Sunday 11th, May 2025
canara news

ಮಾದಕವಸ್ತು ವಿತರಕ ಕುಖ್ಯಾತ ಅಪರಾಧಿ ಸೋಹೈಲ್ ಮೆಮನ್ ಬಂಧಿಸಿದ ದಯಾ ನಾಯಕ್

Published On : 18 Mar 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮಾ.17: ಬೃಹನ್ಮುಂಬಯಿ ಇಲ್ಲಿನ ಅಂಧೇರಿ ಪಶ್ಚಿಮದ ಜೂಹು ಘಟಕದ ಎಟಿಎಸ್‍ನ ಉಸ್ತುವಾರಿ ಅಧಿಕಾರಿ ಪೆÇೀಲಿಸ್ ಇನ್ಸ್‍ಪೆಕ್ಟರ್ ದಯಾ ನಾಯಕ್ ಅವರು ಕುಖ್ಯಾತ ಅಪರಾಧಿಯಾಗಿದ್ದ ಸೋಹೈಲ್ ಮೆಮನ್ ಅವರನ್ನು ಬಂಧಿಸಿದ್ದಾರೆ.

ಅಂಧೇರಿ ಪಶ್ಚಿಮದ ಭರೂಚಾ ರಸ್ತೆಯ ಲಲ್ಲುಭಾಯ್ ಪಾರ್ಕ್ ಇಲ್ಲಿಗೆ ನಿಷೇಧಿತ ಮಾದಕವಸ್ತು ಖರೀದಿಗೆ ಬರುತ್ತಿದ್ದಾನೆ ಎಂಬ ವಿಶ್ವಾಸಾರ್ಹ ಮಾಹಿತಿ ಪಡೆದ ದಯಾ ನಾಯಕ್ ಮತ್ತು ಎಟಿಎಸ್ ಅಧಿಕಾರಿಗಳ ತಂಡ ಸೋಹೈಲ್‍ಗಾಗಿ ಹೊಂಚು ಹಾಕಿತ್ತು.

ಶಂಕಿತ ಸೋಹೈಲ್ ಮೆಮನ್ ಕೈಯಲ್ಲಿ ಅನುಮಾನಾಸ್ಪದ ವಸ್ತುವಿನೊಂದಿಗೆ ಸ್ಥಳಕ್ಕೆ ಬಂದಾಗ ಸೋಹೈಲ್‍ನನ್ನು ತಪಾಸಣೆ ನಡೆಸಿದಾಗ ನಿಷೇಧಿತ ಮಾದಕವಸ್ತು ಔಷಧ ಮೆಫೆಡ್ರೋನ್ (ಎಂಡಿ) 5.065 ಕೆ.ಜಿ ತೂಕದ ವಸ್ತು ರೆಡ್‍ಹ್ಯಾಂಡ್ ಪತ್ತೆಯಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ರೂಪಾಯಿ 2.53 ಕೋಟಿ ಆಗಿರುತ್ತದೆ.

ಸೊಹೈಲ್ ಮೆಮನ್ ವಿರುದ್ಧ ಅಪರಾಧಿ ಎಟಿಎಸ್ ಸಿಆರ್ ಸಂಖ್ಯೆ 13/ 2021, ಯು / ಸೆಕ್ 8 (ಸಿ) ಆರ್ / ಡಬ್ಲ್ಯೂ 22, 29 ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ನೋಂದಾಯಿಸಿ ಆತನನ್ನು ಬಂಧಿಸಲಾಗಿದೆ. ಜೆ.ಜೀತ್ ಸಿಂಗ್, ಎಡಿಜಿ-ಎಟಿಎಸ್ ನಿರ್ದೇಶನದಂತೆ ಎಟಿಎಸ್, ಜೂಹು ಯುನಿಟ್ ಮತ್ತು ಶಿವದೀಪ್ ಲ್ಯಾಂಡೆ, ಡಿಐಜಿ, ಎಟಿಎಸ್ ಮತ್ತು ಸುಹೇಲ್ ಶರ್ಮಾ, ಎಸ್ಪಿ (ಸಂಶೋಧನೆ ), ಎಟಿಎಸ್-ಎಸಿಪಿ ಶ್ರೀಪಾಡ್ ಕೇಲ್ ಅವರ ನೇರ ಮೇಲ್ವಿಚಾರಣೆಯಲ್ಲಿ ಪೆÇೀಲಿಸ್ ಇನ್ಸ್‍ಪೆಕ್ಟರ್ ದಯಾ ನಾಯಕ್, ಎಪಿಐ ದಶರಥ್ ವಿಟ್ಕರ್, ಎಪಿಐ ಸಾಗರ್ ಕುಂಜೀರ್, ಎಪಿಐ ಸಚಿನ್ ಪಾಟೀಲ್, ಪಿಎಸ್‍ಐ ಅಶೋಕ್ ರಾವೂಲ್ ಮತ್ತು ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here