Wednesday 18th, May 2022
canara news

`ಚಕ್ರಧಾರಿ'ಗೆ ಮುಂಬಯಿ ಕನ್ನಡ ಸಂಘ-`ಕೃಷಿಬಂಧು 'ಪ್ರಶಸ್ತಿ ಗೆ ಗೋವಿಂದ ಭಟ್ ಆಯ್ಕೆ

Published On : 31 Jan 2021   |  Reported By : Rons Bantwal


ದಿ| ಹೆಚ್.ಬಿ.ಎಲ್ ರಾವ್ ಲೇಖನಗಳ `ಸಾಧನೆಯ ಭಗೀರಥ' ಸಂಗ್ರಹ ಕೃತಿ ಬಿಡುಗಡೆ

ಮುಂಬಯಿ (ಆರ್‍ಬಿಐ), ಜ.29: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ 2021 ಸಾಲಿನ `ಚಕ್ರಧಾರಿ' ಪ್ರಶಸ್ತಿಗೆ ಬೃಹನ್ಮುಂಬಯಿ ಕಂಡಂತಹ ಪ್ರತಿಷ್ಠಿತ ಕನ್ನಡ ಸಂಘಗಳಲ್ಲೊಂದಾದ ಮುಂಬಯಿ ಕನ್ನಡ ಸಂಘ ಮುಂಬಯಿ (ಮಾಟುಂಗ) ಮತ್ತು `ಕೃಷಿಬಂಧು ಪ್ರಶಸ್ತಿ'ಗೆ ನಿವೃತ್ತ ಬ್ಯಾಂಕ್ ಉದ್ಯೋಗಿ, ಕೃಷಿಕ ಕೊಳ್ಚಪ್ಪೆ ಗೋವಿಂದ ಭಟ್ ಇವರನ್ನು ಆಯ್ಕೆಗೊಳಿಸಿದೆ.

        

G.N Nayak Dombivili                                K Govind Bhat                              H.B L Rao

2010ರಿಂದ ಮುಂಬಯಿಯಲ್ಲಿ ನಾಡು, ನುಡಿಗೆ ತನ್ನದೇ ಆದ ಅಳಿಲು ಸೇವೆ ಸಲ್ಲಿಸುತ್ತಿರುವ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರತೀವರ್ಷ ಸಮಾಜ ಸೇವಾ ನಿರತ ಸಂಸ್ಥೆ ಯಾ ವ್ಯಕ್ತಿಗೆ ನಗದು ಸಹಿತ `ಚಕ್ರಧಾರಿ' ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಎಸ್.ಕೆ ಸುಂದರ್, ಪದ್ಮನಾಭ ಸಪsಲಿಗ, ಡಾ| ಜಿ.ಪಿ ಕುಸುಮಾ ಅವರನ್ನೊಳಗೊಂಡ ಆಯ್ಕೆ ಸಮಿತಿಯೂ ಅರ್ಹರನ್ನೇ ಪ್ರಶಸ್ತಿಗೆ ಆಯ್ಕೆಗೊಳಿಸಿದೆ.

ದಿನಾಂಕ 19.02.2021ನೇ ಶುಕ್ರವಾರ ಅಪರಾಹ್ನ 2.00 ಗಂಟೆಯಿಂದ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕಿರು ಸಭಾಗೃಹ (ಮೊದಲ ಮಹಡಿ), ಭಾವುದಾಜಿ ರೋಡ್, ಮಾಟುಂಗ ಪೂರ್ವ, ಮುಂಬಯಿ ಇಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ ರಾಷ್ಟ್ರೀಯ ತನಿಖಾ ಕರ್ತೃತ್ವ (ಎನ್‍ಐಎ) ಸಂಸ್ಥೆಯ ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಕೆ ಭವಾನಿ ಅತಿಥಿü ಅಭ್ಯಾಗತರಾಗಿ ಆಗಮಿಸಲಿದ್ದು ಪ್ರತಿಷ್ಠಾನದ ಉಪಾಧ್ಯಕ್ಷ ಸಿಂಧೂರ ರಾಜೇಶ್ ಗೌಡ, ಡಾ| ರಜನಿ ವಿ.ಪೈ ಉಪಸ್ಥಿತಿಯಲ್ಲಿ ವಾರ್ಷಿಕ `ಚಕ್ರಧಾರಿ' ಪ್ರಶಸ್ತಿಯನ್ನು ಮುಂಬಯಿ ಕನ್ನಡ ಸಂಘ ಮುಂಬಯಿ ಅಧ್ಯಕ್ಷ ಗುರುರಾಜ್ ಎನ್.ನಾಯಕ್ ಮತ್ತು `ಕೃಷಿಬಂಧು' ಪುರಸ್ಕಾರವನ್ನು ಕೆ.ಗೋವಿಂದ ಭmನಿವರಿಗೆ ಪ್ರದಾನಿಸುವರು.

ಹಿರಿಯ ಸಂಘಟಕರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಹೆಚ್.ಬಿ.ಎಲ್ ರಾವ್ ಕುರಿತು ಅವರ ಅಭಿಮಾನಿಗಳು ಬರೆದ ಲೇಖನಗಳ ಸಂಗ್ರಹ ಕೃತಿ `ಸಾಧನೆಯ ಭಗೀರಥ' ಇದೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಮಂತ್ರಿತರಿಂದ `ಸಂಸ್ಕøತ ಕಾವ್ಯಗೋಷ್ಠಿ? ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here