Friday 29th, March 2024
canara news

ಲೇಖಕ-ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರಿಗೆ ಹುಟ್ಟೂರ ಸನ್ಮಾನ ಮತ್ತು ಕೃತಿ ಬಿಡುಗಡೆ

Published On : 31 Jan 2021   |  Reported By : Rons Bantwal


`ಆಯುರ್ವೇದ ಭೂಷಣ-ಸಮಾಜ ಬಂಧು ಡಾ| ಐ.ವಿ ರಾವ್' ಕೃತಿ ಬಿಡುಗಡೆ

ಮುಂಬಯಿ (ಆರ್‍ಬಿಐ), ಜ.28: ಜೋಕಟ್ಟೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಬೃಹನ್ಮುಂಬಯಿಯಲ್ಲಿನ ಸಾಹಿತಿ, ಲೇಖಕ, ಕವಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರಿಗೆ ಜೋಕಟ್ಟೆಯ ಅಭಿಮಾನಿ ನಾಗರಿಕರಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಜೋಕಟ್ಟೆಯ ದ.ಕ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವಿಸಲಾಯಿತು.

ಈ ಶುಭಾವಸರದಲ್ಲಿ ಮತ್ತು ಶ್ರೀನಿವಾಸ ಜೋಕಟ್ಟೆ ರಚಿತ 38ನೇ ಕೃತಿ `ಆಯುರ್ವೇದ ಭೂಷಣ-ಸಮಾಜ ಬಂಧು ಡಾ| ಐ.ವಿ ರಾವ್' ಕೃತಿಯನ್ನು ಲೇಖಕ, ಅಂಚೆ ಇಲಾಖೆಯ ನಿವೃತ್ತ ಪೆÇೀಸ್ಟ್ ಮಾಸ್ಟರ್ ವಿಲಿಯಂ ಲೋಬೊ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಜೋಕಟ್ಟೆ ಅವರು ತನ್ನ ಹುಟ್ಟೂರಿನ ಬಾಲ್ಯದ ನೆನಪುಗಳು, ಒಡನಾಟ, ಉದ್ಯೋಗ ನಿಮಿತ್ತ ಮುಂಬಯಿಗೆ ತೆರಳಿ ಪತ್ರಕರ್ತನಾಗಿ ಪರಿವರ್ತನೆಗೊಂಡ ಅಲ್ಲಿನ ಅನುಭವಗಳನ್ನು ನೆರೆದ ಅಭಿಮಾನಿಗಳಲ್ಲಿ ಹಂಚಿಕೊಂಡರು. ತನ್ನ ತಂದೆ ಡಾ| ಐ.ವಿ ರಾವ್ ಬಗ್ಗೆ ತಿಳಿಸಿ ವೈದ್ಯವೃತ್ತಿ, ಜೀವನಶೈಲಿ ಮತ್ತು ಸಮಾಜ ಸೇವೆಯ ಹಲವಾರು ಮಜಲುಗಳನ್ನು ಸಭಿಕರಿಗೆ ಮನವರಿಕೆ ಮಾಡಿ ಕೊಟ್ಟರು.

ಜೋಕಟ್ಟೆಯ ಹಿರಿಯ ನಾಗರಿಕರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಜಿ ಟಿ.ಎ ಆಲಿಯಬ್ಬ ಅವರು ಶ್ರೀನಿವಾಸ ಜೋಕಟ್ಟೆಗೆ ಶಾಲು ಹೊದಿಸಿ ಫಲಪುಷ್ಪ ನೀಡಿ `ಜೋಕಟ್ಟೆ ಸುಪುತ್ರ' ಬಿರುರಾಂಕಿತ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಜೋಕಟ್ಟೆಯ ಶ್ರೀ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆತೆ ವಹಿಸಿದ್ದರು. ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್ ಬಶೀರ್, ಜೋಕಟ್ಟೆಯ ಅಂಜುಮನ್ ಖುವ್ವತುಲ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಹಾಜಿ ಟಿ.ಅಬೂಬಕ್ಕರ್, ಅಥಾವುಲ್ಲಾ ಜೋಕಟ್ಟೆ, ಅಂಜುಮನ್ ವಿದ್ಯಾಸಂಸ್ಥೆಯ ಸಂಚಾಲಕ ಸಿರಾಜ್ ಮನೆಗಾರ, ಗ್ರಾಮ ಪಂಚಾಯತ್ ಸದಸ್ಯ ಶಿಹಾಬುದ್ದೀನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಮಯ್ಯದ್ದಿ, ಶ್ರೀಧರ್ ರಾವ್ ಜೋಕಟ್ಟೆ ಅತಿಥಿü ಅಭ್ಯಾಗತರುಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸನ್ಮಾನಿತರಿಗೆ ಶುಭಹಾರೈಸಿದರು.

ಕವಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮುಹಮ್ಮದ್ ಶರೀಫ್ ನಿರ್ಮುಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here