Tuesday 23rd, April 2024
canara news

ಮಯೂರವರ್ಮ ಪ್ರತಿಷ್ಠಾನದ ವಾರ್ಷಿಕ ಸಮಾವೇಶ;`ಚಕ್ರಧಾರಿ'-`ಕೃಷಿಬಂಧು'ಪ್ರಶಸ್ತಿ ಪ್ರದಾನ ಆರೋಗ್ಯದಾಯಕ ಜೀವನಕ್ಕೆ ಕೃಷಿವೃತ್ತಿ ಪೂರಕ : ಪ್ರಕಾಶ್ ಎಲ್.ಶೆಟ್ಟಿ

Published On : 20 Feb 2021   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.19: ಸ್ವರ್ಗೀಯ ಹೆಚ್‍ಬಿಎಲ್ ರಾವ್ ಅವರ ಸ್ಮರಣೆಯೇ ಇವತ್ತಿನ ಬಹಳ ದೊಡ್ಡ ಸಾಧನೆಯಾಗಿದ್ದು ಇದು ಹೆಚ್‍ಬಿಎಲ್ ರಾವ್ ಅವರಿಗೆ ಅಖಂಡ ಮುಂಬಯಿ ಕನ್ನಡಿಗರ ಗೌರವವಾಗಿದೆ. ಅವರೋರ್ವ ಅಪ್ಪಟ ಸಾಂಸ್ಕೃತಿಕ ಪ್ರೇಮಿ ಆಗಿದ್ದು ಬೃಹನ್ಮುಂಬಯಿಯಲ್ಲೂ ತುಳು, ಕನ್ನಡ ಭಾಷೆ ಪರಿಚಯಿಸಿ ಉಳಿಸಿ ಜೀವಂತವಾಗಿರಿಸಿದ ಅಪ್ರತಿಮ ಸಂಘಟಕ. ಇಂತಹ ಮೇಧವಿಗಳ ನೆನಹು ನಿರಂತರವಾಗಿ ನಡೆಯಬೇಕು. ಪ್ರತಿಭಾನ್ವಿತರ ಗುರುತಿಸುವಿಕೆಯೇ ಪ್ರಾಮಾಣಿಕ ಸಾಧನೆವಾಗಿದ್ದು ಇದನ್ನು ಈ ಪ್ರತಿಷ್ಠಾನ ಸಾಧಿಸುತ್ತಿದೆ. ಒಂದು ಕಾರ್ಯಕ್ರಮಕ್ಕೆ ಊಟ ಕೊಟ್ಟವರು ಅನ್ನದಾತ ಆಗುತ್ತಾರೆ ಎಂದಾದರೆ ವರ್ಷವಿಡೀ ಹಗಲಿರುಳು ದುಡಿದು ಬೆಳೆ, ಕೃಷಿಗೈದು ನಮ್ಮನ್ನು ಪೆÇೀಷಿಸುವ ನಿಜವಾದ ಕೃಷಿಕರನ್ನು ಗುರುತಿಸುವ ಸನ್ಮಾನ ಧನ್ಯತಾ ಭಾವನೆವುಳ್ಳದ್ದು. ಇದು ಕೃಷಿಕರನ್ನು ಪೆÇ್ರೀತ್ಸಾಹಿಸುವ ಜವಾಬ್ದಾರಿಯೂ ಹೌದು. ಆರೋಗ್ಯದಾಯಕ ಜೀವನಕ್ಕೆ ಕೃಷಿವೃತ್ತಿ ಪೂರಕವಾಗಿದ್ದು ಕೃಷಿಕರಿಗೆ ಯಾವಾತ್ತೂ ಮುಪ್ಪು ಬಾರದು ಎಂದು ಮಹಾರಾಷ್ಟ್ರ ಸರಕಾರದ ಎನ್‍ಐಎ ವಿಶೇಷ ವ್ಯಾಜ್ಯದಾರ ನ್ಯಾಯವಾದಿ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದರು

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ ವಾರ್ಷಿಕ ಸಮಾವೇಶ, ಮಯೂರವರ್ಮ ಕೊಡಮಾಡುವ 2021ನೇ ವಾರ್ಷಿಕ `ಚಕ್ರಧಾರಿ' ಪ್ರಶಸ್ತಿ ಮತ್ತು `ಕೃಷಿಬಂಧು' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ಪ್ರಕಾಶ್ ಶೆಟ್ಟಿ ಮಾತನಾಡಿದರು.

