Friday 2nd, June 2023
canara news

ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಲ್ಪಟ್ಟ ಸಂಕಷ್ಟ ಚತುರ್ದಶಿ ಪೂಜೆ

Published On : 20 Mar 2021   |  Reported By : Rons Bantwal


ಡ್ರೋನ್ ದ್ರೋಣ ಖ್ಯಾತಿಯ ಕೀರ್ತನ್ ದೇವಾಡಿಗ ಮತ್ತಿತರ ಸೇವಾಕರ್ತರಿಗೆ ಸನ್ಮಾನ

ಮುಂಬಯಿ (ಬಾರ್ಕೂರು), ಮಾ.16: ದೇವಾಡಿಗ ಜನಾಂಗದ ಕುಲದೇವತೆ ಉಡುಪಿ ಬಾರ್ಕೂರು ಇಲ್ಲಿನ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಕಳೆದ ಮಂಗಳವಾರ ಸಂಕಷ್ಟ ಚತುರ್ದಶಿ ಪೂಜೆ ಅದ್ದೂರಿಯಾಗಿ ನೆರವೇರಿಸಲ್ಪಟ್ಟಿತು.

ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರು ಇದರ ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ.ದೇವಾಡಿಗ, ಕೋಶಾಧಿಕಾರಿ ಬಿ.ಜನಾರ್ಧನ ದೇವಾಡಿಗ, ವಿಶ್ವಸ್ಥ ಸದಸ್ಯ ನಾರಾಯಣ ಎಂ.ದೇವಾಡಿಗ, ವಿಶ್ವಸ್ಥ ಸದಸ್ಯ ಹಾಗೂ ಮುಂಬಯಿ ಸಮಿತಿ ಮುಖ್ಯ ಸಂಚಾಲಕ ಹೆಚ್.ಮೋಹನ್‍ದಾಸ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್.ದೇವಾಡಿಗ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ ದೇವಾಡಿಗ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಕೊಡುಗೈದಾನಿಗಳಾದ ಮಲ್ಲಿಕಾ ನಾರಾಯಣ್ ದುಬಾಯಿ, ಕು| ಶಿಖಾ ಎನ್.ದೇವಾಡಿಗ, ಗಣೇಶ್ ರಾವ್ (ಶಾರದಾ ಭವನ) ಮಾಟುಂಗಾ, ವಸಂತಿ ದೇವಾಡಿಗ ಉಡುಪಿ, ಶರ್ಮಿಳಾ ದೇವಾಡಿಗ ಬೈಂದೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪೂಜಾಧಿಗಳ ಬಳಿಕ ಏಕನಾಥೇಶ್ವರಿ ದೇವಸ್ಥಾನದ ಬಾರ್ಕೂರು ಅಜ್ಜಿಮನೆ ಶ್ರೀಮತಿ ಬುಡ್ಡು ರಾಮ ಸೇರಿಗಾರ ಸಭಾಂಗಣದಲ್ಲಿ ಸಮುದಾಯದಲ್ಲಿನ ಯುವ ಪ್ರತಿಭೆ, ಡ್ರೋನ್ ದ್ರೋಣ ಖ್ಯಾತಿಯ ಛಾಯಾಗ್ರಾಹಕ, ವಾಯ್ಸ್ ಆಫ್ ಕರಾವಳಿ (ವೊಕ್ಸ್ ಪೆÇ್ರಡಕ್ಶನ್ ಮಂಗಳೂರು) ಇವರ ಆಡಳಿತ ನಿರ್ದೇಶಕ ಕೀರ್ತನ್ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಹೆಗ್ಡೆ (ಭಟ್) ವಿವಿಧ ಪೂಜೆಗಳನ್ನು ನೆರವೇರಿಸಿ ಸದ್ಭಕ್ತರಿಗೆ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಹೆಚ್.ಮೋಹನ್‍ದಾಸ್ ಸ್ವಾಗತಿಸಿದರು. ನರಸಿಂಹ ಬಿ.ದೇವಾಡಿಗ ಅವರು ಅತಿಥಿüಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ಧನ ದೇವಾಡಿಗ ವಂದಿಸಿದರು.

 
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here