Tuesday 16th, April 2024
canara news

ಹೆಚ್.ಶಾಂತರಾಜ ಐತಾಳ ಅವರ `ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ' ಸಂಕಲನ ಕೃತಿ ಬಿಡುಗಡೆ

Published On : 21 Nov 2020   |  Reported By : Rons Bantwal


ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಅತೀ ಮುಖ್ಯ- ಪೇಜಾವರ ವಿಶ್ವಪ್ರಸನ್ನತೀರ್ಥಶ್ರೀ

ಮುಂಬಯಿ (ಆರ್‍ಬಿಐ), ನ.19: ಸಂಭೋದನೆಅಥವಾ ಸಂವಹನ ಅಲ್ಲದೆ ಸಾಹಿತ್ಯಕೃತಿರಚನೆಯಲ್ಲೂ ವ್ಯಾಕರಣಬದ್ಧವಾದ ಭಾಷಾ ಶುದ್ಧತೆಅತ್ಯಂತ ಪ್ರಮುಖವಾದುದು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ತಿಳಿಸಿದರು.

ಇತ್ತೀಚೆಗೆ ಮಂಗಳೂರುನಲ್ಲಿ ನಡೆದ ಹೆಚ್.ಶಾಂತರಾಜ ಐತಾಳ ಅವರ `ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ' ಸಂಕಲನ ಕೃತಿ ಬಿಡುಗಡೆ ಗೊಳಿಸಿ ಶುಭಾರೈಸಿ ಪೇಜಾವರಶ್ರೀ ನುಡಿದು ಇತ್ತೀಚಿನ ದಿನಗಳಲ್ಲಿ ಭಾಷಾ ಶುದ್ಧತೆಯ ಕೊರತೆ ಎದ್ದುಕಾಣುತ್ತಿದೆ. ಇದು ಖೇದನೀಯ ಎಂದರು. ಐತಾಳರು ತನ್ನ ನಿವೃತ್ತಿ ಜೀವನವನ್ನು ಸಾಹಿತ್ಯ ಕೃತಿ ರಚನೆಗೆ ಅದರಲ್ಲೂ ಪ್ರಮುಖವಾಗಿ ಪರಿಸರ, ಬಳಕೆದಾರರ ಜಾಗೃತಿ, ಪ್ರವಾಸಕಥನ ಆಡಳಿತಾತ್ಮಕ ಲೋಪಗಳು ಮತ್ತುಅಭಿವೃದ್ಧಿ ಪರಚಿಂತನೆಗೆ ತೊಡಗಿಸಿಕೊಂಡು ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಶ್ಲಾಘಿಸಿದರು.

 

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ| ಪಿ.ಎಸ್ ಎಡಪಡಿತ್ತಾಯ ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ ತುಂಬಾ ಮೌಲ್ಯಯುತ ಚಿಂತನೆಯುಳ್ಳ ಬರಹಗಾರರಾದ ಶಾಂತರಾಜ ಐತಾಳರ ಸಾಹಿತ್ಯವು ಶಾಲಾ ಕಾಲೇಜು ವಿದ್ಯಾಥಿರ್üಗಳಿಗೆ ಅಧ್ಯಯನ ಯೋಗ್ಯವಾಗಿವೆ. ವೈಜ್ಞಾನಿಕ ಹಾಗೂ ವಿಮರ್ಶಾತ್ಮಕ ಬರಹಗಳು ಅಧಿಕೃತ ದಾಖಲೆ ಸಹಿತ ಒಳಗೊಂಡಿದ್ದು ಅವರಚಿಂತನೆ ಶ್ರೇಷ್ಠ ಮಟ್ಟದ್ದಾಗಿದೆ ಎಂದರು.

ದ.ಕ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಂತರಾಜ ಐತಾಳರು ಅನೇಕ ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ತನ್ನ ಚಿಕಿತ್ಸಕ ಮತ್ತು ಹಾಸ್ಯ ಮನೋಭೂಮಿಕೆಯ ಲೇಖನಗಳನ್ನು ಪ್ರಕಟಿಸಿ ಸಮಾಜಮುಖಿ ಜಾಗೃತಿ ಸಂದೇಶಗಳನ್ನು ನೀಡಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲೂ ಪ್ರತಿನಿತ್ಯ ಹಸ್ತಲೇಖನಗಳನ್ನು ಬರೆದು ವಾಟ್ಸಪ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ. ನಿವೃತ್ತ ಜೀವನವನ್ನು ಸಾಹಿತ್ಯ ರಚನೆಗಾಗಿ ಮುಡಿಪಾಗಿಟ್ಟಿರುವ ಅವರ ಜೀವನ ಸಾಧನೆ ಅನನ್ಯವಾದುದು ಎಂದರು.

ಕೃತಿಕಾರ ಶಾಂತರಾಜ ಐತಾಳ ಮತ್ತು ಕುಟುಂಬಸ್ಥರು ಈ ಸಂಧರ್ಭಉಡುಪಿ ನೀಲಾವರದ ಗೋಶಾಲೆಗೆ ರೂ.25000 ನೀಡುವ ಮೂಲಕ ಧನ್ಯತೆ ಸೂಚಿಸಿದರು. ಸಂಸ್ಕಾರ ಭಾರತಿ ಉಡುಪಿ ಇಲ್ಲಿನ ವಾಸುದೇವ ಭಟ್ ಪೆರಂಪಳ್ಳಿ ಕೃತಿ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪೆÇ್ರ| ಎಂ.ಬಿ ಪುರಾಣಿಕ್, ಕಾಪೆರ್Çೀರೇಟರ್ ಶ್ರೀಮತಿ ಶಕಿಲಾ ಕಾವ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ರಜನಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ದಯಾನಂದ ಕಟೀಲು ನಿರೂಪಿಸಿದರು. ಡಾ| ಸಪ್ನಾ ಉಕ್ಕಿನಡ್ಕ ವಂದನಾರ್ಪನೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here