ಮಾಟುಂಗ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕಿರು ಸಭಾಗೃಹದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಸಭಾ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಥಾಣೆ ಇದರ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಪೆÇಲ್ಯ, ಖಾರ್‍ಘರ್ ಕರ್ನಾಟಕ ಸಂಘದ ಅಧ್ಯಕ್ಷೆ ಎಸ್.ನಳಿನಾ ಪ್ರಸಾದ್, ಕನ್ನಡ ಸಂಘ ಮುಂಬಯಿ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರಾ ಗೌರವ ಅತಿಥಿsಗಳಾಗಿದ್ದು ಬೃಹನ್ಮುಂಬಯಿನ ಪ್ರತಿಷ್ಠಿತ ಕನ್ನಡ ಸಂಘಗಳಲ್ಲೊಂದಾದ ಮುಂಬಯಿ ಕನ್ನಡ ಸಂಘ ಮುಂಬಯಿ (ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಅವರಿಗೆ) `ಚಕ್ರಧಾರಿ ಪ್ರಶಸ್ತಿ-2021' ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿ, ಕೃಷಿಕ ಕೊಳ್ಚಪ್ಪೆ ಗೋವಿಂದ ಭಟ್ (ವಿಜಯಾ ಜಿ.ಭಟ್) ಇವರಿಗೆ `ಕೃಷಿಬಂಧು ಪ್ರಶಸ್ತಿ-2021' ಪ್ರದಾನಿಸಿ ಅಭಿನಂದಿಸಿದರು. ಹಾಗೂ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷರಾಗಿ ಅಪ್ರತಿಮ ಸಂಘಟಕರೆಣಿಸಿ ಇತ್ತೀಚೆಗೆ ಸ್ವರ್ಗೀಯರಾದ ಹೆಚ್.ಬಿ.ಎಲ್ ರಾವ್ ಕುರಿತು ಹೆಚ್‍ಬಿಎಲ್‍ಆರ್ ಅಭಿಮಾನಿಗಳು ಬರೆದ `ಸಾಧನೆಯ ಭಗೀರಥ' ಲೇಖನಗಳ ಸಂಗ್ರಹ ಕೃತಿಯನ್ನು ಡಾ| ಎಸ್.ಕೆ ಭವಾನಿ ಬಿಡುಗಡೆ ಗೊಳಿಸಿದರು. ನಳಿನಾ ಪ್ರಸಾದ್ ಕೃತಿ ಪರಿಚಯಿಸಿದರು.


ಗೌರವ ಸ್ವೀಕೃತವೆಂದರೆ ಸಮಾಜದ ಉತ್ಕರ್ಷೆಗೆÉ ನಿಮ್ಮಲ್ಲಿಂದ ಇನ್ನೂ ಹತ್ತುಹಲವು ಪ್ರಕಾರದ ಸೇವೆಗಳು ಸಮಾಜಕ್ಕೆ ಒದಗಲಿ ಅನ್ನುವ ಸೂಚನೆ ಆಗಿರುತ್ತದೆ. ಅದು ನಿಂತ ನೀರಾಗ ಬಾರದು ಎಂದು ಸೂಕ್ತ ಸಂವೇದನೆ ಮೂಲ ಸೂಚನೆ ಕೊಡುವುದೇ ಗೌರವಿಸುವಿಗೆ ಆಗಿದೆ. ಇದಕ್ಕೆಲ್ಲಾ ಹೆಚ್‍ಬಿಎಲ್ ರಾವ್ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿದ್ದು ಅವರೋರ್ವ ಸಾಂಸ್ಕೃಕ ಲೋಕದ ಧ್ರುವತಾರೆ ಆಗಿದ್ದರು. ಜ್ಞಾನÀದ ಆರಾಧಕರೇ ಆಗಿದ್ದ ಹೆಚ್‍ಬಿಎಲ್ ಅವರನ್ನು ಹೋಲಿಸುವ ವ್ಯಕ್ತಿ ಸದ್ಯ ಮುಂಬಯಿ ಮಹಾನಗರದಲ್ಲಿ ಮತ್ತೊಬ್ಬರಿಲ್ಲ. ಅವರನ್ನು ಕಳಕೊಂಡಿರುವುದೇ ಮುಂಬಯಿ ತುಳುಕನ್ನಡಿಗರ ದೌರ್ಭಾಗ್ಯ ಎಂದು ಉಮೇಶ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದರು.

ಎಸ್.ಕೆ ಭವಾನಿ ಮಾತನಾಡಿ ಈ ಗೌರವÀ ಕನ್ನಡ ಸಂಘ ಮುಂಬಯಿ ಇದರ ಸಂಸ್ಥಾಪಕರಿಗೆ, ಸಂಸ್ಥೆಯನ್ನು ಈ ತನಕ ಬೆಳೆಸಿ ಉಳಿಸಿದ ಎಲ್ಲಾ ರೂವಾರಿಗಳಿಗೆ ಸಲ್ಲುತ್ತದೆ. ಸೇವೆ ಅನ್ನೋದು ಬರೇ ವ್ಯಕ್ತಿಯಿಂದ ಅಲ್ಲ ಸಾಂಘಿಕತೆಯಿಂದ ಸಾಧ್ಯವಾಗುವುದು. ಈ ಪ್ರಶಸ್ತಿಯೂ ಕನ್ನಡಾಂಭೆಯ ಸೇವೆಗೆ ಸಂದ ಗೌರವವಾಗಿ ಸ್ವೀಕರಿಸುವೆವು ಎಂದರು.


