Saturday 10th, May 2025
canara news

ಧರ್ಮಸ್ಥಳ ಹಿಂದೂ ರುದ್ರಭೂಮಿಗೆ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ರೂ.2.50ಲಕ್ಷ ಅನುದಾನ ಮಂಜೂರು.

Published On : 08 Nov 2020   |  Reported By : Rons Bantwal


ಧರ್ಮಸ್ಥಳ ದಿನಾಂಕ:4-11-2020 ಶ್ರೀ ಕ್ಷೇತ್ರ ಧರ್ಮಸ್ಥಳದ ಹಿಂದೂ ರುದ್ರಭೂಮಿಯ ಸಮಿತಿ ಸದಸ್ಯರ ಆಶಯದಂತೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸುಮಾರು 6.00ಲಕ್ಷ ವೆಚ್ಚದಲ್ಲಿ ನವೀಕರಣ ಕಾರ್ಯವು ನಡೆಯುತ್ತಿದೆ.

 

ಈ ನವೀಕರಣ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪೂರಕ ಅನುದಾನವಾಗಿ ರೂ.2,50,000/-ವನ್ನು ಮಂಜೂರಾತಿ ನೀಡಿರುತ್ತಾರೆ. ಧರ್ಮಸ್ಥಳ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್‍ರವರ ಸಲಹೆ ಸೂಚನೆಯಂತೆ ನವೀಕರಣದ ಅಂಗವಾಗಿ ನೂತನ ಸಿಲಿಕಾನ್ ಬಾಕ್ಸ್ ಅಳವಡಿಕೆ, ಶವಕಟ್ಟೆ, ವಿಶ್ರಾಂತಿ ಕೊಠಡಿ, ಮುಖ್ಯ ಕಚೇರಿಗೆ ಟೈಲ್ಸ್ ಅಳವಡಿಕೆ, ನೂತನ ನೀರಿನ ಟ್ಯಾಂಕ್, ನಳ್ಳಿ ವ್ಯವಸ್ಥೆ, ವಿದ್ಯುತ್ತೀಕರಣ, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್‍ಗಳು ಮುಂತಾದುವುಗಳ ಕಾಮಗಾರಿಗಳು ನಡೆಯುತ್ತಿವೆ.

ಪೂರಕ ಅನುದಾನದ ಮಂಜೂರಾತಿ ಪತ್ರವನ್ನು ಗ್ರಾಮೀಣಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಹರಿ , ಇಂಜಿನಿಯರ್ ವಿಶ್ವಜಿತ್‍ರವರು ಧರ್ಮಸ್ಥಳದ ಗ್ರಾಮ ಪಂಚಾಯತ್‍ನ ಆಡಳಿತಧಿಕಾರಿಗಳಾದ ಜಯಕೀರ್ತಿ ಜೈನ್, ಪಿ.ಡಿ.ಒ. ಉಮೇಶ್ ಹಿಂದೂ ರುದ್ರಭೂಮಿಯ ಅಧ್ಯಕ್ಷರಾದ ಶಂಕರ್ ಕುಲಾಲ್, ಕಾರ್ಯದರ್ಶಿ ಪ್ರೀತಮ್, ಕೋಶಾಧಿಕಾರಿ ಡಿ. ಧರ್ಣಪ್ಪರವರಿಗೆ ಹಸ್ತಾಂತರಿಸಿ ನವೀಕರಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2 ಸೋಲಾರ್ ಲೈಟ್‍ಗಳನ್ನು ಕೊಡುಗೆಯಾಗಿ ನೀಡಿದ್ದು ಧರ್ಮಸ್ಥಳ ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರದೊಂದಿಗೆ ನವೀಕರಣ ಕಾರ್ಯವು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here