Saturday 10th, May 2025
canara news

ಗುಜರಾತ್ ; 41ನೇ ಮಹಾ ಸಭೆ ನಡೆಸಿದ ವಾಪಿ ಕನ್ನಡ ಸಂಘ

Published On : 31 Jan 2021   |  Reported By : Ronida Mumbai


ನೂತನ ಅಧ್ಯಕ್ಷರಾಗಿ ಟಿ.ಕೆ ವಿನಯಕುಮಾರ್ ಅವಿರೋಧ ಆಯ್ಕೆ
(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಬಯಿ, ಜ.29: ಕನ್ನಡದ ಕೈಂಕರ್ಯವನ್ನು ಹೊರನಾಡ ಗುಜರಾತ್ ರಾಜ್ಯದ ವಾಪಿ ನಗರದಲ್ಲಿ ಜೀವಾಳವಾಗಿರಿಸಿ ಕನ್ನಡಾಂಭೆಯ ಸೇವೆಯಲ್ಲಿ ಕಾರ್ಯಪ್ರವೃತ್ತ ವಾಪಿ ಕನ್ನಡ ಸಂಘವು ತನ್ನ 41ನೇ ವಾರ್ಷಿಕ ಮಹಾಸಭೆಯನ್ನು ಕಳೆದ ಮಂಗಳವಾರ (ಜ.26) ಸಂಘದ ಅಧ್ಯಕ್ಷೆ ನಿಶಾ ನಾರಾಯಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿಸಿತು. ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸÀಲಾಗಿದ್ದು, ನೂತನ ಅಧ್ಯಕ್ಷರಾಗಿ ಟಿ.ಕೆ ವಿನಯಕುಮಾರ್ ಅವರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು.

ನಿರ್ಗಮನ ಅಧ್ಯಕ್ಷೆ ನಿಶಾ ಎನ್.ಶೆಟ್ಟಿ ನೂತನ ಅಧ್ಯಕ್ಷ ವಿನಯಕುಮಾರ್ ಮತ್ತು ಆಯ್ಕೆಯಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಪುಷ್ಫಗುಚ್ಛ ನೀಡಿ ಬರಮಾಡಿಕೊಂಡು ಅಧಿಕಾರ ವಹಿಸಿದರು. ಹಾಗೂ ನೂತನ ಸಮಿತಿಗೆ ತÀನ್ನಿಂದಾಗುವ ಯಾವುದೆ ಸಹಕಾರ ಬೇಕಾದಲ್ಲಿ ಸದಾ ನಾನು ಸಿದ್ಧನಿದ್ದು ತÀನ್ನಿಂದ ಆಗುವ ಸಹಾಯ ಮುಕ್ತವಾಗಿ ಮಾಡುವೆನು ಎಂದು ಆಶ್ವಾಸನೆ ನೀಡಿದರು.

2021-2023ರ ನೂತನ ಕಾರ್ಯಕಾರಿ ಸಮಿತಿಗೆ ಟಿ.ಕೆ ವಿನಯಕುಮಾರ್ (ಅಧ್ಯಕ್ಷರು), ಚಂದ್ರಶೇಖರ ಗೋಸಿ (ಉಪಾಧ್ಯಕ್ಷರು), ಪರಮೇಶ್ವರ್ ಬೆಳಮಗಿ (ಕಾರ್ಯದರ್ಶಿ), ವಿದ್ಯಾಧರ್ ಭಟ್ (ಕೋಶಾಧಿಕಾರಿ), ಗೀತಾ ಕರಮುಡಿ (ಜೊತೆ ಕಾರ್ಯದರ್ಶಿ), ಸಂಗಿತಾ ಶೆಟ್ಟಿ (ಜೊತೆ ಕೋಶಾಧಿಕಾರಿ), ಕರುಣಾ ಪಿಂಗ್ಳೆ (ಮಹಿಳಾ ವಿಭಾಗಧ್ಯಕ್ಷೆ), ಸುಜಾತಾ ಶ್ರೀನಿವಾಸ (ಮಹಿಳಾ ಕಾರ್ಯದರ್ಶಿ), ಸೃಷ್ಟಿತಾ ಉದಯ ಶೆಟ್ಟಿ (ಮಹಿಳಾ ಖಜಾಂಚಿ) ಹಾಗೂ ಕಾರಂತ್ ಪಿ.ಎಸ್., ಎನ್.ಪಿ ಕಾಂಚನ್, ಎನ್.ಎಂ ಶೆಟ್ಟಿ, ಮಲ್ಹಾರ ನಿಂಬರಗಿ, ಸಂಜಯ ಮರ್ಬಳ್ಳಿ ಇವರನ್ನು ವಿಶ್ವಸ್ಥ ಮಂಡಳಿ ಸದಸ್ಯರನ್ನಾಗಿ ಸಭೆ ಆಯ್ಕೆಗೊಳಿಸಿತು.

