Thursday 25th, April 2024
canara news

ಕರಾಟೆ ಪಟು ಸಿಜೊ ಬ್ರೂಸ್ ಲೀ 80-ಜನ್ಮದಿನ ಸಂಭ್ರಮಿಸಿದ ಚಿತಾ ಯಜ್ಞೇಶ್

Published On : 29 Nov 2020   |  Reported By : Rons Bantwal


ಬ್ರೂಸ್ ಲೀ ಸ್ಪಿರಿಟ್ ವಿಶ್ವದಿಂದ ಕೋವಿಡ್ ದುಂಡಿಗೆ ಒದೆದು ವಿಶಿಷ್ಟ ರೀತಿಯಲ್ಲಿ ಆಚರಣೆ

ಮುಂಬಯಿ (ಆರ್‍ಬಿಐ), ನ.28: ಚಿಟಾ ಜೀತ್ ಕುನೆ ದೊ ಗ್ಲೋಬಲ್ ಸ್ಪೋರ್ಟ್ಸ್ ಫೆಡರೇಶನ್‍ನ ಅಧ್ಯಕ್ಷ ಮತ್ತು ಬಾಲಿವುಡ್‍ನ ಜನಪ್ರಿಯ ನಿರ್ಮಾಪಕ, ಸಮರ ಕಲಾತಜ್ಞ ಚಿತಾ ಯಜ್ಞೇಶ್ ಸಾರಥ್ಯದಲ್ಲಿ ಕ್ಯಾಲಿಫೆÇೀರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದ ಚೈನಾಟೌನ್ ಪ್ರದೇಶದಲ್ಲಿ ಜನಿಸಿ ವಿಶ್ವದ ಹೆಸರಾಂತ ಸಮರ ಕಲಾ ಸಾಧಕ, ಕರಾಟೆ ಪಟು ನಾಮಾಂಕಿತ ಬ್ರೂಸ್ ಲೀ ಅವರ 80ನೇ ಜನ್ಮ ದಿನಾಚರಣೆ ಕಳೆದ ಶುಕ್ರವಾರ (ನ.27) ಅಂಧೇರಿ ಪಶ್ಚಿಮದ ಯಜ್ಞೇಶ್ ಅಕಾಡೆಮಿಯಲ್ಲಿ ಆಚರಿಸಲಾಯಿತು.

ಸಾಮಾಜಿಕ ಅಂತರ, ಸ್ವ ಸುರಕ್ಷತೆ, ಮುಖವಾಡ ಧರಿಸುವಿಕೆ ಮೂಲಕ ಕೋವಿಡ್ ರೋಗವನ್ನು ಹೇಗೆ ಓಡಿಸಬೇಕು ಎಂಬುದನ್ನು ಅರಿವು ಮೂಡಿಸಿ ಸ್ಯಾನಿಟೈಜರ್‍ಗಳ ಬಳಕೆ, ಸಾಮಾಜಿಕ ಅಂತರ ಕಾಪಾಡುವಿಕೆ ಇತ್ಯಾದಿಗಳ ಜಾಗೃತಿ ಮೂಡಿಸಿ ಈ ಬಾರಿ ಜಾಗತಿಕವಾಗಿ ಪಸರಿಸಿದ ಕೋವಿಡ್ ಸಾಂಕ್ರಮಿಕ ರೋಗ ನಿರ್ಮೂಲನೆಗಾಗಿ ಕೋವಿಡ್ ದುಂಡಿಗೆ ಕರಾಟೆ ಶೈಲಿಯಲ್ಲಿ ಲತ್ತೆಕೊಟ್ಟು (ಒದೆತ) ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಚಿತಾ ಯಜ್ಞೇಶ್ ಕಳೆದ 12 ವರ್ಷಗಳಿಂದ ವೈವಿಧ್ಯತೆಗಳಿಂದ ಬ್ರೂಸ್ ಲೀ ಜನ್ಮ ದಿನಾಚರಣೆ ಆಚರಿಸುತ್ತಿದ್ದು ಈ ಬಾರಿ ತ್ರಿಶಾನ್ ಶೆಟ್ಟಿ, ಹಾಂಗ್ ಕಾಂಗ್‍ನ ವಿಲಿಯಂ ಬಾಂಡ್, ಚೀತಾ ಯಜ್ಞೇಶ್ ಮತ್ತು ಮಕ್ಕಳು ಉಪಸ್ಥಿತರಿದ್ದು ಬ್ರೂಸ್ ಲೀ ಅವರ ಬೃಹತ್ ಪೆÇೀಸ್ಟರ್‍ನ್ನು ಅನಾವರಣ ಗೊಳಿಸಿ ಬ್ರೂಸ್ ಲೀ ಪರಾಕ್ರಮ ಮನವರಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತ 50ಕ್ಕೂ ಹೆಚ್ಚು ಹಿಂದುಳಿದ ಮಕ್ಕಳಿಗೆ ಫೇಸ್ ಮಾಸ್ಕ್, ಪುಸ್ತಕಗಳು, ಬಟ್ಟೆ ಮತ್ತು ಆಹಾರ ಪ್ಯಾಕೆಟ್‍ಗಳನ್ನು ನೀಡಲಾಯಿತು.

