Saturday 10th, May 2025
canara news

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2020; ಕುಸುಮೋದರ ಡಿ.ಶೆಟ್ಟಿ ಆಯ್ಕೆ

Published On : 29 Oct 2020   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.28: ಕರ್ನಾಟಕ ರಾಜ್ಯದ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರನಾಡ ಶ್ರೇಷ್ಠ ಸಮಾಜ ಸೇವಕ, 2020ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭವಾನಿ ಶಿಪ್ಪಿಂಗ್ ಸರ್ವೀಸಸ್ ಪ್ರೈವೇಟ್ (ಇಂಡಿಯಾ) ಲಿಮಿಟೆಡ್ ಇದರ ಚೇರ್ಮೆನ್, ಭವಾನಿ ಫೌಂಡೇಶನ್ (ರಿ.) ಮುಂಬಯಿ ಸಂಸ್ಥೆಯ ಸಂಸ್ಥಾಪಕ-ಕಾರ್ಯಾಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ (ಕೆ.ಡಿ ಶೆಟ್ಟಿ) ಆಯ್ಕೆ ಗೊಳಿಸಿದೆ.

ದಿ.ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯ `ಪತ್ರಿಕೋದ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2017'ಗೆ ಭಾಜನರಾಗಿದ್ದ ಕುಸುಮೋದÀರ ಡಿ.ಶೆಟ್ಟಿ ಈ ಹಿಂದೆ ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ ಆಗಿ ಸಂಘದ ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲ ಅಲ್ಲಿನ ಕೇಪು-ಅಡ್ಯನಡ್ಕದ ಕುದ್ದುಪದವು ಮೂಲತ: ಕೆ.ಡಿ ಶೆಟ್ಟಿ ಇವರು ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಮತ್ತು ಭವಾನಿ ದೇರಣ್ಣ ಶೆಟ್ಟಿ ದಂಪತಿ ಸುಪುತ್ರ ಆಗಿದ್ದಾರೆ. ರಾಧಾಕೃಷ್ಣ ಡಿ.ಶೆಟ್ಟಿ, ಚೆಲ್ಲಡ್ಕ ಪದ್ಮನಾಭ ಡಿ.ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ ಸಹೋದರನಾಗಿದ್ದು ಧರ್ಮಪತ್ನಿ ಸರಿತಾ ಕುಸುಮೋದರ ಶೆಟ್ಟಿ, ಜೀಕ್ಷಿತ್ ಕೆ.ಶೆಟ್ಟಿ (ಸುಪುತ್ರ), ಚೆಲ್ಲಡ್ಕ, ಅಂಕಿತಾ ಜೆÉ.ಶೆಟ್ಟಿ (ಸೊಸೆ), ಕು| ಶೀಖಾ ಕೆ.ಶೆಟ್ಟಿ (ಸುಪುತ್ರಿ) ಚೆಲ್ಲಡ್ಕ ಇವರೊಂದಿಗೆ ನವಿಮುಂಬಯಿ ನೆರೂಲ್ ಇಲ್ಲಿ ವಾಸವಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಗಲಿರುಳು ಶ್ರಮಿಸಿ ವಿವಿಧ ಹುದ್ದೆಗಳನ್ನಲಂಕರಿಸಿ ಅನನ್ಯ ಸೇವೆ ಸಲ್ಲಿಸಿ ಜನಾನುರೆಣಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here