Sunday 11th, May 2025
canara news

ಹಿರಿಯ ಹೊಟೆಲು ಉದ್ಯಮಿ ಎ ಟು ಝಡ್ ನಾರಾಯಣ ಆರ್. ಶೆಟ್ಟಿ ಪ್ರಭಾದೇವಿ ನಿಧನ

Published On : 05 Mar 2021   |  Reported By : Rons Bantwal


ಮುಂಬಯಿ, ಮಾ.04: ಬೃಹನ್ಮುಬಂಬಯಿ ಅಲ್ಲಿನ ಪ್ರತಿಷ್ಠಿತ ಮತ್ತು ಹೆಸರಾಂತ ಹಿರಿಯ ಹೊಟೇಲು ಉದ್ಯಮಿ, ಎ ಟು ಝಡ್ ಎಂದೇ ಚಿರಪರಿಚಿತ ನಾರಾಯಣ ರಾಮಣ್ಣ ಶೆಟ್ಟಿ (90.) ವೃದ್ಧಾಪ್ಯ ಸಹಜ ಅಸೌಖ್ಯದಿಂದ ಪ್ರಭಾದೇವಿ ಇಲ್ಲಿನ ಟೆಕ್ನೋ ಕ್ರಾಫ್ಟ್ಟ್ ಹೌಸಿಂಗ್ ಸೊಸೈಟಿಯ ಸ್ವನಿವಾಸದಲ್ಲಿ ಕಳೆದ ಬುಧವಾರ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಕಿನ್ನಿಗೋಳಿ ಸಮೀಪದ ಎಳತ್ತೂರು ನಡ್ಸಾಲ್ ಪಡುಮನೆ ಮೂಲತಃ ಇವರು ಮುಂಬಯಿ ಲೋವರ್ ಪರೇಲ್ ಇಲ್ಲಿನ ಎ ಟು ಝಡ್ ಮಿಲ್ಕ್ ಕಾಂಪ್ಲೆಕ್ಸ್‍ನಲ್ಲಿ ಕ್ಯಾಂಟೀನ್ ಹೊಂದಿದ್ದು, ಸದ್ಗುರು ನಿತ್ಯಾನಂದ ಸ್ವಾಮೀಜಿ ಅವರ ಪರಮ ಭಕ್ತರು ಮತ್ತು ನಿಕಟವರ್ತಿಯಾಗಿ ಸಮಾಜ ಸೇವಕರೆಣಿಸಿದ್ದರು.

ತೆಂಕಣದ ಗಾಣಗಾಪುರ ಎಂದೇ ಜನಜನಿತ ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಆಪ್ತಭಕ್ತರಾಗಿದ್ದು ಒಡಿಯೂರು ಕ್ಷೇತ್ರದ ಪೆÇೀಷಕರಲ್ಲೋರ್ವರಾಗಿದ್ದರು. ಬಾಂಬೇ ಬಂಟ್ಸ್ ಅಸೋಸಿಯೇಶನ್ ಮತ್ತು ಗುರುದೇವ ಸೇವಾ ಬಳಗ ಮುಂಬಯಿ ಘಟಕದ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿ ಉಭಯ ಸಂಸ್ಥೆಗಳ ಎಲಾ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ತೊಡಗಿಸಿ ಕೊಂಡಿದ್ದರು. ಬಂಟ್ಸ್ ಅಸೋಸಿಯೇಶನ್‍ನ ನವಿಮಿಂಬಯಿ ಜೂಹಿನಗರದಲ್ಲಿನ ಬಂಟ್ಸ್ ಸೆಂಟರ್ ಕಟ್ಟಡಕ್ಕೆ ಪ್ರಥಮ ದೇಣಿಗೆ ನೀಡಿ ಪೆÇ್ರೀತ್ಸಹಿಸಿದ್ದರು. ಸದಾ ಧಾರ್ಮಿಕ ಚಿಂತನೆಯಿಂದ ಕೂಡಿದ್ದು ತವರೂರ ದೈವ-ದೇವಸ್ಥಾನಗಳಿಗೆ ಅಪಾರ ದೇಣಿಗೆ ನೀಡುತ್ತಾ ಕೊಡುಗೈ ದಾನಿಯಾಗಿ ಜನಾನುರೆಣಿಸಿದ್ದರು.

ಮೃತರು ಪತ್ನಿ ಜಯಂತಿ ಎನ್.ಶೆಟ್ಟಿ ಸುಪುತ್ರರಾದ ಉಮೇಶ್ ಎನ್.ಶೆಟ್ಟಿ ಮತ್ತು ಯಾದವ ಎನ್.ಶೆಟ್ಟಿ, ಸುಪುತ್ರಿಯರಾದ ಪಾಯಲ್ ಪ್ರಕಾಶ್ ಶೆಟ್ಟಿ, ರಶ್ಮಿ ರತ್ನಾಕರ ಶೆಟ್ಟಿ ಮತ್ತು ಶೈಲಜಾ ಆಶೋಕ್ ಶೆಟ್ಟಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here