Sunday 11th, May 2025
canara news

ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಸಂಭ್ರಮಿಸಿದ

Published On : 20 Feb 2021   |  Reported By : Rons Bantwal


54ನೇ ವಾರ್ಷಿಕ ಶನೀಶ್ವರ ಮಹಾಪೂಜೆ-ಸಂಪೂರ್ಣ ಗ್ರಂಥ ಪಾರಾಯಣ

ಮುಂಬಯಿ (ಆರ್‍ಬಿಐ), ಫೆ.18: ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ತುಳು ಕನ್ನಡಿಗರ ಆಡಳಿತ್ವದಲ್ಲಿ ಕಳೆದ ಸುಮಾರು ಐದುವರೆ ದಶಕಗಳಿಂದ ಮುನ್ನಡೆದು ಬಂದಿರುವ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಸಮಿತಿಯು ತನ್ನ 54ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು ಕಳೆದ ಶನಿವಾರ (ಫೆ.13) ಬಹಳ ವಿಜೃಂಭಣೆಯಿಂದ ಜರಗಿಸಿತು. ಬೆಳಿಗ್ಗೆ ಧನಂಜಯ ಶಾ0ತಿ ಅವರ ಪೌರೊಹಿತ್ಯದಲ್ಲಿ ಸಮಿತಿಯ ಉಪ ಕಾರ್ಯದರ್ಶಿ ಜನಾರ್ದನ ಸಾಲಿಯಾನ್ ಅವರ ಯಜಮಾನಿಕೆಯಲ್ಲಿ ಗಣಹೋಮ, ಉಳ್ಳೂರು ಶೇಖರ್ ಶಾ0ತಿ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಮಹಾಪೂಜೆಯು ಪವಿತ್ರ ಅಮಿತ್ ಸುವರ್ಣ ಯಜಮಾನಿಕೆಯಲ್ಲಿ ಸುಸಾ0ಗವಾಗಿ ಜರಗಿತು .

ಸಮಿತಿಯ ಅರ್ಚಕರಾದ ನಾಗೇಶ್ ಸುವರ್ಣ, ರವೀಂದ್ರ ಕೋಟ್ಯಾನ್ ಅವರ ಪೌರೋಹಿತ್ಯದಲ್ಲಿ ಮಮತಾ ರವೀಂದ್ರ ಶೆಟ್ಟಿ ಯಜಮಾನಿಕೆಯಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಿಸಲ್ಪಟ್ಟಿತು. ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ ನೇತೃತ್ವದಲ್ಲಿ ಮಧ್ಯಾಹ್ನ ಸಮಿತಿಯ ಮಹಿಳಾ ಮಂಡಳಿಯ ಸರಸ್ವತಿ ಬಿ. ಪೂಜಾರಿ, ಶೋಭಾ ವಿ.ಕೋಟ್ಯಾನ್, ರೇವತಿ ಶೆಟ್ಟಿ, ಶೋಭಾ ಸಾಲೀಯಾನ್, ಶೋಭಾ ಪೂಜಾರಿ, ಉಷಾ ಜತ್ತನ್, ವಿಮಲ ಆರ್.ಕೋಟ್ಯಾನ್, ಶಾರದಾ ಸಾಲಿಯಾನ್, ರಜನಿ ಕೋಟ್ಯಾನ್, ಸುಲೋಚನಾ ಬಂಗೇರ, ಸುರೇಖಾ ಕೋಟ್ಯಾನ್, ಸುಗಂಧಿ ಕೋಟ್ಯಾನ್, ವನಜ ಎನ್.ಕೋಟ್ಯಾನ್, ನಲಿನಾಕ್ಷಿ ಹರೀಶ್ ಕೋಟ್ಯಾನ್, ಮೋಹಿನಿ ಹರೀಶ್ಚಂದ್ರ ಶೆಟ್ಟಿ, ಸೀತಲ್ ಕೋಟ್ಯಾನ್, ಪ್ರೇಮ ಪೂಜಾರಿ, ಸುಮ ಪೂಜಾರಿ, ಕೀರ್ತಿ ಅಮೀನ್, ವಿನೋದ ಪೂಜಾರಿ, ಅಶೀಶ್ ಸಾಲಿಯಾನ್, ಸಾಗರ್ ಸಾಲಿಯಾನ್, ಸುಜಿತ್ ಸಾಲಿಯಾನ್, ಅಶೋಕ್ ಕೋಟ್ಯಾನ್. ವಿಶ್ವನಾಥ್ ವಿ.ಕು0ದರ್, ಸಚಿನ್ ಬಿ. ಪೂಜಾರಿ, ವಿಜಯ ಎನ್ ಸಾಲಿಯಾನ್, ವಿನೋದ್ ಹೆಜಮಾಡಿ, ಬಿಲ್ಲವರ ಅಸೋಸಿಯೇಶನ್ ಕಾ0ದಿವಲಿ ಸ್ಥಳೀಯ ಕಚೇರಿಯ ಸಬಿತಾ ಗೋಪಾಲ್ ಪೂಜಾರಿ, ಯಮುನ ಬಿ.ಸಾಲಿಯಾನ್, ಸುಜಾತ ಪೂಜಾರಿ ಮತ್ತಿತರ ಭಕ್ತರು ಭಜನೆ ನಡೆಸಿದರು.