ಸಂಘದ ಹಿರಿಯರೂ ವಿಶ್ವಸ್ಥರಾದ ಪಿ.ಎಸ್ ಕಾರಂತ್, ನಾರಾಯಣ ಯಂ.ಶೆಟ್ಟಿ, ಸಂಜಯ ಮಾರ್ಬಲಿ ಹಾಗೂ ಮಾಜಿ ಅಧ್ಯಕ್ಷರುಗಳಾದ ನಾಗರಾಜ್ ಶೆಟ್ಟಿ, ಹರ್ಷವರ್ಧನ್ ಭಟ್, ಮಾರುತಿ ಭಟ್ ಮತ್ತು ಭಾರತ್ ಬ್ಯಾಂಕ್ ವಾಪಿ ಶಾಖಾ ಸಿಬ್ಬಂದಿ ಭಾಸ್ಕರ್ ಸರಪಾಡಿ ಮತ್ತಿತರರು ತಮ್ಮ ಸಲಹೆ ಸೂಚನೆಗಳನಿತ್ತು ಸಂಘದ ಶ್ರೇಯೋನ್ನತಿಗೆ ಶುಭಹಾರೈಸಿ ಕರೊನಾ ಮಹಾಮಾರಿ ತಾಂದವವಾಡಿದ ಸಂದರ್ಭದಲ್ಲೂ ಸಂಘ ಮಹಾಸಭೆ ಮಾಡಿದ್ದು ಶ್ಲಾಘನೀಯ ಎಂದರು.

ವಾಪಿ, ಸಿಲ್ವಾಸ ಪರಿಸರದ ತುಳು ಕನ್ನಡಿಗ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು ಮಲ್ಹಾರ ನಿಂಬರ್ಗಿ ಸಭಾ ಕಾರ್ಯಕ್ರಮ ನಿರೂಪಿಸಿ ಸಲಹೆ ಸೂಚನೆ ನೀಡಿದರು. ಪ್ರತಿಭಾ ಪ್ರಯಾಗ್ ವಂದನಾರ್ಪಣೆಗೈದರು.

ಟಿ.ಕೆ ವಿನಯಕುಮಾರ್:
ಸಂಘದಲ್ಲಿ ಕಳೆದ ಎರಡು ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಸಾಹಿತ್ಯ ಕ್ಷೇತ್ರದಲ್ಲಿ ಅನುಭವ ಹೊಂದಿದ ಇವರು ಸಂಘದ ಹಿರಿಯ ಸದಸ್ಯರೂ ಆಗಿದ್ದು ಇದೀಗ ಅಧ್ಯಕ್ಷಸ್ಥಾನ ಅಲಂಕರಿಸಿರುವರು. ಸಂಘದ ಸದಸ್ಯರು ನನ್ನನ್ನು ಈ ಅಧ್ಯಕ್ಷ ಸ್ಥಾನಕ್ಕೆ ಅನುವು ಮಾಡಿರುದಕ್ಕೆ ಚಿರಋಣಿ ಆಗಿದ್ದು ಸಂಘವನ್ನು ದಕ್ಷರೀತಿಯಲ್ಲಿ ಮುನ್ನಡೆಸಲು ತಮ್ಮೆಲ್ಲರ ಸಹಕಾರ ಇರಲಿ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here