ಚಿತಾ ಯಜ್ಞೇಶ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಹಿಂದಿನ ಬ್ರೂಸ್ ಲೀ ಅವರ ಜನ್ಮ ದಿನಾಚರಣೆಯನ್ನು ಜಾಗತಿಕ ತಾಪಮಾನ ಏರಿಕೆ, ಮಹಿಳಾ ಸಬಲೀಕರಣ, ಅರಣ್ಯ ರಕ್ಷಣೆ, ರಕ್ತದಾನ, ನಾರಿಯರ ಸ್ವರಕ್ಷಣೆ ತರಬೇತಿ, ಕೋವಿಡ್ ವಿರೋಧಿ ನಿಯಮಗಳ ಪುನರ್ವಸತಿ ವಿಷಯಗಳಿಗೆ ಸಮರ್ಪಿಸಲಾಗಿದೆ ಎಂದರು.

ಅಫಘಾನ್ ಬ್ರೂಸ್ ಲೀ, ಅಬ್ಬಾಸ್ ಅಲಿಜಾಡಾ, ಕಲ್ಮಾಕಿಯಾ ರಷ್ಯನ್ ಒಕ್ಕೂಟದ ಅಧ್ಯಕ್ಷ ಮತ್ತು ಫಿಡ್ (ಅಂತರರಾಷ್ಟ್ರೀಯ ಚೆಸ್ ಫೆಡರೇಶನ್) ಅಧ್ಯಕ್ಷ ಕಿರ್ಸನ್ ಇಲ್ಯುಮ್ಜಿನೋವ್, ಸಿಫು ಕಾಸ್ಮೊ ಜಿಮಿಕ್, ನಂಬಾ, ಇಡಾಹೊ ಮತ್ತು ಖಾಲಿ ಕೈ ಯುದ್ಧ, ಯುಎಸ್‍ಎ, ಸ್ಟೀಫನ್ ಚಾಪೆÇೀವ್ಸ್ಕಿ, ನ್ಯಾಚುರಲ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಆಫ್ ರಷ್ಯಾ ಮತ್ತು ಸಿಫು ಫಿಲ್ ರಾಸ್, ಅಮೇರಿಕನ್ ಈಗಲ್ ಎಂಎಂಎ ಮತ್ತು ಕೆಟಲ್ ಬೆಲ್ಸ್, ನ್ಯೂಜೆರ್ಸಿ, ಯುಎಸ್‍ಎ ಮತ್ತಿತರ ರಾಷ್ಟ್ರಗಳಲ್ಲಿನ ಬ್ರೂಸ್ ಲೀ ಅಭಿಮಾನಿಗಳು ಸೇರಿದಂತೆ ದೇಶವಿದೇಶಗಳಲ್ಲಿನ ಹಲವಾರು ಗಣ್ಯರು ಭಾರತದಲ್ಲಿ ಬ್ರೂಸ್ ಲೀ ಅವರ ಜನ್ಮದಿನಾಚರಣೆ ಆಚರಿಸುತ್ತಿರುವುದಕ್ಕಾಗಿ ಚಿತಾ ಯಜ್ಞೇಶ್ ಅವರಿಗೆ ಶುಭಾಶಯ ಕೋರಿದರು.

ಉಡುಪಿ ನಿಂಜೂರು ಇಲ್ಲಿ ಶ್ರೀನಿವಾಸ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ಸುಪುತ್ರರಾಗಿ ಜನಿಸಿದ ಚಿತಾ ಯಜ್ಞೇಶ್ ಶೆಟ್ಟಿ ಓರ್ವ ನಟ, ನಿರ್ದೇಶಕ, ನಿರ್ಮಾಪಕ ಸಮರ ಕಲಾವಿದ ಮತ್ತು ಫಿಟ್ನೆಸ್ ತರಬೇತುದಾರರಾಗಿ ಜಾಗತಿಕವಾಗಿ ಗುರುತಿಸಿ ಕೊಂಡಿರುವರು. ಚಿರತೆ ಭಂಗಿಯಿಂದ ಆಕರ್ಷಿತನಾದ ಕಾರಣ ಚಿರತೆಯ ನಾಮವನ್ನೇ ಪೂರ್ವಪ್ರತ್ಯಯವಾಗಿ ಸೇರಿಸಿರುವ ಯಜ್ಞೇಶ್ ಸಮರ ಕಲೆಗಳಲ್ಲಿ ವಿವರವಾದ ಅಧ್ಯಯನ ಮಾಡಿ ಹೊಸ ಶೈಲಿಯನ್ನು ಪರಿಚಯಿಸಿರುವರು.ಅಲ್ಟ್ರಾ-ಲೆಜೆಂಡ್ ಕರಾಟೆ ಚಾಂಪಿಯನ್ ಬ್ರೂಸ್ ಲೀ ಅವರಿಗೆ ಗೌರವವಾಗಿ ಸಮರ ಕಲೆಗಳನ್ನು ಆಧರಿಸಿದ ಹಾಲಿವುಡ್ ಚಲನಚಿತ್ರ ಹಿ ಈಸ್ ಬ್ಯಾಕ್ ನಿರ್ದೇಶಿಸಿದ್ದಾರೆ. ಯುಎಸ್ ಮಾರ್ಷಲ್ ಆರ್ಟ್ಸ್ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಭಾರತೀಯ ಸ್ಟಂಟ್ ಮ್ಯಾನ್ ಎಂದೆಣಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here