಗೆ ಪ್ರಕಟಿಸಿದೆ.

ಅನಿತಾ ಡಿಸೋಜ ಅವರು ಕೊಂಕಣಿ, ಕನ್ನಡ, ತುಳು, ಮಲಯಾಳಂ, ಇಂಗ್ಲೀಶ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಮರಾಠಿ, ಅರಾಬಿಕ್ ಮತ್ತು ಬ್ಯಾರಿ ಹೀಗೆ ಹನ್ನೆರಡು ಭಾಷೆಗಳಲ್ಲಿ ಹಾಗೂ ನವಾಯತಿ ಭಾಷಾ ಪ್ರಬೇಧದಲ್ಲಿ ಹಾಡಿದ್ದಾರೆ. ವಿವಿಧ ಧ್ವನಿಸುರುಳಿಗಳಲ್ಲಿ 500ಕ್ಕೂ ಮಿಕ್ಕಿ ಹಾಡುಗಳನ್ನು, ಭಾರತ ಮತ್ತು ಗಲ್ಫ್ ದೇಶಗಳ 3000ಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಂಠಸಿರಿಯನ್ನು ನೀಡಿದ್ದಾರೆ. ಯಾದ್ ಮತ್ತು ಕಲರ್ಸ್ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ.

ಅವರ ಪ್ರತಿಭೆಗೆ ಕೇರಳ ಸರಕಾರದಿಂದ ಕಲಾತಿಲಕ, ಕರ್ನಾಟಕ ಬ್ಯಾರಿ ಅಕಾಡೆಮಿಯಿಂದ ತುಳುನಾಡ ಗಾನ ಕೋಗಿಲೆ (2006), ಕನ್ನಡ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಗಡಿನಾಡ ರಾಣಿ ಕೋಗಿಲೆ (2011), ಮಾಂಡ್ ಸೊಭಾಣ್ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ - ಶ್ರೇಷ್ಟ ಗಾಯಕಿ (2014) ಇತ್ಯಾದಿ ಗೌರವಗಳು ಲಭಿಸಿವೆ. ಮಂಗಳೂರುನ ಕುಳೂರು ಮೂಲದ ಅನಿತಾ ಡಿಸೊಜಾ ಬೇಳ ಪ್ರಸ್ತುತ ಅಬುಧಾಬಿಯಲ್ಲಿ ವಾಸವಿದ್ದು ಕೊಂಕಣಿ ಗಾಯನ ಕ್ಷೇತ್ರವನ್ನು ಶ್ರೀಮಂತಗೊಳಿಸಲು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕೊಂಕಣಿಯ ನೃತ್ಯ, ನಾಟಕ, ಸಂಗೀತ-ಗಾಯನ, ಜನಪದ ಈ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಕಲಾವಿದರನ್ನು ಗೌರವಿಸಲು ಕೊಂಕಣಿ ವಿದ್ವಾಂಸ ವಂ| ಡಾ| ಪ್ರತಾಪ್ ನಾಯ್ಕ್ ತನ್ನ ಕಾರ್ವಾಲ್ ಕುಟುಂಬಸ್ಥರ ಪರವಾಗಿ 2005ರಲ್ಲಿ ಕಲಾಕಾರ್ ಪುರಸ್ಕಾರ ಸ್ಥಾಪಿಸಿದ್ದರು.

ಕೋವಿಡ್ ನಿಯಂತ್ರಣ ಕಾರಣಗಳಿಂದಾಗಿ ಈ ಕಾರ್ಯವು ಅಬುಧಾಬಿಯಲ್ಲಿ ನಡೆಯಲಿದ್ದು, ಅನಿವಾಸಿ ಉದ್ಯಮಿ ಲಿಯೊ ರಾಡ್ರಿಗಸ್ ಪುರಸ್ಕಾರ ಹಸ್ತಾಂತರ ಮಾಡಲಿದ್ದಾರೆ. ಈ ಕಾರ್ಯಕ್ರಮವು ಬರುವ ನ.01ರ ಸಂಜೆ 7.00 ಗಂಟೆಗೆ ದಾಯ್ಜಿವಲ್ರ್ಡ್ ಟಿವಿಯಲ್ಲಿ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 226 ನೇ ಕಾರ್ಯಕ್ರಮ `ಪುರ್ಣಾ ಪಾತೊಳಿ-3’ ರಲ್ಲಿ ಪ್ರಸಾರವಾಗಲಿದೆ ಎಂದು ಮಾಂಡ್ ಸೊಭಾಣ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here