Monday 15th, August 2022
canara news

ಮಾರ್ಚ್ 26 ರಂದು “ಇಂಗ್ಲಿಷ್” ತುಳು ಸಿನೆಮಾ ಮಂಗಳೂರು-ಉಡುಪಿ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ

Published On : 24 Jan 2021   |  Reported By : Iqbal Uchila


ಮಂಗಳೂರು: ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನೆಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ' ತುಳು ಸಿನಿಮಾ ಮಾರ್ಚ್ 26 ರಂದು ಮಂಗಳೂರು-ಉಡುಪಿ ಸೇರಿದಂತೆ ಕರ್ನಾಟಕ, ಗಲ್ಫ್ ಹಾಗು ವಿಶ್ವದ ಎಲ್ಲೆಡೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ಮಹಾಮಾರಿ ಕೊರೋನಾದಿಂದಾಗಿ ಮುಂದೂಡಲಾಗಿದ್ದ ಈ ಸಿನೆಮಾವನ್ನು ನೋಡುವ ತವಕದಲ್ಲಿ ತುಳು ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro' ಸಿನೆಮಾದಲ್ಲಿ ತುಳು ಸಿನೆಮಾರಂಗದ ಹಾಸ್ಯಾದಿಗ್ಗಜರ ದಂಡೇ ಇದೆ. ಜೊತೆಗೆ ಸಿನೆಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಸುದ್ದಿ ಮಾಡುವ ಮೂಲಕ ತುಳು ಸಿನೆಮಾರಂಗದದಲ್ಲೇ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರು ಆಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಕನ್ನಡ ಚಿತ್ರರಂಗದಲ್ಲಿ 'ಮಾರ್ಚ್ 22 ', 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ', 'ಯಾನ'ದಂತ ಹಿಟ್ ಸಿನೆಮಾಗಳನ್ನು ನಿರ್ಮಿಸಿದ್ದು, ಇದರಲ್ಲಿ 'ಮಾರ್ಚ್ 22 ' ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿಯು ದೊರಕಿದೆ.

ಚಿತ್ರದ ಹೆಗ್ಗಳಿಕೆ....
8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ತುಳು “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro' ಆಗಿದೆ. ಜೊತೆಗೆ ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡ ಚಿತ್ರದ್ದು. ‘ವರ್ಲ್ಡ್ ಪ್ರೀಮಿಯರ್ ಶೋ' ಅದ್ದೂರಿಯಾಗಿ ನಡೆದದ್ದು ಕೂಡ ದುಬೈ ಎಂಬ ಮಹಾನಗರಿಯಲ್ಲಿ.

ತುಳುವಿನಲ್ಲಿ ಇದೇ ಮೊದಲ ಬಾರಿಗೆ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro' ಸಿನೆಮಾ ನಿರ್ಮಿಸಿದ್ದು, ಸಿನೆಮಾ ಬಿಡುಗಡೆಗೂ ಮುನ್ನ ಹಲವು ದಾಖಲೆಗಳನ್ನೇ ಮಾಡಿದೆ. ಈ ಸಿನೆಮಾದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತುಳುವಿಗೆ ಅವರ ಮೊದಲ ಎಂಟ್ರಿ ಆಗಿದೆ.

“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro' ಸಿನೆಮಾದ ‘ವರ್ಲ್ಡ್ ಪ್ರೀಮಿಯರ್ ಶೋ' ಕನಸಿನ ನಗರಿ ದುಬೈಯ Al Ghurair centre Deiraದಲ್ಲಿ 2020 ರ ಮಾರ್ಚ್ 13 ರಂದು ಅದ್ದೂರಿ ಪ್ರದರ್ಶನಗೊಂಡಿದ್ದು, ಸಿನೆಮಾ ನೋಡಿದ ಜನ ಬಾಯಿತುಂಬ ಹೊಗಳಿಕೆಯ ಮಾತುಗಳನ್ನೇ ಆಡಿದ್ದರು..

ತುಳುಚಿತ್ರ ರಂಗದಲ್ಲಿ ಈ ಸಿನೆಮಾ ಹೊಸ ಇತಿಹಾಸವೊಂದನ್ನು ಬರೆಯಲಿದೆ ಎಂದು ಸಿನೆಮಾ ನೋಡಿದ ಮಂದಿ ಗುಣಗಾನ ಮಾಇಡಿದ್ರು. ಜೊತೆಗೆ ಚಿತ್ರ ನಿರ್ಮಿಸಿರುವ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ದಂಪತಿಯನ್ನು ಇಂಥ ಮನಮೆಚ್ಚಿವ ಸಿನೆಮಾ ನಿರ್ಮಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಿನೆಮಾ ನೋಡಿದ ವೀಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ವ್ಯಕ್ತಪಡಿಸಿದ್ದು, ರಿಲೀಸ್ ಗೂ ಮುನ್ನವೇ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದರಿಂದ ಸಿನಿಮಾ ತಂಡ ಫುಲ್ ಖುಷಿಯಾಗಿತ್ತು. ಜೊತೆಗೆ ‘ವರ್ಲ್ಡ್ ಪ್ರೀಮಿಯರ್ ಶೋ' ದುಬೈಯಲ್ಲಿ ನಡೆದಿರುವುದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ.

ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.

‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡಯಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟುಕೂತು ನೋಡುವಂತೆ ನಿರ್ದೇಶಕ ಕೆ. ಸೂರಜ್ ಶೆಟ್ಟಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಚಿತ್ರದಲ್ಲಿ ಅರವಿಂದ್ ಬೋಳಾರ್, ನವೀನ ಡಿ'ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಹಾಸ್ಯ, ನಾಯಕ-ನಟಿಯಾಗಿ ಪೃಥ್ವಿ ಅಂಬರ್ ಹಾಗು ನವ್ಯ ಪೂಜಾರಿ ನಟನೆ ಎಲ್ಲರಿಗೂ ಖುಷಿಕೊಡುತ್ತೆ. ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.

ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ - ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : 'ಭಜರಂಗಿ' ಮೋಹನ್
More News

ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ  ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ

Comment Here