Saturday 10th, May 2025
canara news

ಮಣ್ಣನ್ನು ಜೀವಂತವಾಗಿಡಿ, ಜೀವ ವೈವಿಧ್ಯತೆ ಕಾಪಾಡಿ ವಿಶ್ವ ಮಣ್ಣಿನ ದಿನಾಚರಣೆ: ಐಐಎಚ್‍ಆರ್

Published On : 12 Dec 2020   |  Reported By : Rons Bantwal


ಮುಂಬಯಿ, ಡಿ.07: ಡಿಸೆಂಬರ್ 5 ನ್ನು ಪ್ರತಿವರ್ಷ ವಿಶ್ವ ಮಣ್ಣಿನ ದಿನ ಎಂದು ಆಚರಿಸಲಾಗುತ್ತಿದೆ. ಒಂದು ವೇಳೇ ಪರಿಸರ ಅಳಿದರೆ, ನಾಗರಿಕತೆ ನಿರ್ಗಮವಾದಂತೆ, ವಿಶ್ವದ ನಾಗರಿಕತೆ ಭೂಮಿಯ ಮೇಲ್ಪದರ ಹೊಂದಿರುವ ಕೋಟ್ಯಾಂತರ ಜೀವಾಣುಗಳ ಮೇಲೆ ಅವಲಂಬಿತವಾಗಿದೆ. ಇಂತಹ ಮಣ್ಣನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿಜಾಗೃತಿ ಮೂಡಿಸಲು ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ವರ್ಷ ಪ್ರತಿ ಉತ್ತಮ ಧ್ಯೇಯವಾಕ್ಯದೊಂದಿದೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಾಲಿನ ಧ್ಯೇಯ ವಾಕ್ಯ ಮಣ್ಣನ್ನು ರಕ್ಷಿಸಿ ಹಾಗೂ ಮಣ್ಣಿನ ಜೀವ ವೈವಿಧ್ಯತೆ ಕಾಪಾಡಿ ಎಂಬುದಾಗಿತ್ತು.

ಬೆಂಗಳೂರಿನ ಹೊರವಯಲದ ಹೆಸರ ಘಟ್ಟದಲ್ಲಿರುವ ಐಸಿಎಆರ್ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‍ಆರ್)ಇಲ್ಲಿ ಅರ್ಥಪೂರ್ಣವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಧ್ಯಕ್ಷತೆ ಸಂಸ್ಥೆಯ ನಿರ್ದೇಶಕ ಡಾ| ಎಂ.ಆರ್ ದಿನೇಶ್ ಅವರ ಮಣ್ಣು ಆರೋಗ್ಯ ಹಾಗೂ ಸಸ್ಯಗಳ ಆರೋಗ್ಯ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಸ್ವಾಭಾವಿಕವಾಗಿ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಮಾನವನ ಆತಿ ಆಸೆ ಹಾಗೂ ಸ್ವಾರ್ಥದ ಕೃತ್ಯಗಳಿಂದಾಗಿ ಪರಿಸರ ಅಸಮತೋಲನೆಗೆ ನಾವೇ ಕಾರಣ. ರಾಸಾಯನಿಕಗಳ ಬಾಳಿಕೆ ಕಡಿಮೆಗೊಳಿಸಿ, ಮೇಲ್ಮಣ್ಣನ್ನು ರಕ್ಷಿಸಿ ಸುಸ್ಥಿರತೆ ಕಾಪಾಡಲು ಸಲಹೆ ನೀಡಿದರು. ಐಐಎಚ್‍ಆರ್ ವತಿಯಿಂದ ಪ್ರತಿ ವರ್ಷ ನೀಡುವ ರೈತರ ಮಣ್ಣು ಆರೋಗ್ಯ ಪತ್ರ ಬೆಳೆಗಳನ್ನು ಕಾಪಾಡಲು ಅನುಕೂಲಕರ ಎಂದರು.

ವೆಬಿನಾರ್ ಮುಖೇನ ವಿಷಯ ಮಂಡಿಸಿದ ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್ ವಿನಯಕುಮಾರ್ ನಾವೂ ಸ್ವಾಭಾವಿಕ ಸಂಪನ್ನೂಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವಾತಾವರಣದ ಬದಲಾವಣೆಯಿಂದ ಹವಾವಾ ಸ್ಮರಣೆ ಶಕ್ತಿ ಕುಂದುತ್ತಿದೆ. ನಮ್ಮ ದೇಶದಲ್ಲಿ ಈಗಾಗಲೇ 33% ರಷ್ಟು ಮಣ್ಣುಗಳನ್ನು ಅವನತಿ ಹೊಂದಿವೆ. ಹೀಗೆ ಮುಂದುವರೆದರೆ 2050ರ ಹೊತ್ತಿಗೆ 90% ರಷ್ಟು ಮಣ್ಣು ನಿಳ್ವಯೋಜಕವಾಗುತ್ತದೆ. ಸಂರಕ್ಷಿಸುವ ಕಾಯ್ದೆ ಬಲಿಷ್ಠಗೊಳ್ಳಬೇಕು. ಜನರಲ್ಲಿ ಅರಿವು ಮೂಡಲೇ ಬೇಕಿದೆ ಎಂದರು.

ಐಐಎಚ್‍ಆರ್ ನ ಮಣ್ಣು ಹಾಗೂ ಸ್ವಾಭಾವಿಕ ಸಂಪನ್ನೂಲ ವಿಭಾಗದ ಮುಖ್ಯಸ್ಥರಾದ ಡಾ| ಎಚ್.ಬಿ ರಘಪತಿ ಅವರು ವಿಶ್ವ ಮಣ್ಣು ದಿನಾಚರಣೆಯ ಮೂಲ ಉದ್ದೇಶ ಹಾಗೂ ಸಂಸ್ಥೆಯ ಚಟುವಟಿಕೆಯ ಬಗ್ಗೆ ವಿವರಿಸಿದರು. ಡಾ| ಜಿ.ಸಿ ಸತೀಶ್ ಪ್ರಧಾನಿವಿ ಪ್ರಸ್ತಾವಣೆಗೈದು ಈ ವರ್ಷಗಳಲ್ಲಿ 2000 ಆರೋಗ್ಯ ಪತ್ರ ವಿತರಿಸಿದ್ದನ್ನು ತಿಳಿಸಿದರು. ಡಾ| ಕೆ.ಎಸ್ ಶಿವಶಂಕರ್, ಡಾ| ರೂಪಾ, ಡಾ| ಸ್ಮಿತಾ, ಡಾ| ಕಲೈ ವಣ್ಣನ್, ಡಾ| ಬಿ.ನಾರಾಯಣ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here