Saturday 10th, May 2025
canara news

ಬ್ರಹ್ಮಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ರಾಜ್ಯ ನಿಯೋಗ ಬಿಲ್ಲವರ ಭವನಕ್ಕೆ ಭೇಟಿ

Published On : 24 Jan 2021   |  Reported By : Rons Bantwal


ಸಂಘಟನೆಯಿಂದ ಮಾತ್ರ ಸಮಾಜದ ಸ್ಥಿರತೆ - ರಾಘವೇಂದ್ರ ಹುೈಲ್‍ಗೊಲ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ,ಜ.19: ನಮ್ಮ ಅಸ್ಮಿತೆಯನ್ನು ನಾವು ಮುಕ್ತವಾಗಿ ಪ್ರದರ್ಶಿಸಿದಾಗ ಮತ್ತು ಸಾಂಘಿಕವಾಗಿ ತೋರ್ಪಡಿಸಿದಾಗ ಮಾತ್ರ ಸ್ವಸಮಾಜದ ಸಬಲೀಕರಣ, ಸ್ಥಿರತೆ ಸಾಧ್ಯವಾಗುವುದು. ಜಾಗತೀಕರಣದ ಈ ಕಾಲಘಟ್ಟದಲ್ಲಿ ಸ್ವಸಮಾಜ, ಸಮುದಾಯದ ನಮ್ಮತನ ನಾವು ಮರೆಯದೆ ನಮ್ಮ ಅಸ್ಮಿತೆಯನ್ನು ಮುಚ್ಚುಮರೆಯಿಲ್ಲದೆ ಹೆಮ್ಮೆಯಿಂದ ಗುರುತಿಸಿ ಕೊಳ್ಳುವುದು ಅತ್ಯವಶ್ಯವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ, ಜೀವನಶೈಲಿ ನಾವು ರೂಢಿಸಿಕೊಂಡು ಮಾದರಿಯಾಗುವಂತಿರಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ಸಮನ್ವಯಕ ರಾಘವೇಂದ್ರ ಹುೈಲ್‍ಗೊಲ್ ಕೊಪ್ಪಳ ತಿಳಿಸಿದರು.

ಸೋಮವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನಕ್ಕೆ ಭೇಟಿ ನೀಡಿ ಭವನದಲ್ಲಿನ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ನಮಿಸಿ ರಾಘವೇಂದ್ರ ಹುೈಲ್‍ಗೊಲ್ ತಿಳಿಸಿದರು.

ರಾಘವೇಂದ್ರ ಹುೈಲ್‍ಗೊಲ್, ಈಡಿಗ ಸಮಾಜದ ರಾಷ್ಟ್ರೀಯ ಸಂಚಾಲಕ ರಾಜನಾಥ್ ನಾಡರ್ (ಕನ್ಯಾಕುಮಾರಿ), ಕರ್ನಾಟಕ ರಾಜ್ಯ ಸಂಯೋಜಕÀ ಸೋಮಶೇಖರ್ ಪುಟ್ಟಣ್ಣ ಬೆಂಗಳೂರು, ಭಾರತೀಯ ಕಲ್ಚೂರಿ ಜೈಸ್ವಲ್ ಸಂವರ್ಗೀಯ ಮಹಾಸಭಾ ಅಧ್ಯಕ್ಷ ಲಾಲ್‍ಚಂದ್ ಗುಪ್ತ, ಅಖಿಲ ಭಾರತ ಭಂಡರಿ ಸಮಾಜ ಅಧ್ಯಕ್ಷ ನವೀನ್ ಭಾಂದಿವುಡೆಕರ್ ನಿಯೋಗದಲ್ಲಿದ್ದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾಗಿದ್ದು ಇತ್ತೀಚೆಗೆ ಅಸ್ತಂಗತರಾದ ಬಿಲ್ಲವ ಕುಲಶಿರೋಮಣಿ ಜಯ ಸಿ.ಸುವರ್ಣ ಅವರ ಭಾವಚಿತ್ರಕ್ಕೆ ನಿಯೋಗದಲ್ಲಿ ಮಹಾನೀಯರು ನಮಿಸಿ ಬಾಷ್ಪಾಂಜಲಿ ಅರ್ಪಿಸಿದರು. ಅಂತೆಯೇ ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕರಾಗಿದ್ದು ಅಗಲಿದ ಎಂ.ಬಿ ಕುಕ್ಯಾನ್ ಅವರ ನಿಧನಕ್ಕೂ ಸಂತಾಪ ವ್ಯಕ್ತಪಡಿಸಿ ಸಂತಾಪ ವ್ಯಕ್ತಪಡಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಎ.ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ ಹಾಗೂ ಅಸೋಸಿಯೇಶನ್‍ನ ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ಕೇಶವ ಪೂಜಾರಿ ನಿಯೋಗದಲ್ಲಿನ ಗಣ್ಯರಿಗೆ ಬರಮಾಡಿ ಸ್ವರ್ಗೀಯ ಜಯ ಸುವರ್ಣ ಅವರಿಗೆ ಅರ್ಪಿತ ಅಕ್ಷಯ ಮಾಸಿಕವನ್ನಿತ್ತು ಗೌರವಿಸಿದರು.

ಸಂಜೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮೀಡಿಯಾ ಸ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಅಧ್ಯಕ್ಷ ಜವಾಹರ್ ನಾಡರ್ ಭೇಟಿಯಾಗಿದ್ದು, ಬಳಿಕ ದಕ್ಷಿಣ ಮರ ನಾಡರ್ ಸಂಘಂ ತಿರುನೆಲ್ವೆಲಿ ಮುಂಬಯಿ ಶಾಖೆಯ ಧಾರಾವಿ ಇಲ್ಲಿನ ಕಾಮರಾಜರ್ ಮೆಮೋರಿಯಲ್ ವಿದ್ಯಾಲಯದ ಪದ್ಮಶ್ರೀ ಡಾ| ಬಿ.ಸಿವಂಥಿü ಅಡಿತನಾರ್ ವಿದ್ಯಾ ಸಂಕುಲಕ್ಕೆ ಭೇಟಿ ನೀಡಿ ಅಲ್ಲಿನ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಸ್ವಾತಂತ್ರ್ಯ ಹೋರಾಟಗಾರ ಸ್ವರ್ಗೀಯ ಕುಮಾರಸ್ವಾಮಿ ಕಾಮರಾಜ್ ಪ್ರತಿಮೆಗೆ ಗಣ್ಯರು ಹಾರಾರ್ಪಣೆಗೈದು ಸಭೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಭಾರತದ ಸರ್ವೋಚ್ಛ ನ್ಯಾಯಲಯದ ನ್ಯಾ| ನಿಲೇಶ್ ಪವಸ್ಕರ್, ನ್ಯಾ| ಗೌರವ್ ನಿಕರ್ಜೆ, ಮರ ನಾಡರ್ ಸಂಘಮ್ ತಿರುನೆಲ್ವೆಲಿ ಮುಂಬಯಿ ಶಾಖೆಯ ಕಾರ್ಯದರ್ಶಿ ಎಂ.ಎಸ್ ಕಾಶಿಲಿಂಗಮ್, ವಿ.ಮೈಕಲ್, ಡಿ.ಎಂ ರೆಮ್‍ಜಿಸ್, ಸಿ.ಕೆ ಪನ್‍ರಾಜ್, ಕೆ.ವಚಿರಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ನಿಯೋಗದಲ್ಲಿನ ಗಣ್ಯರಿಗೆ ಶಾಲು ಹೊದಿಸಿ ಗೌರವಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here