ಸಂಜೆ ರಮೇಶ್ ಪೂಜಾರಿ, ಭೋಜ ಸಿ.ಪೂಜಾರಿ, ಚಂದ್ರಹಾಸ್ ಕೋಟ್ಯಾನ್, ನಾಗೇಶ್ ಸುವರ್ಣ, ಹರೀಶ್ ಕೋಟ್ಯಾನ್ ಕಾಪು, ಗೀತ ಶೆಟ್ಟಿಗಾರ್, ಜಯರಾಮ ಶೆಟ್ಟಿ, ಕಮಲಾಕ್ಷ ಸುವರ್ಣ ಹಾಗೂ ಯೋಗೇಶ್ ಹೆಜಮಾಡಿ ಇವರ ಅರ್ಥ ವಿವರಣೆಯಲ್ಲಿ ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ, ಗ್ರಂಥ ವಾಚಾಟಿಕೆ ನಡೆಸಲ್ಪಟ್ಟಿತು. ಬಳಿಕ ಸಮಿತಿಯ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷ ಭೋಜ ಸಿ ಪೂಜಾರಿ ಹಾಗೂ ಪದಾಧಿಕಾರಿಗಳು ಬಿಲ್ಲವರ ಅಸೋಸಿಯೇಶನ್ ಮು0ಬಯಿ ಇದರ ನೂತನ ಅಧ್ಯಕ್ಷ ಹರೀಶ್ ಜಿ.ಅಮೀನ್ ಅವರಿಗೆ ಮತ್ತು ದಕ್ಷಿಣ ಕನ್ನಡದ ಸಿನಿಮಾ ತಾರೆ ರೂಪಾನಿ ಮೊಹವಕರ್, ಭಾಸ್ಕರ್ ಕರ್ನಿರೆ, ಎಡ್ವಕೇಟ್ ಸೋಮನಾಥ ಬಿ.ಅಮೀನ್, ಅಶೋಕ ಮೂಡಿಬಿದ್ರಿ, ಶರತ್ ಮೂಡಬಿದ್ರಿ, ಪ್ರಕಾಶ್ ಮೂಡಬಿದ್ರಿ, ಶಿವಸೇನೆಯ ನಗರ ಸೇವಕಿ ಪ್ರಜ್ಞಾ ದೀಪಕ್ ಭೂತ್ಕರ್ ಮತ್ತಿತರ ಗಣ್ಯರಿಗೆ ಪುಷ್ಫಗುಪ್ಛವನ್ನಿತ್ತು ಶಾಲು ಹೊದಿಸಿ, ಪ್ರಸಾದ ನೀಡಿ ಅಭಿನಂದಿಸಿದರು.

ಟ್ರಸ್ಟ್‍ನ ಸದಸ್ಯ ನಾರಾಯಣ ಜಿ.ಕೋಟ್ಯಾನ್, ಉಪಾಧ್ಯಕ್ಷ ದೇವೇ0ದ್ರ ವಿ. ಬಂಗೇರ, ಸಿಎ| ಪ್ರಕಾಶ್ ಶೆಟ್ಟಿ ಹರೀಶ್ಚಂದ್ರ ಶೆಟ್ಟಿ, ಶಾರದ ಶ್ರೀಧರ್ ಪೂಜಾರಿ, ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಶಂಕರ್ ಡಿ. ಪೂಜಾರಿ, ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲಿಯಾನ್ ಉಪಸ್ಥಿತರಿದ್ದು ಸಮಿತಿ ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್ ದೇವರ ಪ್ರಾರ್ಥನೆ ನೆರವೇರಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಭಕ್ತಾಭಿಮಾನಿಗಳÀನ್ನು ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here