Wednesday 24th, April 2024
canara news

ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪ್ರಥಮ ಆರಾಧ್ಯ ಮಹೋತ್ಸವ

Published On : 20 Dec 2020   |  Reported By : Rons Bantwal


ಶ್ರೀ ವಿಶ್ವೇಶತೀರ್ಥರ ಸೇವೆ ಶಾಶ್ವತವಾದದು:ರಾಮದಾಸ ಉಪಾಧ್ಯಾಯ

ಮುಂಬಯಿ, (ಆರ್‍ಬಿಐ)ಡಿ.17: ಶ್ರೀ ಮಧ್ವ ಭವನ ಮತ್ತು ಪೇಜಾವರ ಅಧೋಕ್ಷಜ ಮಠ ಮುಂಬಯಿ ವತಿಯಿಂದ ಕೃಷ್ಣೈಕ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪ್ರಥಮ ಆರಾಧ್ಯ ಮಹೋತ್ಸವ ಇಂದಿಲ್ಲಿ ಗುರುವಾರ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ಕೃಷ್ಣ ಸಾನಿಧ್ಯದಲ್ಲಿ ನಡೆಸಲಾಯಿತು.

ಪ್ರಥಮ ಆರಾಧಾನಾ ಪ್ರಯುಕ್ತ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ ಅವರು ವಾಯುಸ್ತುತಿ ಪುನಶ್ಚರಣಾ ಹೋಮ, ಅರ್ಚನೆ, ವಿಶೇಷ ಪೂಜಾಧಿಗಳನ್ನು ಹಾಗೂ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ವಿಷ್ಣು ಸಹಸ್ರನಾಮ ನೆರವೇರಿಸಿದರು. ಮಧ್ವೇಶ ಭಜನಾ ಮಂಡಳಿಯು ಭಜನೆಗೈದರು.

ನಂತರ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಮತ್ತು ಇತ್ತೀಚಿಗೆ ಚಿರಮೌನ ತಾಳಿದ ವಿದ್ಯಾವಾಚುಸ್ಪತಿ ಡಾ| ಬನ್ನಂಜೆ ಗೋವಿಂದಾರ್ಚಾ ಅವರಿಗೆ ಸಂಸ್ಮರಣಾ ಸಭೆ ನಡೆಸಲಾಯಿತು.

ಡಾ| ರಾಮದಾಸ ಉಪಾಧ್ಯಾಯ ಪ್ರಸ್ತಾವನೆಗೈದು ಕೃಷ್ಣೈಕ್ಯ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿಶ್ವೇಶತೀರ್ಥರು ಒಳ್ಳೆಯ ಶಿಷ್ಯರನ್ನು ನೀಡಿದ್ದಾರೆ. ಒಬ್ಬ ತಂದೆಗೆ ಒಬ್ಬ ಸುಪುತ್ರನಿದ್ದರೆ ಹೇಗೆ ಪ್ರತಿಷ್ಠೆ, ಗೌರವವೋ ಹಾಗೆಯೇ ಶ್ರೀ ವಿಶ್ವ ಪ್ರಸನ್ನು ತೀರ್ಥರು ಯತಿವರ್ಯ ಪೇಜಾವರ ಶ್ರೀಗಳವರಿಗೆ ಸಮಾನ ಉತ್ತರಾಧಿಕಾರಿಯನ್ನಾಗಿಸಿದ್ದಾರೆ. ಸಾಗರಕ್ಕೆ ಸಾಗರವೆ ಉಪÀಮ. ಪರ್ವತಕ್ಕೆ ಪರ್ವತವೇ ಉಪಮ ಎಂಬಂತೆ ಶ್ರೀ ವಿಶ್ವೇಶತೀರ್ಥರಿಗೆ ಅವರೇ ಉಪಮರಾಗಿದ್ದಾರೆ. ಅಂತಹ ಯತಿವರ್ಯರ ಸಾಧುತ್ವ ಬದುಕÀನ್ನು ವರ್ಣಿಸಲಸಾಧ್ಯ ಎಂದರು.

ಈ ಸಂದರ್ಭದಲ್ಲಿ ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಮುಂಬಯಿ ಸ್ಥಾಪಕಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡಿ ನುಡಿ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಪೇಜಾವರ ಮಠ, ಮುಂಬಯಿ)ಡಾ| ಎ.ಎಸ್ ರಾವ್, ಅವಿನಾಶ್ ಶಾಸ್ತ್ರಿ, ಬಿ.ಆರ್ ಗುರುಮೂರ್ತಿ, ಡಾ| ಮನೋಜ್ ಹುನ್ನೂರು, ವಿಕ್ರಾಂತ್ ಉರ್ವಾಲ್, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅನೇಕ ಪುರೋಹಿತರು, ಭಕ್ತಾದಿಗಳು ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here