ಗೋವಿಂದ ಭಟ್ ಮಾತನಾಡಿ ಭೂಮಿ ಬಾಯಾಲು ಆಗದಂತೆ ಜವಾಬ್ದಾರಿ ನಿರ್ವಾಹಿಸಿ ಕೃಷಿ ಮಾಡುವ ಹವ್ಯಾಸಿಗ ನಾನು. ಕೃಷಿಕರು ಸದಾ ಶ್ರಮ ಜೀವಿಗಳು. ಇಲ್ಲಿನ ಸಾಧನೆ ಸುಲಭ ಸಾಧ್ಯವಲ್ಲ. ಆದರೂ ಕೃಷಿಕರ ಶ್ರಮದ ಪ್ರತಿಫÀಲವೇ ಮುನುಕುಲದ ಜೀವನವಾಗಿದೆ. ಇಂತಹ ಸಾಧನೆ ಗುರುತಿಸಿ ಪೆÇ್ರೀತ್ಸಾಹಿಸಿದ ಈ ಗೌರವ ಕೃಷಿ ಪ್ರಧಾನಕ್ಕೆ ಸಲ್ಲಿಸುವೆ ಎಂದರು.

ಸಂಸ್ಕೃತ ಕಾವ್ಯ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು ಮಾತನಾಡಿ ಸಂಸ್ಕೃತವು ವಿಶ್ವಭಾಷೆ ಆಗಿದ್ದು ಭಾರತದ ಮೂಲ ಭಾಷೆಯಾಗಿರುವ ಈ ಭಾಷೆ ಬಗ್ಗೆ ಭಾರತೀಯರೇ ಅರಿಯದಿರುವುದು ನಮ್ಮ ದುರಂತವೇ ಸರಿ. ಸಂಸ್ಕೃತ ಭಾಷೆ ಅನ್ನುವುದು ಪರಿಪೂರ್ಣವಾದದ್ದು ಇದು ಎಲ್ಲಾ ಪ್ರಕಾರದ ಭಾಷೆಗಳ ಸೊಗಸು ಹೆಚ್ಚಿಸುತ್ತದೆ. ಆದ್ದರಿಂದಲೇ ಸಂಸ್ಕೃತ ಎಲ್ಲಾ ಭಾಷೆಗಳಿಗೂ ಜೀವ ಭಾಷೆ ಆಗಿದೆ. ಪ್ರಪಂಚದ ಎಲ್ಲಾ ದೇಶದ ಭಾಷೆಗಳಲ್ಲಿ ಸಂಸ್ಕೃತ ಅಡಗಿದ್ದು, ವಿಶ್ವದಲ್ಲೇ ದುರ್ಬಲತೆ ಇಲ್ಲದ ಭಾಷೆಯೆಂದರೆ ಸಂಸ್ಕೃತ ಭಾಷೆಯಾಗಿ ದೇವ ಸ್ವರೂಪ ಪಡೆದಿದೆ. ಇಂತಹ ಭಾಷೆಯ ಉಳಿವು ಮತ್ತು ಬೆಳವಣಿಗೆ ನಮ್ಮ ಕರ್ತವ್ಯವಾಗಿಸಿ ತನು ಮನುವಿನಿಂದ ಶುದ್ಧಿಯಾಗಿಸಿ ಸಂಸ್ಕೃತ ಬೆಳೆಸಬೇಕು ಎಂದರು.

