Wednesday 18th, May 2022
canara news

ಪೇಜಾವರ ಮಠದ ಮಧ್ವ ಭವನದಲ್ಲಿನ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ನೆರೆವೇರಿಸಲ್ಪಟ್ಟ ಗೋಪೂಜೆ

Published On : 16 Nov 2020   |  Reported By : Rons Bantwal


ಗೋವುಗಳ ಮೂಲಕ ಭಗವಂತ ನಮ್ಮಲ್ಲಿ ನೆಲೆಯಾಗುವನು : ಪೇಜಾವರಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.14: ಭಗವಂತ ಎಲ್ಲಿಬೇಕೋ ಅಲ್ಲಿ ಅವತರಿಸ ಬಲ್ಲನು. ಆದರೆ ಮನುಕುಲಕ್ಕೆ ಹುಟ್ಟು ಅನಿವಾರ್ಯ. ಭಗವಂತನದ್ದು ಅವತಾರ ನಮ್ಮನಿಮ್ಮ ಹಾಗೆ ಹುಟ್ಟುವಲ್ಲ. ಇಂತಹ ಭಗವಂತ ಕೃಷ್ಣನಾಗಿ ಮಧುರೆಯಲ್ಲಿ ಅವತರಿಸಿ ಅರೆಕ್ಷಣ ಅಲ್ಲಿ ನಿಲ್ಲದೆ ಮರುಕ್ಷಣವೇ ಊರನ್ನು ತೊರೆದಿದ್ದನು ಕಾರಣ ಕಂಸನ ಭಯದಿಂದಲ್ಲ ಬದಲಾಗಿ ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನಿರಲು ಯೋಗ್ಯನಲ್ಲ ಮತ್ತು ಇದನ್ನು ಅನ್ನುವುದನ್ನು ನಾನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ತೊರೆದಿದ್ದನು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದಲ್ಲಿನ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ಗೋಪೂಜೆ ನೆರವೇರಿಸಿ ನರಕ ಚತುರ್ದಶಿ, ದೀಪಾವಳಿ, ಲಕ್ಷಿ ್ಮೀಪೂಜೆ, ಆಕಾಶ ದೀಪ ಸಂಭ್ರಮಿಸಿ ನೆರೆದ ಸದ್ಭಕ್ತರನ್ನು ಉದ್ದೇಶಿಸಿ ಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳವರು ಮಾತನಾಡಿ ಕಂಸನ ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿತ್ತು. ಯಾಕೆಂದರೆ ನಾವು ಹಸುರರು ಎಂದು ಆತÀನಿಗೆ ಅರಿವುಯಿತ್ತು. ದೇವತೆಗಳು ನಮ್ಮ ವಿರೋಧಿಗಳು ಅವರನ್ನು ಬಗ್ಗುಬಡಿಯಬೇಕು ಆದರೆ ಅವರು ಸ್ವರ್ಗಲೋಕದಲ್ಲಿದ್ದಾರೆ ಆದ್ದರಿಂದ ಅವರಲ್ಲಿ ಹೇಗೆ ಹೋರಾಟ ನಡೆಸುವುದು ಎಂಬ ಚಿಂತೆ ಕಂಸನಲ್ಲಿ ಕಾಡುತ್ತಿತ್ತು. ಆದ್ದರಿಂದ ಅವರಿಗೆ ಆಹಾರ ಪೂರೈಕೆ ಏನು ನಡೆಯುತ್ತಿತ್ತೋ ಅದನ್ನೇ ನಿಲ್ಲಿಸಿದರೆ ಸರಿಯಾದ ಪಾಠ ಕಲಿಸಬಹುದು ಎಂದು ಮನವರಿಕೆ ಮಾಡಿದ್ದ ಕಂಸ ದೇವತೆಗಳ ಆಹಾರಕ್ಕೆ ತಡೆಯೊಡ್ಡಿದ್ದನು. ಆದ್ಯಂ ಸುರಾಣ ಮಾಹಾರ ಅಂದರೆ ಗೋವಿನ, ಆಕಾಲ ತುಪ್ಪ ಏನಿದೆ ಅದು ದೇವತೆಗಳ ಆಹಾರವಾಗಿತ್ತು. ಅದನ್ನೇ ನಿರ್ನಾಮ ಮಾಡಿದರೆ ದೇವತೆಗಳಿಗೆ ಆಹಾರವಿಲ್ಲದೆ ಕ್ಷಿಣಿಸುತ್ತಾರೆ. ಅದಕ್ಕಾಗಿಗೂವುಗಳನ್ನೇಲ್ಲಾ ಸಂಹಾರ ಮಾಡಿದ್ದರು. ಸ್ವತಃ ದುಷ್ಟರಿಗೂ ರಾಜನ ಆಜ್ಞೆಯಿತ್ತು. ಆದ್ದರಿಂದ ಹಿಂಸೆ ಅವರಿಗೆ ಆಟವಾಗಿ ಹೋಗಿತ್ತು. ಇಂತಹ ರಾಜ್ಯದಲ್ಲಿ ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಾ ಇದೆಯೋ ಅಲ್ಲಿ ನಾನು ಇರುವುದಿಲ್ಲ ಅನ್ನುವುದನ್ನು ನಾನು ಜಗತ್ತಿಗೆ ತೋರಿಸಬೇಕು. ಆ ಮೂಲಕ ಇಲ್ಲಿಯೇ ಅವತರಿಸಿ ಮರುಕ್ಷಣವೇ ರಾಜ್ಯವÀನ್ನು ತೊರೆಯಬೇಕು ಆ ಮೂಲಕ ಜಗತ್ತಿಗೆ ಒಂದು ಸಂದೇಶ ಸಾರಬೇಕು ಎಂದು ಎಲ್ಲಿ ಗೋವುಹತ್ಯೆ ನಡೆಯುತ್ತೆ ಅಲ್ಲಿ ನಾನು ಇರುವುದಿಲ್ಲ ಎಂದು ಕಂಸನ ರಾಜ್ಯ ಮಧುರಾನಗರವನ್ನು ತೊರೆದನು. ಆದರೆ ಎಲ್ಲಿ ಬೇಕಾದರೂ ಹೋಗ ಬಹುದಾಗಿತ್ತಾದರೂ ಎಲ್ಲೆಲ್ಲೂ ಹೋಗದೆ ನೇರವಾಗಿ ನಂದಾಗೋಕುಲಕ್ಕೆ ಹೋದನು. ಎಲ್ಲಿ ಗೋವುಗಳ ಪೆÇೀಷಣೆ ನಿರಂತರವಾಗಿ ನಡೆಯುತ್ತದೆಯೋ ಅದು ನಂದಾಗೋಕುಲ. ಅಲ್ಲಿ ಭಗವಂತ ಹೋದನು. ಆ ಮೂಲಕ ಜಗತ್ತಿಗೆ ಒಂದು ದೊಡ್ಡ ಸಂದೇಶ ನೀಡಿ ಗೋಹತ್ಯೆ ಆಗುವಲ್ಲಿ ನಾನು ಇರುವುದಿಲ್ಲ
ಅಂತಹ ಕೃಷ್ಣನ ಭಕ್ತರು ಎಂದು ಕೊಳ್ಳುವವರು ನಾವು ನಮ್ಮ ಮನೆಯಲ್ಲಿ ಭವಂತನು ಇರಬೇಕು ಎಂದಿದ್ದರೆ ನಾವೂ ಕೂಡಾ ಗೋವುಗಳ ಪೆÇೀಷಣೆ ಮಾಡಬೇಕು. ಆವಾಗಲೇ ಭಗವಂತ ನಮ್ಮ ಮನೆಮನಗಳಲ್ಲೂ ಉಳಿಯುತ್ತಾನೆ. ನಾವು ಇಂದು ಜೀವನೋಪಾಯಕ್ಕಾಗಿ ಎಲ್ಲೆಲ್ಲೂ ವಾಸವಾಗಿರುತ್ತೇವೆ ಅಲ್ಲಿ ಗೋವುಗಳ ಪೆÇೀಷಣೆ ಅಸಾಧ್ಯವಾದರೂ ಎಲ್ಲಿ ಗೋವುಗಳ ಪೆÇೀಷಣೆ ನಡೆಯುತ್ತವೆ ಅಲ್ಲಿಯಾದರೂ ನಾವು ಕೈಜೋಡಿಸಿದರೂ ಅಷ್ಟೇ ಸಾಕು. ಕಾರಣ ಭಗವಂತ ಗೋವಿನ ಮಾತನ್ನು ಬೇಗನೇ ಕೇಳುತ್ತಾನೆ. ಆ ಗೋವುಗಳ ಮೂಲಕ ಭಗವಂತ ನಮ್ಮಲ್ಲಿ ನೆಲೆಯಾಗುವನು. ಈ ದೀಪಾವಳಿ ಪರ್ವಕಾಲದಲ್ಲಿ ಮುಂಬಯಿ ಮಹಾಜನತೆ ನೀವೆಲ್ಲ ಭಗವದ್ಭಕ್ತರು ಇಲ್ಲಿ ಗೋವುಪೂಜೆ ನೆರವೇರಿಸಿದ್ದೀರಿ ತಮ್ಮೆಲ್ಲರಿಗೂ ಕೃಷ್ಣನ ಅನುಗ್ರಹ ದಯಪಾಲಿಸಲಿ ಎಂದರು.


