Tuesday 16th, April 2024
canara news

ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಸಾದ್ವಿಯರ ಪುರಪ್ರ್ರವೇಶ

Published On : 17 Jan 2021   |  Reported By : Rons Bantwal


ದೇಹ ಶೃಂಗಾರದಿಂದ ಜೀವನದ ನೆಮ್ಮದಿ ಅಸಾಧ್ಯ : ದಿವ್ಯ ಸಾಗರ ಮುನಿ

ಮುಂಬಯಿ (ಆರ್‍ಬಿಐ), ಜ.17: ಜೈನಕಾಶಿ ಮೂಡುಬಿದಿರೆ ಇಲ್ಲಿನ ಜಗತ್ಪ್ರಸಿದ್ದ ಶ್ರೀ ಜೈನ ಮಠದ ಸಾವಿರ ಕಂಬದ ಬಸದಿಯ ಶ್ರೀ ಜೈನ ಮಠದಲ್ಲಿ ಕಳೆದ ಮಕರ ಸಂಕ್ರಾಂತಿ ದಿನ ಜೈನ ಕಾಶಿಗೆ ಶ್ವೇತಾoಬರ್ ತೇರಾ ಪಂಥಿü ಸಮಾಜದ ಪಾರಾಮೋಚ್ಚ ಗುರು ಮಹಾ ಶ್ರಮಣ್ ಜೀ ಶಿಷ್ಯೆ ಪ್ರಮೀಳಾ ಸಾದ್ವಿ ಜೀ ಅವರ ಹಾಗೂ ಸಂಘವು ಪುರಪ್ರ್ರವೇಶ ನಡೆಸಿತು.

18 ಬಸದಿಗಳ ದರ್ಶನ ಮಾಡಿ ಅಂದು ಬೆಳಿಗ್ಗೆ ಶ್ರೀ ಜೈನ ಮಠದಲ್ಲಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಸಿದ್ಧಾಂಥ ಶಾಸ್ತ್ರಗಳ ದರ್ಶನ ಮಾಡಿಸಿದರು. ಸಾದ್ವಿ ಪ್ರಮೀಳಾ, ಸಾದ್ವಿ ಆಸ್ತಾ, ಸಾದ್ವಿ ಧೈರ್ಯ, ಸಾದ್ವಿ ವಿಗ್ಯ ಮಾತಾಜಿ ಅಪರಾಹ್ನ ಶ್ರೀ ಮಠದಲ್ಲಿ ನಡೆದ 108 ದಿವ್ಯ ಸಾಗರ ಮುನಿ ರಾಜರ ಇಷ್ಟೋ ಪದೇಶ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು.

ಮುನಿ ರಾಜರು ಆಶೀರ್ವಾಚನ ನೀಡಿ ಸರಳ ಸಜ್ಜನ ವ್ಯಕ್ತಿಗಳಿಂದ ಮಾತ್ರ ಧರ್ಮ ಆಚರಣೆ ಆಗುತ್ತದೆ ಕ್ರೋಧ ಮಾನವ ವಿಕಾಸಕ್ಕೆ ಬಾದಕ. ದೇಹ ಶೃಂಗಾರದಿಂದ ಜೀವನದ ಅನಂತ, ಸುಖ ನೆಮ್ಮದಿ ಅಸಾಧ್ಯ. ಆತ್ಮ ಜಾಗೃತಿ ತಪಸ್ಸು ಪೂಜೆ, ಧ್ಯಾನ ಸತ್ಸಂಗದಿಂದ ನಿಜವಾದ ಸಂತೋಷ ಸಿಗುವುದು ಎಂದು ಹಿತೋಪದೇಶ ನೀಡಿದರು.

ಪ. ಪೂ ಮೂಡುಬಿದಿರೆ ಶ್ರೀಗಳು ಸಾದ್ವಿ ಸಂಘಕ್ಕೆ ಶ್ರೀ ಮಠದ ವತಿಯಿಂದ ಶಾಸ್ತ್ರ ದಾನ ಮಾಡಿದರು. ಅಭಯ ಕುಮಾರ್, ಸುಹಾಸ್ ಅರಿಗಾ, ತೇಜ್ ಕರಣ್ ಜೈನ್ ಮಂಗಳೂರು ಹಾಗೂ ಚಿಕ್ಕ ಮಗಳೂರು, ಚೆನ್ನೈ, ತೇರಾ ಪಂಥಿü ಜೈನ ಸಮಾಜ ಬಾಂಧವರು ಅತಿಥಿüಗಳಾಗಿ ಪಾಲ್ಗೊಂಡಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here