Sunday 11th, May 2025
canara news

ಯುವ ಜನಾಂಗ ಕನ್ನಡದ ಅರಿವು ಮೂಡಿಸಬೇಕು : ಡಾ| ಎಂ.ಮೋಹನ ಆಳ್ವ

Published On : 06 Mar 2021   |  Reported By : Rons Bantwal


ಡಾ| ರಜನಿ ವಿ.ಪೈ `ಸಮಾಜಸೇವಾ ರತ್ನ'-ಡಾ| ಮೋಹನ ಆಳ್ವ `ಸಾಹಿತ್ಯ ಸಿಂಧು'


ಮುಂಬಯಿ (ಆರ್‍ಬಿಐ), ಮಾ.05: ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಯುವ ಜನಾಂಗ ಸಾಹಿತ್ಯ, ಕನ್ನಡದ ಬಗ್ಗೆ ಅರಿವು ಮೂಡಿಸಿ ಭಾಷಾ ಬೆಳವಣಿಗೆಗೆ ಶ್ರಮಿಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇದರ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು.

ಪುತ್ತೂರು ಸಾಹಿತ್ಯ ವೇದಿಕೆ, ಕಥಾ ಬಿಂದು ಪ್ರಕಾಶನ ಮತ್ತು ಯುಗಪುರುಷ ಇವುಗಳ ಸಹಯೋಗÀದೊಂದಿಗೆ ಕಳೆದ ಮಂಗಳವಾರ ಮಂಗಳೂರು ಕಿನ್ನಿಗೋಳಿ ಇಲ್ಲಿನ ಯುಗ ಪುರುಷ ಸಭಾಂಗಣದಲ್ಲಿ ಜರಗಿಸಲಾಗಿದ್ದ ಸಾಹಿತ್ಯ ಸಂಭ್ರಮ 2021 ಕಾರ್ಯಕ್ರಮ ಉದ್ಘಾಟಿಸಿ ಡಾ| ಆಳ್ವ ಮಾತನಾಡಿದರು.

ಕೇಂದ್ರ ಕ.ಸ.ಪ ಕೇಂದ್ರ ಸಮಿತಿ ಬೆಂಗಳೂರು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಕನ್ನಡದ ಬಗ್ಗೆ ಅಸಡ್ಡೆ ತೋರಿಸುತ್ತಿದೆ. ಕನ್ನಡ ಉಳಿಸಿ ಎನ್ನುತ್ತಿದ್ದರೆ ಮತ್ತೆ ಆಂಗ್ಲಮಾಧ್ಯಮ ಶಾಲೆಯನ್ನು ಪೆÇ್ರೀತ್ಸಾಹಿಸುತ್ತಿದೆ. ಇದರ ಬಗ್ಗೆ ಸಂಘಟಿತ ಹೋರಾಟದ ಅವಶ್ಯವಿದೆ ಎಂದರು.

ಗೌರವ ಅತಿಥಿsಗಳಾಗಿ ಮೂಲ್ಕಿ ರೋಟರಿಯ ವೈ.ಎನ್ ಸಾಲ್ಯಾನ್, ತೋಕೂರು ಐಟಿಐ ಪ್ರಾಚಾರ್ಯ ಹರಿ ಎಂ.ಎಚ್, ಉಮೇಶ್ ರಾವ್ ಎಕ್ಕಾರು ಉಪಸ್ಥಿತರಿದ್ದು ಡಾ| ಮೋಹನ ಆಳ್ವ ಇವರಿಗೆ `ಸಾಹಿತ್ಯ ಸಿಂಧು' ಪ್ರಶಸ್ತಿ ಮತ್ತು ಕರೋನ ಮಹಾಮಾರಿಯ ಸಮಯದಲ್ಲಿ, ಸಮಾಜದ ಬಡ ಮತ್ತು ದಲಿತ ಜನರಿಗಾಗಿ ಶ್ರಮಿಸಿ ಸಹಾಯ ನೀಡಿದ, ಮುಂಬಯಿಯ ಮುಲುಂಡ್ ನಿವಾಸಿ, ಸಮಾಜ ಸೇವಕಿ ಡಾ| ರಜನಿ ವಿ.ಪೈ ಇವರಿಗೆ `ಸಮಾಜಸೇವಾ ರತ್ನ' ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

ಪಿ.ವಿ.ಪ್ರದೀಪ್ ಕುಮಾರ್ ಅವರ ಪತ್ತೇದಾರಿ ಕಾದಂಬರಿ ಒಳಸುಳಿ ಇದನ್ನು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು. ಕವಿಗೋಷ್ಠಿ, ಕೃತಿ ಬಿಡುಗಡೆ, ಗೀತಗಾಯನದ ವಿಡಿಯೋ ಮುದ್ರಿಕೆ ಬಿಡುಗಡೆ ಮೊದಲಾದ ಕಾರ್ಯಕ್ರಮಗಳು ನಡೆಸಲ್ಪಟ್ಟವು. ಕಥಾಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ವಂದಿಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಪ್ರಸ್ತಾವನೆಗೈದು ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here