Sunday 11th, May 2025
canara news

ಮಲಾಡ್ ಪೂರ್ವದ ಕುರಾರ್ ವಿಲೇಜ್‍ನ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ

Published On : 27 Feb 2021   |  Reported By : Rons Bantwal


43ನೇ ವಾರ್ಷಿಕೋತ್ಸವ ಮತ್ತು 14ನೇ ಪುನರ್ ಪ್ರತಿಷ್ಠಾಪನಾ ಉತ್ಸವಕ್ಕೆ ಚಾಲನೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.26: ಮಲಾಡ್ ಪೂರ್ವದ ಕುರಾರ್ ವಿಲೇಜ್ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ 43ನೇ ವಾರ್ಷಿಕೋತ್ಸವ ಮತ್ತು 14ನೇ ಪುನರ್ ಪ್ರತಿಷ್ಠಾಪನಾ ಸಾಂವತ್ಸರಿಕೋತ್ಸÀವಕ್ಕೆ ಇಂದಿಲ್ಲಿ ಚಾಲನೆಯನ್ನೀಡಲಾಗಿದ್ದು ವಿದ್ವಾನ್ ವೇದಮೂರ್ತಿ ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಇವರ ಪ್ರಧಾನ ಪೌರೋಹಿತ್ಯ ಹಾಗೂ ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್ ಇವರ ಸಹಭಾಗಿತ್ವದಲ್ಲಿ ಶ್ರೀದೇವಿ ಸನ್ನಿಧಿಯಲ್ಲಿ ಎರಡು ದಿನಗಳ ಧಾರ್ಮಿಕ ಪೂಜಾಧಿಗಳನ್ನು ಆರಂಭಿಸಲಾಯಿತು.

ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮಹೂರ್ತ, ಮಹಾಗಣಪತಿ ಹೋಮ, ನವಕ ಪ್ರಧಾನ ಕಲಶ, ಪ್ರಧಾನ ಹೋಮ, ಶ್ರೀದೇವಿ ಸನ್ನಿಧಿಯಲ್ಲಿ ಕಲಶಾರಾಧನೆ, ಕಲಾಭಿಷೇಕ, ಪಂಚಾಮೃತ ಅಭಿಷೇಕ, ಪಲ್ಲ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ, ರಂಗಪೂಜೆ, ಉತ್ಸವ ಬಲಿ, ಕಟ್ಟೆ ಪೂಜೆ
ನೆರವೇರಿಸಲ್ಪಟ್ಟಿತು. ರಾಘವೇಂದ್ರ ಭಟ್ ಸೂಡ ಪ್ರಾರ್ಥನೆಗೈದು ನೆರೆದ ಸದ್ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಮತ್ತು ಆಶಾ ಆರ್.ಕೊಟ್ಟಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಸಂಜೆ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಲ್ಪಟ್ಟಿತು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ನರೇಶ್ ಆರ್.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್, ಗೌರವ ಕೋಶಾಧಿಕಾರಿ ಬಾಬು ಎಂ.ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಮುರಳೀಧರ್ ಬಿ.ಪೂಜಾರಿ, ಗೋಪಾಲ್ ಜಿ.ಕೋಟ್ಯಾನ್, ಆನಂದ ಕೆ.ಕೋಟ್ಯಾನ್ ಜೊತೆ ಕೋಶಾಧಿಕಾರಿಗಳಾದ ಗೀತಾ ಜತ್ತನ್, ದೇವು ಕೋಟ್ಯಾನ್, ಸುರೇಶ್ ಎಂ.ಕೋಟ್ಯಾನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸದಸ್ಯರು ಸೇರಿದಂತೆ ಭಕ್ತರನೇಕರು ಉಪಸ್ಥಿತರಿದ್ದರು.

ಇಂದು (ಫೆ.27) ಶನಿವಾರ ಸಂಪೆÇ್ರೀಕ್ಷಣೆ, ನವಕಲಶಾರಾಧನೆ, ಪ್ರಧಾನಹೋಮ, ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ ಇನ್ನಿತರÀ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಆ ಪ್ರಯುಕ್ತ ಸದ್ಭಕ್ತರು ಚಿತ್ತೈಸಿ, ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ತೀರ್ಥಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here