Saturday 20th, April 2024
canara news

ಡಿ.23ರಿಂದ 30, ಮಹಾಶಿಬಿರ: 800 ವರ್ಷಗಳ ದಿವ್ಯ ಪರಂಪರೆಯ ಹಿಮಾಲಯ ಧ್ಯಾನದ ಅನುಭವ ಪಡೆಯಲು ಗುರುತತ್ವದಿಂದ ಉಚಿತ ಅನ್‍ಲೈನ್ ಕಾರ್ಯಕ್ರಮ.

Published On : 20 Dec 2020   |  Reported By : Rons Bantwal


ಮುಂಬಯಿ, (ಆರ್‍ಬಿಐ), ಡಿ.15: 2020 ಮುಗಿಯುತ್ತಾ ಬಂದರೂ ಕೊರೊನಾ ಮಹಾಮಾರಿಯೊಂದಿಗಿನ ಹೋರಾಟವು ಮುಗಿಯುವ ಲಕ್ಷಣಗಳಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಯಮಿತ ಧ್ಯಾನ ಸಾಧನೆ ಮಾಡುವುದೇ ಉತ್ಸಾಹ ಮತ್ತು ಶಾಂತಿಯಿಂದಿರುವ ಮಾರ್ಗವಾಗಿದೆ. ಹಿಮಾಲಯ ಧ್ಯಾನ ಪದ್ಧತಿಯು 800 ವರ್ಷಗಳ ಪರಂಪರೆಯ, ಎಲ್ಲರೂ ಅಭ್ಯಾಸ ಮಾಡಬಲ್ಲ ಸರಳ ಸಂಸ್ಕಾರವಾಗಿದೆ. ಬೇರೆ ಧ್ಯಾನ ಪದ್ಧತಿಗಳಲ್ಲಿರುವಂತೆ ಇದರಲ್ಲಿ ಯಾವುದೇ ಶ್ವಾಸೋಚ್ಛ್ವಾಸದ ಕಠಿಣತೆಯೋ, ಯೋಗಾಭ್ಯಾಸವೋ ಇರುವುದಿಲ್ಲ. ಪ್ರಾರಂಭದಿಂದಲೂ ಗುರುತತ್ವವು ಈ ದಿವ್ಯ ಜ್ಞಾನ ಮತ್ತು ಅನುಭವವನ್ನು ಜಗತ್ತಿನೊಂದಿಗೆ ಉಚಿತವಾಗಿ ಹಂಚಿಕೊಳ್ಳುತ್ತಿದೆ.

ಪರಮಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರ ನೇತ್ರತ್ವದಲ್ಲಿ ನಡೆಯುವ ಮಹಾಶಿಬಿರವು ಇದೇ ಬರುವ ಡಿಸೆಂಬರ್ 23ರಿಂದ 30ರ ವರೆಗೆ ಬೆಳಿಗ್ಗೆ 6.00 ರಿಂದ 8.00 youtube.com/gurutattva ಹಾಗೂ www.gurutattva.com ನಲ್ಲಿ ನೇರ ಪ್ರಸಾರ ನಡೆಯಲಿದೆ. ಈ ನೇರಪ್ರಸಾರದಲ್ಲಿ ಭಾಗವಹಿಸಲು ಸರ್ವರಿಗೂ ಆದರದ ಸ್ವಾಗತ. ಸಂಜೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಕಾರ್ಯಕ್ರಮದ ಮರುಪ್ರಸಾರ ನಡೆಯಲಿದೆ. ಮಹಾಶಿಬಿರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ನಿಯಮಿತವಾಗಿ Facebook ಹಾಗೂ Instagram@gurutattvameditation ನಲ್ಲಿ ನೀಡಲಾಗುವುದು.

ಗುರುತತ್ವವು ವಿವಿಧ ಕ್ಷೇತ್ರಗಳಲ್ಲಿರುವ ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಾಗತಿಕ ವೇದಿಕೆಯಾಗಿದೆ. ಹಿಮಾಲಯ ಯೋಗಿಯಾದ ಪರಮಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರು ಪವಿತ್ರವಾದ ಧ್ಯಾನ ಸಂಸ್ಕಾರದ ಮೂಲಕ ಜನರ ಆಧ್ಯಾತ್ಮಿಕ ಪ್ರಯಾಣವನ್ನು ಚುರುಕುಗೊಳಿಸಲು ಗುರುತತ್ವವು ಮಹಾಶಿಬಿರವನ್ನು ಅಯೋಜಿಸುತ್ತಿದೆ, ಪರಮಪೂಜ್ಯ ಸ್ವಾಮೀಜಿ ಅವರು 16 ವರ್ಷ ಹಿಮಾಲಯದಲ್ಲಿ ಕಳೆದು ಅನೇಕ ಗುರುಗಳ ಜ್ಞಾನವನ್ನು ಗಳಿಸಿ ಈಗ ಆ ಜ್ಞಾನವನ್ನು ಇತರಿಗೆ ಹಂಚುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ಡಾರೆ. ಸಮರ್ಪಣಾ ಧ್ಯಾನ ಯೋಗವು 1994ರಲ್ಲಿ ಪ್ರಾರಂಭವಾದಾಗಿನಿಂದಲೂ ಅವರಿ ಈ 800 ವರ್ಷ ಪರಂಪರೆಯ ದಿವ್ಯ ಜ್ಞಾನವನ್ನು ಪ್ರಪಂಚಕ್ಕೆ ಉಚಿತವಾಗಿ ಹಂಚುತ್ತಾ ಬಂದಿದ್ದಾರೆ.

ಆತ್ಮ ಸಾಕ್ಷಾತ್ಕಾರ ಹಾಗೂ ಆತ್ಮಾನಂದದ ಈ ಅತಿವಿರಳ online ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ. ಹೆಚ್ಚಿನ ಮಾಹಿತಿಗಾಗಿ Facebook ಹಾಗೂ Instagram@gurutattvameditation ಪೇಜ್ Like ಮತ್ತು Follow ಮಾಡಿ, ಕಾರ್ಯಕ್ರಮದ ಜ್ಞಾಪನೆ ಪಡೆಯಲು youtube.com/gurutattva ಗೆ subscribe ಆಗಿ ಹಾಗೂ ಬೆಲ್ ಐಕಾನ್ ಒತ್ತಿರಿ. ಆತ್ಮಾನಂದದ ಈಶ್ವರೀಯ ಪ್ರಯಾಣಕ್ಕೆ ಸರ್ವರು ಭಾಗವಹಿಸಬೇಕೇಂದು ಶ್ರೀ ಶಿಚಕೃಪಾನಂದ ಸ್ವಾಮೀಜಿ ಪ್ರತಿಷ್ಠಾನದ ನಿರ್ದೇಶಕ ಅಂಬರೀಷ್ ಮೊಡಕ್ ವಿನಂತಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here