Wednesday 18th, May 2022
canara news

ಚರ್ಚ್‍ಗೇಟ್‍ನ ಎಂಎಲ್‍ಎ ಹಾಸ್ಟೇಲ್‍ನ ಕ್ಯಾಂಟಿನಲ್ಲಿ 47ನೇ ವಾರ್ಷಿಕ ದಸರಾ ಮಹೋತ್ಸವ

Published On : 29 Oct 2020   |  Reported By : Rons Bantwal


ದೈವ ದೇವರ ಅನುಗ್ರಹದಿಂದ ಮಾತ್ರ ನೆಮ್ಮದಿಕರ ಜೀವನ : ಜಯರಾಮ ಶೆಟ್ಟಿ ಇನ್ನ

ಮುಂ¨ಯಿ (ಆರ್‍ಬಿಐ), ಅ.27: ಮಹಾನಗರದಲ್ಲಿನ ಚರ್ಚ್‍ಗೇಟ್ ಎಂಎಲ್‍ಎ ಹಾಸ್ಟೇಲ್‍ನ ಕ್ಯಾಂಟಿನ್‍ನಲ್ಲಿ ಶ್ರೀ ದುರ್ಗಾಂಬಿಕಾ ಭಜನಾ ಮಂಡಲಿಯಲ್ಲಿ ಕ್ಯಾಂಟೀನ್‍ನ ಸಂಚಾಲಕರಾದ ಅಜಂತಾ ಕಾಟರರ್ಸ್ ಜಯರಾಮ ಶೆಟ್ಟಿ ಇನ್ನ ಸಾರಥ್ಯ ಹಾಗೂ ಕ್ಯಾಂಟೀನ್ ಉದ್ಯೋಗಿಗಳ ಸಹಕಾರದೊಂದಿಗೆ ಈ ಬಾರಿ47ನೇ ವಾರ್ಷಿಕ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಈ ಬಾರಿಯ ದಸರಾ ಆರಂಭದ (ಅ.17) ದಿನ ಶ್ರೀ ದುರ್ಗಾದೇವಿ ಪ್ರತಿಷ್ಠಾಪಿಸಿ ಕಳೆದ ಭಾನುವಾರ ತನಕ ದಿನಪ್ರತಿ ಶ್ರೀ ದುರ್ಗಾಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜೆ ಹಾಗೂ ರಾತ್ರಿ ಭಜನೆ, ಮಂಗಳಾರತಿ ನೇರವೇರಿಸಲಾಯಿತು. ಅಂತೆಯೇ ಸನ್ನಿಧಾನದಲ್ಲಿ ಆರಾಧಿಸುತ್ತಿರುವ ಅಣ್ಣಪ್ಪ-ಪಂಜುರ್ಲಿ ದೈವದ ಪೂಜೆ, ಭಜನೆ, ಮಹಾಕಾಳಿ ಅಮ್ಮನವರ ಪೂಜೆ, ಮಂಗಳಾರತಿ ನಡೆಸಲ್ಪಟ್ಟಿತು.

ದಸರಾ ಮಹೋತ್ಸವ ಪ್ರಯುಕ್ತ (ಅ.25) ವಿಜಯ ದಶಮಿಯಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಭಜನೆ, ಕಳಸ ಪೂಜೆ, ಬಳಿಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿಸಿ ಸಂಜೆ ಕಳಸ ವಿಸರ್ಜನೆ ನಡೆಸಯಿತು.

ಮೀರಾರೋಡ್‍ನ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ಭಟ್ ತನ್ನ ಪೌರೋಹಿತ್ಯದಲ್ಲಿ ಕಾರ್ತಿಕ್ ಭಟ್, ವಿಠಲ ಶೇರಿಗಾರ್ ಅವರ ಸಹಕಾರದೊಂದಿಗೆ ಧಾರ್ಮಿಕ ಪೂಜಾಧಿಗಳನ್ನು ನೇರವೇರಿಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ದಸರಾ ಮಹೋತ್ಸವದ ರೂವಾರಿ ಜಯರಾಮ ಶೆಟ್ಟಿ ಮಾತನಾಡಿ ದೈವ ದೇವರ ಕೃಪೆ ಇದ್ದರೆ ಯಾವನೂ ಎಂತಹ ಕಷ್ಟ ಬಂದರೂ ಎದುರಿಸಿ ಸಾಧನೆ ಸಿದ್ಧಿಸ ಬಹುದು. ಕೊರೊನಾ ಸಾಂಕ್ರಮಿಕ ಮಹಾಮಾರಿ ಇಡೀ ಜಗತ್ತಿಗೆ ಕಂಟಕವಾಗಿದ್ದು ಅದನ್ನು ನಾವೂ ಸಾಕಾಷ್ಟು ಮಟ್ಟಿಗೆ ಎದುರಿಸಿದ್ದೇವೆ. ಈ ಮಹಾಮಾರಿ ಜಗತ್ತಿನ ಎಲ್ಲರನ್ನೂ ಕಂಗಾಲಾಗಿಸಿ ಬಿಟ್ಟಿದೆ. ಇಂತಹ ಸಮಯ ನಾವು ದೈವ-ದೇವರ ಆರಾಧನೆಯಲ್ಲಿ ಹೆಚ್ಚಾಗಿ ತೊಡಗಿಸಿ ಕೊಳ್ಳÀಬೇಕು. ದೈವ ದೇವರ ಅನುಗ್ರಹದಿಂದ ಮಾತ್ರ ಆರೋಗ್ಯ, ನೆಮ್ಮದಿಕರ ಜೀವನ ಮತ್ತು ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಹಿತನುಡಿಗಳನ್ನಾಡಿ ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನಿತ್ತರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನವೀನ್ ಶೆಟ್ಟಿ, ರಾಜ ಪೂಜಾರಿ, ವಿಠ್ಠಲ ಶೇರಿಗಾರ್, ಪ್ರವೀಣ್ ಶೆಟ್ಟಿ, ಸುಭಾಷ್ ನಾಯಕ್, ಚಂದ್ರ ಸುವರ್ಣ, ಯೋಗೆಶ್ ಪುತ್ರನ್, ದಿನೇಶ್ ಪುತ್ರನ್, ಭಾಸ್ಕರ ಎನ್. ಮೊಗವೀರ, ಸೋಮಶೇಖರ್ ಬಂಗೇರ, ಜಯ ಬಂಗೇರ, ಕೃಷ್ಣ ಹರೀಶ್ ಖೇಡೆಕರ್, ಸುರೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಯೋಗೇಶ್ ಬಂಗೇರ, ದೀಪಕ್ ಶೆಟ್ಟಿ, ರಮೇಶ್ ಬಿಲ್ಲವ, ನವೀನ್ ಶೆಟ್ಟಿ ವಿಕ್ರೋಲಿ ಮತ್ತಿತರರು ಉಪಸ್ಥಿತರಿದ್ದು ಸೇವಾಧಿಗಳಲ್ಲಿ ಸಹಭಾಗಿಗಳಾದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here