Saturday 10th, May 2025
canara news

ಡಿ.12: ಮಂಗಳೂರುನಲ್ಲಿ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Published On : 29 Nov 2020   |  Reported By : Rons Bantwal


ಎನ್.ಪಿ ಸುವರ್ಣ-ಪ್ರಭಾ ಸುವರ್ಣ ಮುಂಬಯಿ ಪ್ರಾಯೋಜಕತ್ವದಲ್ಲಿ ರಂಗೋಲಿ ಸ್ಪರ್ಧೆ

ಮುಂಬಯಿ (ಆರ್‍ಬಿಐ), ನ.27: ಹೃದಯವಾಹಿನಿ ಮಂಗಳೂರು ಮತ್ತು ಎಸ್. ಕೆ ಮುನಿಸಿಪಲ್ ಎಂಪ್ಲಾಯ್ಸ್ ಯೂನಿಯನ್ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ ಬರುವ ಡಿ.12ನೇ ಶನಿವಾರ ಒಂದು ದಿನದ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ .

ಆ ಪ್ರಯುಕ್ತ ಮಹಿಳೆಯರಿಗೆ ಮತ್ತು ಯುವತಿಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಡಿ.12ನೇ ಶನಿವಾರ ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆ ವರೆಗೆ ಪುರಭವನ ಮಂಗಳೂರು ಇಲ್ಲಿ ನಡೆಯಲಿರುವುದು .16 ವರ್ಷದಿಂದ 60 ವರ್ಷಗಳೊಳಗಿನ ಯುವತಿಯರು ಹಾಗೂ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.3000/-, ದ್ವಿತೀಯ ರೂ.1100/- ಹಾಗೂ ತೃತೀಯ ರೂ.1000/- ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಶಂಸನಾಪತ್ರ ನೀಡಲಾಗುವುದು. ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಹಾಗೂ ಸ್ಪರ್ಧೆಯ ವೇಳೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ನೋಂದಣಿಗೆ ಡಿ.7 ಕೊನೆಯ ದಿನವಾಗಿದೆ.

ರಂಗೋಲಿ ಬಿಡಿಸುವ ಕ್ಷೇತ್ರದ ಅಳತೆ 1.20ಮೀ x 1.20ಮೀ (4 ಅಡಿ x 4 ಅಡಿ) ಮಿತಿ ಒಳಗಿರಬೇಕು. ನೋಂದಾಯಿಸಿಕೊಳ್ಳಲು ಹೆಸರು ಮತ್ತು ವಿಳಾಸವನ್ನು 9886510087ವಾಟ್ಸಪ್‍ಗೆ ಕಳುಹಿಸಬೇಕು. ನೋಂದಣಿ ಖಚಿತ ಪಡಿಸಲು ಕ್ರಮಸಂಖ್ಯೆ ನಿಮ್ಮ ವಾಟ್ಸಪ್‍ಗೆ ಕಳುಹಿಸಲಾಗುವುದು. ಸೀಮಿತ ಸ್ಪರ್ಧಿಗಳಿಗೆ ಅವಕಾಶ ಇರುವುದರಿಂದ ಮೊದಲು ಹೆಸರು ನೀಡಿದವರಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧಿಗಳಿಗೆ ಬೆಳಿಗ್ಗೆ 8-30 ಗಂಟೆಗೆ ಉಪಹಾರದ ವ್ಯವಸ್ಥೆ ಇದೆ. ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣೆ ಮಧ್ಯಾಹ್ನ ನಡೆಸಲಾಗುವುದು. ಎನ್ .ಪಿ ಸುವರ್ಣ ಮತ್ತು ಪ್ರಭಾ ಸುವರ್ಣ ಮುಂಬಯಿ ಇವರು ರಂಗೋಲಿ ಸ್ಪರ್ಧೆಯ ಬಹುಮಾನದ ಪ್ರಾಯೋಜಕರಾಗಿರುವರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here