Sunday 11th, May 2025
canara news

ಫೆ.21: ಜೋಗೇಶ್ವರಿ ಪೂರ್ವದ ಗುಂಫಾ ಟೇಕಡಿ ಕೃಷ್ಣ ನಗದಲ್ಲಿನ

Published On : 20 Feb 2021   |  Reported By : Rons Bantwal


ಶ್ರೀ ಜಗದಂಬಾ ಕಾಲ ಭೈರವ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಮುಂಬಯಿ (ಆರ್‍ಬಿಐ), ಫೆ.18: ಮುಂಬಯಿ ಉಪನಗರದಲ್ಲಿನ ಜೋಗೇಶ್ವರಿ ಪೂರ್ವ ನಾರಾಯಣಗಿರಿ ಆಶ್ರಮ ಗುಂಫಾ ಟೇಕಡಿ ಕೃಷ್ಣ ನಗರ್ ಇಲ್ಲಿನ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಇದೇ ಫೆ.21ನೇ ರವಿವಾರ ವಾರ್ಷಿಕ ಮಹೋತ್ಸವ ಜರಗಲಿದೆ.

ಅಂದು ಬೆಳಿಗ್ಗೆ 8.30 ಗಂಟೆಯಿಂದ ರಾತ್ರಿ ಗಂ 8.30 ಗಂಟೆ ವರೆಗೆ ವಾರ್ಷಿಕ ಮಹೋತ್ಸವ ಜರಗಲಿದೆ. ಈ ನಿಮಿತ್ತ ಬೆಳಿಗ್ಗೆ 8.30 ಗಂಟೆಗೆ ಪ್ರಾರ್ಥನೆ, ಸಂಕಲ್ಪ 25 ಕಲಶಗಳ ಪ್ರತಿಷ್ಠಾ ಪೂಜೆ, ಪ್ರಧಾನ ಹೋಮ ಪಂಚಾಮ್ರತ ಅಭಿಷೇಕ ನವಕ ಕಲಾಭಿಷೇಕ ಮಹಾಪೂಜೆ ತದನಂತರ ಅನ್ನ ಸಂತರ್ಪಣೆ ಜರಗಲಿದೆ. ಸಾಯಂಕಾಲ 6.00 ಗಂಟೆಯಿಂದ ಉತ್ಸವ ಜರಗಲಿದ್ದು ರಾತ್ರಿ 8.00 ಗಂಟೆಗೆ ರಂಗ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಮಹಾನಗರದಲ್ಲಿನ ಸದ್ಭಕ್ತ ಭಾಂದವರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ಜಗದಂಬಾ ಕಾಲಬೈರವ ಪರಿವಾರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಪ್ರಧಾನ ಅರ್ಚಕ ಪಾದೂರು ನರಹರ ತಂತ್ರಿ, ಆಡಳಿತ ಮೊಕ್ತೇಸರ ಸಂಜೀವ ಪಿ.ಪೂಜಾರಿ, ಗೌರವ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಹಾಗೂ ಪದಾಧಿಕಾರಿಗಳು ವಿನಂತಿಸಿ ಕೊಂಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here