ಕರ್ನಾಟಕದ ಉಡುಪಿ ಜಿಲ್ಲೆಯ ಬ್ರಹ್ಮಾವರ ಸನಿಹದ ಉತ್ತರದಲ್ಲಿ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ನೀಲಾವರ ಇಲ್ಲಿ ಉಡುಪಿ ಪೇಜಾವರ ಮಠದ ಗೋಶಾಲೆ ಇದೆ. ಇದು ಶ್ರೀ ಕೃಷ್ಣೈಕ್ಯ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೂರದೃಷ್ಠಿತ್ವದ ಯೋಜನೆ. ಬೀದಿಯಲ್ಲಿರುವ ಮತ್ತು ವಯಸ್ಸಾದ ಹಸುಗಳಿಗೆ ಇದು ಆರೈಕೆಯ ತಾಣವಾಗಿದೆ. ಈ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇಲ್ಲಿ ಸರೋವರ ನಾಮದ ಕೆರೆ ನಿರ್ಮಿಸಿ ಕೆರೆಯ ಮಧ್ಯದಲ್ಲಿ ಶ್ರೀ ಕೃಷ್ಣನ ದೇವಾಲಯ ಕಟ್ಟಲಾಗಿದೆ. ಇಲ್ಲೂ ತಮ್ಮ ಸೇವೆಗೈದು ಗೋವುಗಳ ಪೆÇೀಷಣೆ ಮಾಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಪೇಜಾವರ ಶ್ರೀಗಳು ತಿಳಿಸಿದರು.

ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಪೂಜಾಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಪೇಜಾವರ ಮಠದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಅದಮಾರು ಮಠ ಮುಂಬಯಿ ಶಾಖಾ ಪ್ರಬಂಧಕ ಪಡುಬಿದ್ರಿ ವಿ.ರಾಜೇಶ್ ರಾವ್, ಶ್ರೀನಿವಾಸ ಭಟ್ ಪರೇಲ್, ಪುರೋಹಿತರುಗಳಾದ ಅರವಿಂದ ಬನ್ನಿಂತ್ತಾಯ, ವಿಷ್ಣುತೀರ್ಥ ಸಾಲಿ, ಪವನ್ ಭಟ್, ಆದಿತ್ಯ ಕಾರಂತ, ರಾಮಕೃಷ್ಣ ದಾಂಬ್ಳೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ರವೀಂದ್ರ ಶಾಂತಿ, ಪ್ರಭಾತ್ ಕಾಲೋನಿ ಸಾರ್ವಜನಿಕ ಗಣೇಶೋತ್ಸವ ಮಂಡಳ್ ಅಧ್ಯಕ್ಷ ಶೇಖರ್ ಜೆ.ಸಾಲಿಯಾನ್, ಸಮಾಜ ಸೇವಕರಾದ ವೈ.ಟಿ ಶೆಟ್ಟಿ, ಜಗದಾಂಬಾ ಶೆಟ್ಟಿ, ಎಸ್. ಸೌಭಾಗ್ಯ, ದೀಪಕ್ ಗಟ್ಟಿ, ಚಂದ್ರಕಾಂತ್ ಚೌಧುರಿ ಮತ್ತಿತರರು ಹಾಜರಿದ್ದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here