Saturday 10th, May 2025
canara news

ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ)-ಕೋವಿಡ್ ಆಪತ್ಕಾಲದಲ್ಲಿ ಪರಿಹಾರ ಕಾರ್ಯ

Published On : 08 Nov 2020   |  Reported By : Rons Bantwal


ಮುಂಬಯಿ (ಆರ್‍ಬಿಐ),ನ.11: ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ) ಸಾಯನ್ ಸಂಸ್ಥೆಯು ಜಾಗತಿಕವಾಗಿ ಹಬ್ಬಿರುವ ಕೋವಿಡ್ ಆಪತ್ಕಾಲದಲ್ಲಿ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಪರಿಹಾರ ಕಾರ್ಯ ನಡೆಸಿದೆ.

ಕಳೆದ ಸುಮಾರು ಎಂಟು ತಿಂಗಳಿಂದ ಪ್ರಪಂಚವನ್ನೇ ಕಾಡುತ್ತಿರುವ ಕೋವಿಡ್-19 ಮಹಾಮಾರಿಗೆ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ದೊಡ್ಡ ದೊಡ್ಡ ಉದ್ಯೋಗಪತಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಈ ಮಹಾಮಾರಿಯ ಪರಿಣಾಮ ತಟ್ಟಿದೆ. ಅದರಲ್ಲಿಯೂ ಆಥಿರ್üಕವಾಗಿ ದುರ್ಬಲರಾದ ಹಾಗೂ ದೈನಂದಿನ ಆದಾಯವನ್ನೇ ಅವಲಂಬಿಸಿರುವ ಜನರ ಬಾಳು ಅತ್ಯಂತ ದುಸ್ತರವಾಗಿದೆ.

ಈ ಸಂಕಟ ಸಮಯದಲ್ಲಿ, ಬಿಎಸ್‍ಕೆಬಿಎ ಗೋಕುಲವು, ಆಥಿರ್üಕ ಅಗತ್ಯತೆಯಿರುವ ಸದಸ್ಯ ಬಾಂಧವರಿಗೆ ಹಾಗೂ ಸಮಾಜ ಬಾಂಧವರಿಗೆ ಧನ ಸಹಾಯ ಅಥವಾ ಅಗತ್ಯ ದಿನಸಿ ವಸ್ತುಗಳನ್ನು ಒದಗಿಸಿ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದೆ.

ಮುಂಬಯಿ ಮಹಾ ನಗರಪಾಲಿಕೆಯ ಧಾರಾವಿ ಶಾಲೆಯ ಸುಮಾರು 200 ಮಕ್ಕಳ ಕುಟುಂಬಕ್ಕೆ ಒಂದು ತಿಂಗಳ ರೇಷನ್ ನೀಡಿ ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದೆ. ಅಂತೆಯೇ ಸದ್ಯ ನಿರ್ಮಾಣ ಹಂತದಲ್ಲಿರುವ ಗೋಕುಲದ ನಿವೇಶನದಲ್ಲಿ ಕೆಲಸ ಮಾಡುವವರಿಗೆ ಒಂದು ತಿಂಗಳ ದವಸಧಾನ್ಯ ಇತ್ಯಾದಿಗಳನ್ನು ನೀಡಿದೆ. ಅಲ್ಲದೆ ದೈನಂದಿನ ಆದಾಯವಿಲ್ಲದ ಮುಂಬಯಿ, ಮಂಗಳೂರು, ಉಡುಪಿಯ ಸುಮಾರು 225 ಕ್ಕೂ ಮಿಕ್ಕಿ ಕುಟುಂಬಗಳಿಗೆ ತಲಾ ರೂ. 5000/- ಮೊತ್ತದÀಂತೆ ಧನ ಸಹಾಯ, ಮಾತ್ರವಲ್ಲದೆ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿನ ಸುಮಾರು 125ಕ್ಕೂ ಮಿಕ್ಕ ಕುಟುಂಬ ಹಾಗೂ ಮುಂಬಯಿಯ 100ಕ್ಕೂ ಮಿಕ್ಕ ಕುಟುಂಬಗಳಿಗೆ ಔಷಧಗಳನ್ನು ನೀಡಿ ಸಹಾಯ ಮಾಡಿದೆ. ಹಾಗೂ ಸಂಸ್ಥೆಯು ಪ್ರಧಾನ ಮಂತ್ರಿ ಕೋವಿಡ್ -19 ಪರಿಹಾರ ನಿಧಿಗೆ ಕೂಡಾ ಉತ್ತಮ ದೇಣಿಗೆ ನೀಡಿದೆ.

ಕೋವಿಡ್-19 ಕಾಯಿಲೆಗೆ ಔಷಧೋಪಚಾರ,ಆಸ್ಪತ್ರೆಯ ಖರ್ಚು ತುಂಬಾ ದುಬಾರಿ. ಹಾಗಾಗಿ ಕೊರೋನಾ ಕಾಯಿಲೆಗೆ ಒಳಗಾದ ನಮ್ಮ ಸದಸ್ಯರಿಗೆ ಆರ್ಥಿಕ ಸಹಾಯ, ವನ್ನು ಒದಗಿಸುವುದರೊಂದಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು .ಅವರಲ್ಲಿ ಧೈರ್ಯ ಸ್ಥೈರ್ಯಗಳನ್ನು ತುಂಬುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್‍ಗೆ ತುತ್ತಾದವರು ಮಾತ್ರವಲ್ಲ ಅವರ ಪರಿವಾರದವರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಏಕಾಂತತೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಅವರು ಕೂಡಾ ಮಾನಸಿಕ ತುಮುಲ, ಖಿನ್ನತೆಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಅತ್ಯಂತ ಕಾಳಜಿ ವಹಿಸುವ ಅಗತ್ಯವಿದೆ. ಹಾಗಾಗಿ ಸಂಸ್ಥೆಯು ವೆಬಿನಾರ್, ವೀಡಿಯೊ ಮೂಲಕ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕಳೆದ ಏಳೆಂಟು ತಿಂಗಳಿನಿಂದ ಮಾಡುತ್ತಲೇ ಇದೆ.

ಬಿಎಸ್‍ಕೆಬಿ ಎಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಉಪಾಧ್ಯಕ್ಷರಾದ ವಾಮನ್ ಹೊಳ್ಳ ಹಾಗೂ ಶೈಲಿನಿ ರಾವ್, ಗೌ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಪ್ರಧಾನ ಕೋಶಾಧಿಕಾರಿ ಹರಿದಾಸ್ ಭಟ್, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಎಸ್.ರಾವ್ ಮತ್ತು ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸದಸ್ಯರು ಈ ಎಲ್ಲಾ ಸೇವೆಗಳಲ್ಲಿ ಸಕ್ರೀಯರಾಗಿ ಶ್ರಮಿಸಿದ್ದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here