Wednesday 18th, May 2022
canara news

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿಗೈದ ಶಶಿಧರ ಬಿ.ಶೆಟ್ಟಿ

Published On : 24 Nov 2020   |  Reported By : Rons Bantwal


ಗುಜರಾತ್‍ನ `ಬರೋಡದಲ್ಲಿ ಕರ್ನಾಟಕ ಭವನ' ನಿರ್ಮಾಣಕ್ಕಾಗಿ ಮನವಿ


ಮುಂಬಯಿ (ಆರ್‍ಬಿಐ), ನ.21: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಭೇಟಿಗೈದರು.

 

ಕಳೆದ ಶುಕ್ರವಾರ ಸಂಜೆ ಬೆಂಗಳೂರು ಅಲ್ಲಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಗೈದು ಪುಷ್ಫಗುಚ್ಛವಿತ್ತು ಗೌರವಿಸಿ ಗುಜರಾತ್ ರಾಜ್ಯದ ಬರೋಡದಲ್ಲಿ ಕರ್ನಾಟಕ ರಾಜ್ಯದ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಕರ್ನಾಟಕ ಭವನ ನಿರ್ಮಾಣ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಗಣೇಶ್ ಪುದುವೆಟ್ಟು ಉಪಸ್ಥಿತರಿದ್ದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ, ಧೀಮಂತ ನಾಯಕ ಹಾಗೂ ಭಾರತದ ಮೊದಲ ಉಪಪ್ರಧಾನ ಮಂತ್ರಿ ಮತ್ತು ನಂತರ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸಂಯೋಜಿಸಿದ್ದ ಭಾರತದ ಉಕ್ಕಿನ ಮನುಷ್ಯ (ಐಯರ್ನ್‍ಮೆನ್) ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವರ್ಥ ಗುಜರಾತ್ ರಾಜ್ಯದ ಸರ್ದಾರ್ ಸರೋವÀರ್ ಡ್ಯಾಂ ಇಲ್ಲಿನ ಕೆವಾಡಿಯಾ ಇಲ್ಲಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ನಿರ್ಮಿತ 182 ಮೀಟರ್ ಎತ್ತರದ ಏಕತೆಯ ಪ್ರತಿಮೆ (ಸ್ಟಾ ್ಯಚು ಆಫ್ ಯೂನಿಟಿ) ಪ್ರತಿಮೆ 2019ರ ಕೊನೆಯಲ್ಲೇ ಸುಮಾರು 2.8 ಮಿಲಿಯನ್ ಪ್ರವಾಸಿಗರಿಂದ ವೀಕ್ಷಿಸಲ್ಪಟ್ಟಿತ್ತು. ವಿಶ್ವದ ಅತಿ ಎತ್ತರದ ಪ್ರತಿಮೆ ಎಂದೇ ಪ್ರಸಿದ್ಧಿಯಾದ ಒಂದು ಶಕ್ತಿಶಾಲಿ ಅತ್ಯಾದ್ಭುತ ಸಂದೇಶ ಸಾರುವ ಪ್ರತಿಮೆ ಇದಾಗಿದೆ. ಭಾವೀ ಜನಾಂಗಕ್ಕೆ ಅನುಕರನಿಯ ವ್ಯಕ್ತಿಯಾಗಿದ್ದು ಆದರ್ಶಪ್ರಾಯರಾಗಿರುವ ವಲ್ಲಭಭಾಯಿ ಪಟೇಲ್ ವ್ಯಕ್ತಿತ್ವವನ್ನು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ವೀಕ್ಷಿಸಲೇ ಬೇಕು. ಅದರಲ್ಲೂ ಕರ್ನಾಟಕದ ಜನತೆಯೂ ರಾಷ್ಟ್ರದ ಏಕತೆ ಸಾರುವ ಇಲ್ಲಿನ ರಮ್ಯ, ಪ್ರೇಕ್ಷಣೀಯ ಸ್ಥಳದಲ್ಲಿನ ಪ್ರತಿಮೆ ವೀಕ್ಷಿಸಲು ಅನುಕೂಕರ ಆಗಿರುವ ಈ ಪ್ರವಾಸೋದ್ಯಮ ತಾಣಕ್ಕೆ ಕನ್ನಡಿಗರೂ ಆಗಮಿಸುವ ನಿಟ್ಟಿನಲ್ಲಿ ಕರ್ನಾಟಕ ಭವನ ನಿರ್ಮಾಣ ಮಡುವರೇ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಶಶಿಧರ ಬಿ.ಶೆಟ್ಟಿ ಮನವರಿಸಿದರು.

ಬರೋಡಾದ ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ (ಸದ್ಯ ಬೆಳ್ತಂಗಡಿ ಶಕ್ತಿನಗರ ಮೂಲತಃ) ನಿವಾಸಿ ಆಗಿದ್ದರೂ ಸದ್ಯ ಗುಜರಾತ್ ಅಲ್ಲಿನ ಹೆಸರಾಂತ ತುಳು-ಕನ್ನಡಿಗ, ಯುವ ಸಂಘಟಕ ಶಶಿಧರ ಬಿ.ಶೆಟ್ಟಿ ಇವರು 2019ರಲ್ಲಿ ಗುಜರಾತ್‍ನಲ್ಲಿ ಅತಿವೃಷ್ಟಿಯಿಂದ ಜನತೆ ತತ್ತರಿಸಿದ್ದಾಗ ಸುಮಾರು 50 ಸಾವಿರ ಜನರ ವಾಸ್ತವ್ಯದ ಜಾಲಾವೃತ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಆಹಾರಪೆÇಟ್ಟಣ, ಲಕ್ಷಾಂತರ ಲೀಟರ್ ನೀರು ಬಾಟಲಿಗಳನ್ನು ನೀಡಿ ಅಭಯಸ್ತ ಚಾಚಿ ಮಾನವತೆ ಮೆರೆದಿರುವುದನ್ನು ಶಾಸಕ ಹರೀಶ್ ಪೂಂಜ ಇಲ್ಲಿ ನೆನಪಿಸಿದರು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here