ಮುಂಬಯಿ, ಅ.30: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಲೊರೆಟ್ಟೋ ಸಮೀಪದ ಕಾಮಲ್ಕಟ್ಟೆ (ಆಗ್ರಾರ್) ಮೂಲತಃ ಜೋನ್ ಡೊಮಿನಿಕ್ ಫ್ರಾಂಕ್ (65.) ಅಲ್ಪಕಾಲದ ಅಸ್ವಸ್ಥತೆಯಿಂದ ಡೊಂಬಿವಿಲಿ ಇಲ್ಲಿನ ತನ್ನ ಸ್ವನಿವಾಸದಲ್ಲಿ ಇಂದಿಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು.
ವಡಲಾ ಇಲ್ಲಿನ ಆರ್ಟಿಒ ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜೋನ್ ಉಪನಗರ ಡೊಂಬಿವಿಲಿ ಪಶ್ಚಿಮದ ನವ್ಪಾಡ ದತ್ತಮಂದಿರ ಸನಿಹದ ಲಕ್ಷ್ಮೀ ನಿವಾಸ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಇಬ್ಬರು ಸುಪುತ್ರಿಯರು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.