Saturday 23rd, January 2021
canara news

ಮುಂಬಯಿ; ಪೇಜಾವರ ಮಠದಲ್ಲಿ ತುಲಸಿ ಪೂಜೆ ಆಚರಣೆ

Published On : 29 Nov 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ನ.27: ಸಾಂತಕ್ರೂಜ್ ಪೂರ್ವದಲ್ಲಿನ ಉಡುಪಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ತೀರಾ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಅಂತೆಯೇ ಕಳೆದ ಗುರುವಾರ ಅತಿರಿಕ್ತೋಪವಾಸ, ಚಾತುರ್ಮಾಸ್ಯ ಸಮಾಪ್ತಿ (ವೈಷ್ಣವ), ಉತ್ಥಾನ ದ್ವಾದಶಿ ತುಲಸಿ ಪೂಜಾ (ಸ್ಮಾರ್ತ) ತುಲಸಿಪೂಜೆಯನ್ನು ವಿಧಿವತ್ತಾಗಿ ಆಚರಿಸಲ್ಪಟ್ಟಿತು.


ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯಲ್ಲಿನ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಸಂಜೆ ಅಲಂಕೃತ ಗೊಳಿಸಲ್ಪಟ್ಟ ತುಲಸಿಕಟ್ಟೆಗೆ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಮತ್ತು ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ ವಿಶೇಷವಾಗಿ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರನ್ನು ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಹರಿ ಭಟ್, ನಿರಂಜನ್ ಗೋಗ್ಟೆ, ಪುರೋಹಿತರನೇಕರು ಸೇರಿದಂತೆ ಕೆಲವೊಂದು ಭಕ್ತರು ಪಾಲ್ಗೊಂಡು ದೀಪೆÇೀತ್ಸವದ ಕೊನೆಯ ದಿನವನ್ನು ಸಂಹ್ರಮಿಸಿದರು.

 
More News

ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಸಾದ್ವಿಯರ ಪುರಪ್ರ್ರವೇಶ
ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಸಾದ್ವಿಯರ ಪುರಪ್ರ್ರವೇಶ
ಸಚಿವದ್ವಯರ ಧರ್ಮಸ್ಥಳ ಭೇಟಿ
ಸಚಿವದ್ವಯರ ಧರ್ಮಸ್ಥಳ ಭೇಟಿ
5ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
5ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

Comment Here