Friday 28th, January 2022
canara news

ರಾಜ್ಯಪಾಲರು-ಸಂಸದರಿಂದ ಕೊರೊನಾ ವಾರಿಯರ್ಸ್ ಸಾಧಕರಿಗೆ ಗೌರವಾರ್ಪಣೆ

Published On : 09 Jan 2021   |  Reported By : Rons Bantwal


ಅಭಿನಂದನಾಕ್ಕೆ ಪಾತ್ರವಾದ ಬಂಟ್ಸ್ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್

ಮುಂಬಯಿ (ಆರ್‍ಬಿಐ), ಜ.07: ಭಾರತ ರಾಷ್ಟ್ರದಾದ್ಯಂತ ಹಬ್ಬಿದ್ದ ನೋವೆಲ್ ಕರೋನಾ (ಕೋವಿಡ್-19) ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಿ ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ವಾರಿಯರ್ಸ್ ಆಗಿಸಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ, ಕೊರೋನಾ ರೋಗಿಗಳಿಗೆ ಕೈಗೆಟುಕುವ ವೈದ್ಯಕೀಯ ಸೇವೆಗಳನ್ನು ಒದಗಿಸಿದ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರ ಸೇವಾಂಕ್ಷಿಗಳನ್ನು ಪವನ್ ಧಾಮ್ ಕೋವಿಡ್ ಕೇರ್ ಸೆಂಟರ್ ಬೋರಿವಲಿ ಮತ್ತು ಪೆÇಯಿಸರ್ ಜಿಮ್ಖಾನ ಸಂಸ್ಥೆಗಳು ಸನ್ಮಾನಿಸಿದವು.

ಇಂದಿಲ್ಲಿ ಬುಧವಾರ ಸಂಜೆ ಬೃಹನ್ಮುಂಬಯಿ ಮಲಬಾರ್‍ಹಿಲ್ ಇಲ್ಲಿನ ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ಸರ್ವೋತ್ಕೃಷ್ಟ ಸಂಸದ ಮಾನ್ಯತೆಗೆ ಪಾತ್ರರಾದ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಅವರ ಸಾರಥ್ಯದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಕೊರೊನಾ ವಾರಿಯರ್ಸ್ ಸಾಧಕರಿಗೆ, ಬೃಹನ್ಮುಂಬಯಿ ಅಲ್ಲಿನ ಬಂಟ್ಸ್ ಸಂಘ ಮುಂಬಯಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಪವನ್‍ಧಾಮ್ ಕೋವಿಡ್ ಡಾಕ್ಟರ್ಸ್ ಅವರಿಗೆ `ಜನಸೇವಾ ಸದ್ಭಾವನ ಪುರಸ್ಕಾರ' ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರ ನಿಸ್ವಾರ್ಥ ಕೆಲಸಕ್ಕಾಗಿ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು, ಭಾರತವು ಕೋವಿಡ್ ಪ್ರಕರಣಗಳನ್ನು ಕ್ಷೀಣಿಸಲು ಯಶಸ್ವಿಯಾಗಿದೆ, ಏಕೆಂದರೆ ವೈದ್ಯರು, ದಾದಿಯರು, ಪೆÇಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಸಂಘ, ಸಂಸ್ಥಗಳ ಮುಖ್ಯಸ್ಥರ ಮುಂದಾಳುತ್ವದಲ್ಲಿ ಕರೋನಾ ವಾರಿಯರ್ಸ್‍ನ ಸಮರ್ಪಿತ ಕಾರ್ಯದಿಂದಾಗಿ ಇದು ಸಾಧ್ಯವಾಗಿದೆ. ಅಂತೆಯೇ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಲೋಕೋಪಕಾರಿ ವ್ಯಕ್ತಿಗಳ ಮತ್ತು ಸ್ಥಾನೀಯ ಸಂಸ್ಥೆಗಳ ಹಗಲಿರುಳ ಪ್ರಯತ್ನ ಅನುಪಮವಾದುದು. ಒಂದು ಸಮಾಜವು ತ್ಯಾಗದ ಬಲ ಮತ್ತು ಸಮರ್ಪಿತ ಸೇವೆಯ ಮೇಲೆ ನಿಂತಿದೆ ಎಂದು ಪ್ರಸ್ತಾಪಿಸಿದ ರಾಜ್ಯಪಾಲರು, ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಬಂಟ್ಸ್ ಸಂಘ ಮುಂಬಯಿ ಮತ್ತು ಬಿಲ್ಲವರ ಅಸೋಸಿಯೇಷನ್‍ಗಳ ಪಾತ್ರವೂ ಮಹತ್ವಪೂರ್ಣವಾದದು ಎಂದರು.

ಬಂಟ್ಸ್ ಸಂಘ ಮುಂಬಯಿ ಇದರ ಹಾಲಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಮಾಜಿ ಅಧ್ಯಕ್ಷರುಗಳಾದ ಸುಧಾಕರ್ ಎಸ್.ಹೆಗ್ಡೆ, ಡಾ| ಪದ್ಮನಾಭ ವಿ.ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಹಾಲಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ವರದ್ ಉಳ್ಳಾಲ್, ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ಪೆÇಯಿಸರ್ ಜಿಮ್ಖಾನದ ಕರುಣಾಕರ ಶೆಟ್ಟಿ, ಡಾ| ಹಸ್ಮುಖ್ ಠಕ್ರಾಲ್, ಡಾ|ಬಿಪಿನ್ ದೋಶಿ, ಡಾ| ನಿಗಮ್ ವೋರಾ, ಡಾ| ಸೌರಭ್ ಸಂಗೋರ್, ಡಾ| ಅಜಿತ್ ವೈಂಗಂಕರ್, ಡಾ| ಪೃತೇಶ್ ಪಂಜಾಬಿ, ಡಾ| ಅಲೋಕ್ ಸಿಂಘಿ, ಡಾ| ದಿನೇಶ್ ಮೋದಿ, ನೀರವ್ ದೋಶಿ, ಪರಾಗ್ ಉಲ್ಲಾಲತ್ ಅವರನ್ನೂ ಸನ್ಮಾನಿಸಲಾಯಿತು.

ಶಾಸಕ ಪರಾಗ್ ಶ್ಹಾ, ಭಾರತ್ ವಿಕಾಸ್ ಸಂಸ್ಥೆಯ ಅಧ್ಯಕ್ಷ ಡಾ| ಯೋಗೆಶ್ ದುಭೆ, ಹÀರ್ಷದ್ ಮೆಹ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಗೋಪಾಲ ಶೆಟ್ಟಿ ಮಾತನಾಡಿ ತನ್ನ ಜನಪ್ರತಿನಿಧಿತ್ವದ ಸೇವೆಯಲ್ಲಿ ಸಹಕಾರವಿತ್ತ ಈ ಸಂಸ್ಥೆಗಳ ಮುಂದಾಳುಗಳಿಗೆ ಅಭಿವಂದಿಸಿ ಶುಭಾರೈಸಿದರು.

 
More News

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ಅಧ್ಯಯನ ಶುಭಾರಂಭ
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ಅಧ್ಯಯನ ಶುಭಾರಂಭ
ಬಂಟ್ಸ್‌ ಕ್ರೆಡಿಟ್‌ ಕೋ.ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆ
ಬಂಟ್ಸ್‌ ಕ್ರೆಡಿಟ್‌ ಕೋ.ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆ
ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ
ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ

Comment Here