Wednesday 1st, May 2024
canara news

ಒಂದು ದೀಪ ಸೈನಿಕರಿಗಾಗಿ-ಒಂದು ದೀಪ ಲೋಕದ ಸಮಸ್ತರ ಅರೋಗ್ಯ ಕಲ್ಯಾಣಕ್ಕಾಗಿ ಹಚ್ಚಿ

Published On : 19 Nov 2020   |  Reported By : Rons Bantwal


ಮೂಡುಬಿದಿರೆ ಜೈನ ಕಾಶಿಯಲ್ಲಿ ಹೊಸ ವರ್ಷ ಹಾಗೂ ದೀಪಾವಳಿ ಆಚರಣೆ

ಮುಂಬಯಿ (ಆರ್‍ಬಿಐ),ನ.17: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಜೈನಕಾಶಿಯಲ್ಲಿ ದಿಗಂಬರ ಜೈನ ಸಂಸ್ಥಾನ ಮಠದ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ಕಳೆದ ರವಿವಾರ ಕಾರ್ತಿಕ ಮಾಸದ ಅಮಾವಾಸ್ಯೆಯಂದು (ದೀಪಾವಳಿಯ ಅಮಾವಾಸ್ಯೆ) ಬೆಳಗಿನ ಜಾವ ಭಗವನ್ ಮಹಾವೀರ ಸ್ವಾಮಿಯು ನಿರ್ವಾಣ(ಮುಕ್ತ)ರಾದ ಸಮಯಕ್ಕೆ ಸರಿಯಾಗಿ ಚತುರ್ದಶಿ ಮುಂಜಾನೆ ಜೈನ ಕಾಶಿಯ ಬಸದಿಗಳಲ್ಲಿ ದೀಪಾವಳಿ ಮತ್ತು ಹೊಸ ವರ್ಷ ಆಚರಿಸಲಾಯಿತು.

ಅರ್ಗ್ಯ ಎತ್ತೊಣ ಅವರ ಸಮವಸರಣದಲ್ಲಿ ಪ್ರಮುಖರಾಗಿದ್ದ ಗೌತಮ ಗಣಧರರು ಕೇವಲಜ್ಞಾನ (ಸರ್ವಜ್ಞತ್ವ) ಪಡೆದರು. ಈ ಜ್ಞಾನಜ್ಯೋತಿಯ ಪ್ರತೀಕವಾಗಿ ಜೈನಬಾಂಧವರು ಬೆಳಗಿನ ಜಾವ ವಿವಿಧ ಮೂಡುಬಿದಿರೆ ಯ ಬಸದಿಗಳಲ್ಲಿ ಭಗವಾನ್ ಮಹಾವೀರ ಸ್ವಾಮಿ ಮುಕ್ತಿ ಪಡೆದ ದಿನವಾದ ದೀಪಾವಳಿ ಚತುರ್ದಶಿ ಯಂದು ಪ್ರಥಮ ತೀರ್ಥಂಕರ ವೃಷಭನಾಥ ರಿಂದ ಕೊನೆಯ ತೀರ್ಥಂಕರ ಮಹಾವೀರ ಸ್ವಾಮಿ ನಾಮ ಉಚ್ಚರಿಸಿ ಶ್ರೀ ಮಠದಲ್ಲಿ ಪೀಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಪಂಡಿತಾಚಾರ್ಯರು ಅರ್ಗ್ಯಯೆತ್ತಿ ನಂತರ ಬೆಟ್ಟ ಕೇರಿ, ಬಸದಿ ಶೆಟ್ರ ಬಸದಿಗಳಲ್ಲೂ ಅರ್ಗ್ಯ ಎತ್ತಿ ಬಸದಿ ದರ್ಶನ ಮಾಡಿದರು.

ಈ ಶುಭಾವಸರದಲ್ಲಿ ಮೂಡುಬಿದಿರೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಬಂದ ಸಮಾಜ ಬಾಂಧವರು, ಪೇಟೆಯ ಭಕ್ತಾದಿಗಳು ಸಂಖ್ಯೆಯಲ್ಲಿ ಶ್ರೀ ಮಠ ಹಾಗೂ ಬಸದಿ ನಿರ್ವಾಣ ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರಾವಿಕೆಯರು ದೀಪವನ್ನು ಬೆಳಗಿ ಅರ್ಗ್ಯ ಎತ್ತಿ ಸಂಭ್ರಮಿಸಿದರು. ಸಾವಿರ ಕಂಬ ಬಸದಿಯಲ್ಲಿ ಸಂಜೆ ಶ್ರೀ ಜೈನ ಮಠದ ಶ್ರೀಗಳ ವತಿಯಿಂದ ಭಗವಾನ್ ಚಂದ್ರಪ್ರಭ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಸೋಮವಾರ ಬಲಿಪ್ರತಿಪದ, ದೀಪವಳಿ ಪಾಡ್ವ ದಿನ ಹೊಸ ದೀಪಹಚ್ಚಿ 2547 ಮಹಾವೀರ ಸ0ವತ್ಸರ ಹೊಸ ವರ್ಷ ಆಚರಿಸಲಾಯಿತು. ಜೈನ ಪೇಟೆಯಲ್ಲಿ ಶ್ರಾವಕರು ಮನೆ ಮನೆ ಭೇಟಿ ನೀಡಿದ ಬಸದಿ ಅರ್ಚಕರಿಗೆ ಸಂಪ್ರದಾಯನುಸಾರ ದಾನ ಕರ್ತವ್ಯದಂತೆ ಪಂಚಾಮೃತ ಸಾಮಗ್ರಿ ವಿತರಣೆ ಮಾಡಲಾಯಿತು.

ಈ ವರ್ಷ ವಿಶಿಷ್ಟವಾಗಿ ದೀಪಾವಳಿ ಆಚರಿಸಿ ಒಂದು ದೀಪ ಸೈನಿಕರಿಗಾಗಿ ಒಂದು ದೀಪ ಸ್ವ ಧರ್ಮದ ರಕ್ಷಣೆ ಗಾಗಿ ಒಂದು ದೀಪ ಲೋಕದ ಸಮಸ್ತರ ಅರೋಗ್ಯ ಹಾಗೂ ಕಲ್ಯಾಣಕ್ಕಾಗಿ ಹಚ್ಚಿ ಸರ್ವರಿಗೂ ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ನೂತನ ವರ್ಷ ದೀಪಾವಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳ ಲಾಯಿತು. ಈ ಸಂದರ್ಭಲ್ಲಿ ಮಠದ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ಮತ್ತು ಅಪಾರ ಸಂಖ್ಯೆಯ ಶ್ರಾವಕ, ಶ್ರಾವಿಕೆಯರು ಉಪಸ್ಥಿತರಿದ್ದು ದೀಪಾವಳಿ ಸಂಭ್ರಮಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here