ಮಹಾರಾಷ್ಟ್ರದ ಮುಂಬಯಿ ಮಾಯಾನಗರಿ ತುಳು ಕನ್ನಡಿಗರ ಜೀವನದ ಹೃದಯವಾಗಿದೆ. ರಾಷ್ಟ್ರದ ಎಲ್ಲಾ ರಾಜ್ಯ, ಭಾಷೆ ಜನಾಂಗಗಳು ಬೇರೂರಿದ ಮಹಾ ರಾಷ್ಟ್ರ ಈ ಬೃಹನ್ಮುಂಬಯಿ ಆಗಿದೆ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಈ ಮಣ್ಣಿನ ಋಣ ಅನುಪಮವಾದದ್ದು. ಸಂಸ್ಥೆಗಳು ಹಣ ಅಥವಾ ಜನ ಬಲಕ್ಕಿಂತ ಅದರ ಕಾರ್ಯ ಸಾಧನೆಸಿದ್ಧಿಯಿಂದಲೇ ಅದು ಪ್ರತಿಷ್ಠೆಯ ಸಂಸ್ಥೆಯಾಗುವುದು. ಇದಕ್ಕೆ ಮಯೂರವರ್ಮ ಪ್ರತಿಷ್ಠಾನ ಉದಾಹರಣೆಯಾಗಿದೆ. ಒಂದು ಸಮಾಜ, ಜನಾಂಗದ ಏಳಿಗೆಗಾಗಿ ಶ್ರಮಿಸುವುದೇ ನಿಜಾರ್ಥದ ಸಮಾಜ ಸೇವೆಯಾಗಿದೆ ಇದಕ್ಕೆ ಬೃಹನ್ಮುಂಬಯಿಯಲ್ಲಿನ ತುಳು ಕನ್ನಡಿಗರ ಏಕೈಕ ಮೇರು ವ್ಯಕ್ತಿತ್ವ ಹೆಚ್‍ಬಿಎಲ್ ರಾವ್. ಅವರು ಮಾಡಿದ ಕ್ಷೇಮಾ ಕರ್ಮ, ನಿಷ್ಠಾ ಧರ್ಮವೇ ಸಾಕ್ಷಿಯಾಗಿದೆ. ಇಂತಹ ಹೆಚ್‍ಬಿಎಲ್‍ರಾವ್ ಸೂರ್ಯ ಚಂದ್ರರು ಇರುವ ತನಕವೂ ಅಮರರಾಗಿರುತ್ತಾರೆ. ಪ್ರತಿಷ್ಠಾನದ ಚಕ್ರಧಾರಿ ಪ್ರಶಸ್ತಿ ಯಾ ಕೃಷಿಬಂಧು ಪ್ರಶಸ್ತಿ ಪುರಸ್ಕೃತರೂ ಅರ್ಹರೇ ಆಗಿದ್ದು ಪ್ರತಿಷ್ಠಾನದ ಸೇವೆ ಅನುಪಮವಾದದ್ದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಸುರೇಶ್ ಭಂಡಾರಿ ನುಡಿದರು.

ಪ್ರಶಸ್ತಿ ಸಮಿತಿಯ ತೀರ್ಪುಗಾರ ಎಸ್.ಕೆ ಸುಂದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು,ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು ಅಧ್ಯಕ್ಷತೆಯಲ್ಲಿ ಸಂಸ್ಕೃತ ಕಾವ್ಯ ಸೌರಭ ಜರುಗಿದ್ದು, ಡಾ| ಕುಮಾರ್ ಭಟ್, ಶಾಂತಾ ಶಾಸ್ತ್ರಿ, ಗೋಪಾಲ ಭಟ್, ಶೈಲಜಾ ಹೆಗಡೆ, ಅನಂತ ಭಟ್, ಉಮಾ ಭಟ್, ಕು| ಸುಪ್ರೀಯಾ ಉಡುಪ, ಮಾ| ಕುಮಾರ್ ಪ್ರಥ್ವೀಶ್, ಮಾ| ಆದಿತ್ಯ ಭಟ್, ಕು| ದೀತ್ಯ ಶಿವತ್ತಾಯ, ಕೃಷ್ಣ ಉಡುಪ ಇವರು ಸಂಸ್ಕೃತ ಕಾವ್ಯಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಕು| ಅನಘ ದೊಡ್ಮನೆ, (ವಿಜಯಾ ಜಿ.ಭಟ್, ಮಾಲತಿ ಭಟ್ ಪ್ರಾರ್ಥನೆಯನ್ನಾಡಿದರು. ಪ್ರತಿಷ್ಠಾನದ, ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಪದ್ಮನಾಭ ಸಫಲಿಗ, ಜೊತೆ ಕಾರ್ಯದರ್ಶಿ ಗೋಪಾಲ ಉಳ್ಳೂರ, ಅಮಿತಾ ಎಸ್.ಭಾಗ್ವತ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಜಿ.ಟಿ ಆಚಾರ್ಯ, ಡಾ| ಜಿ.ಪಿ ಕುಸುಮಾ ಪುರಸ್ಕೃತರ ಅಭಿನಂದನಾ ಭಾಷಣವನ್ನಾಡಿದರು. ಸಹನಾ ಭಾರದ್ವಜ್, ಕು| ಸುಪ್ರೀಯಾ ಉಡುಪ ಸನ್ಮಾನಪತ್ರ ವಾಚಿಸಿದರು. ಶಿಕ್ಷಕಿ ಅಮೃತಾ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here