Saturday 10th, May 2025
canara news

ಸೂರ್ಯವಂಶ ಫೌಂಡೇಶನ್‍ನಿಂದ ಬಂಟ್ವಾಳ ಪೆÇೀಲೀಸ್ ಠಾಣೆಯಲ್ಲಿ ದೀಪಾವಳಿ ಆಚರಣೆ

Published On : 16 Nov 2020   |  Reported By : Rons Bantwal


ಪೆÇೀಲಿಸರೊಂದಿಗೆ ದೀಪಾವಳಿ ಆಚರಣೆ ಪ್ರೇರಣೆದಾಯಕ-ಡಿವೈಎಸ್‍ಪಿ ವಲೆಂಟಾಯ್ನ್

ಮುಂಬಯಿ (ಆರ್ ಬಿಐ), ನ.14: ಕಲಾವಿದರ ಮತ್ತು ಸಾಧಕರ ಜೊತೆಯಲ್ಲಿ ಪೆÇೀಲೀಸ್ ಇಲಾಖೆಯಲ್ಲಿ ದೀಪಾವಳಿ ಆಚರಣೆ ಮಾಡಿರುವುದು ಯಶಸ್ವಿ ಮತ್ತು ದಾಖಲೆಯ ಕಾರ್ಯಕ್ರಮವಾಗಿದೆ ಎಂದು ಡಿವೈಎಸ್‍ಪಿ ವಲೆಂಟಾಯ್ನ್ ಡಿಸೋಜ ಹೇಳಿದರು.

ಸೂರ್ಯವಂಶ ಫೌಂಡೇಶನ್ ಬಿಸಿರೋಡು ಕೈಕಂಬ ಸಂಸ್ಥೆ ವತಿಯಿಂದ ಅಧ್ಯಕ್ಷ ಪೆÇ್ರ| ಡಾ| ಕೆ. ಗೋವರ್ಧನ ರಾವ್ ನೇತೃತ್ವದಲ್ಲಿ ಬಿಸಿರೋಡ್‍ನ ಬಂಟ್ವಾಳ ನಗರ ಪೆÇೀಲೀಸ್ ಸ್ಟೇಷನ್‍ನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಿವೈಎಸ್‍ಪಿ ಡಿಸೋಜ ಮಾತನಾಡಿದರು.

ಪೆÇೀಲೀಸ್ ಇಲಾಖೆಯಲ್ಲಿ ಇಂತಹ ಕಾರ್ಯಕ್ರಮ ಪ್ರಥಮಆಗಿದ್ದು ಇದು ನಿಜಕ್ಕೂ ಮನಸ್ಸಿಗೆ ತುಂಬಾ ಖುಷಿ ನೀಡಿದೆ. ಪೆÇೀಲೀಸರೆಂದರೆ ಭಯ ಪಡುವ ಜನತೆಗೆ ಇದೊಂದು ಸಾಮರಸ್ಯದ ಸಂದೇಶವಾಗಿದೆ. ಪೆÇೀಲಿಸರೊಂದಿಗೆ ದೀಪಾವಳಿ ಆಚರಣೆ ಉತ್ತಮ ಹಾಗೂ ಇತರರಿಗೆ ಪ್ರೇರಣೆ ನೀಡುವ ಕಾರ್ಯಕ್ರಮ ಇದಾವಾಗಿದೆ ಎಂದು ಡಿವೈಎಸ್‍ಪಿ ವಲೆಂಟಾಯ್ನ್ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಹಾರೈಸಿದರು.

ಬಂಟ್ವಾಳ ನಗರ ಠಾಣಾ ಎಸ್‍ಐ ಅವಿನಾಶ್ ಮಾತನಾಡಿ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಕೆಲಸದ ಒತ್ತಡದ ಮಧ್ಯೆ ಇರುವ ಪೆÇೀಲಿಸರನ್ನು ಗುರುತಿಸಿ ದೀಪಾವಳಿ ಜೊತೆ ಗೌರವಿಸುವ ಮಾದರಿಯಾಗಿದೆ ಎಂದರು.

ದೀಪಿಕಾ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ಸೀತಾರಾಮ ಭಟ್ ಅತಿಥಿü ಅಭ್ಯಾಗತರಾಗಿದ್ದು ಮಾತನಾಡಿ ಸಮಾಜಿಮುಖಿ ಕಾರ್ಯಗಳ ಜೊತೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಶ್ಲಾಘನೀಯ. ವಿದೇಶದಲ್ಲಿ ದುಡಿದು ಅನೇಕ ಡಾಕ್ಟರೇಟ್ ಪದವಿ ಗಳನ್ನು ಪಡೆದ ಗೋವರ್ಧನ ಅವರು ವಿದೇಶಿ ಸಂಸ್ಕ್ರತಿ ಗೆ ಮಾರುಹೋಗದೆ ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆ ಎಂದರು.

ಅಮೃತಾ ಪ್ರಕಾಶನ ಮಾಸಿಕ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಮಾತನಾಡಿ ವಿನೂತನ ಹಾಗೂ ಸಮಾಜಿ ಮುಖಿ ಕಾರ್ಯಕ್ರಮ, ಅಜ್ಞಾನ ಹೋಗಲಾಡಿಸಿ ಜ್ಞಾನದ ದೀವಿಗೆಯನ್ನು ಉದಯಿಸಲಿ ಎಂದು ಹೇಳಿದರು.

ವೇದಿಕೆಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್‍ಐ ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್.ಐ ಕಲೈಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಡಾ| ಅಶೋಕ್ ಕುಮಾರ್, ಕನ್ನಡ ನಟಿ ಅಕ್ಷತಾ, ಉಮಾ ಗೋವರ್ಧನ ರಾವ್, ಪಜ್ವಲ್ ಗೋವರ್ಧನ ರಾವ್, ಪ್ರತೀಕ್ಷಾ ಗೋವರ್ಧನ ರಾವ್ ಮತ್ತಿತರರು ಉಪಸ್ಥಿತರಿದ್ದು ಇದೇ ಸಂದರ್ಭದಲ್ಲಿ ಪೆÇೀಲಿಸು ಅಧಿಕಾರಿಗಳಾದ ವಲೆಂಟಾಯ್ನ್ ಡಿಸೋಜ, ಅವಿನಾಶ್, ಪ್ರಸನ್ನ, ಕಲೈಮಾರ್ ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಪೆÇೀಲಿಸು ಸಿಬ್ಬಂದಿ ವಿವೇಕ್ ಸ್ವಾಗತಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here