Sunday 11th, May 2025
canara news

ಪೆÇಳಲಿ; ಹಿರಿಯ ಕಲ್ಲಂಗಡಿ ಕೃಷಿಕ-ಶತಾಯುಷಿ ಕೆ.ಸೇಸು ಸಪಲ್ಯ ನಿಧನ

Published On : 16 Mar 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮಾ.16: ಬಂಟ್ವಾಳ ಇಲ್ಲಿನ ಕರಿಯಂಗಳ ಗ್ರಾಮದ ಪೆÇಳಲಿ ಸಮೀಪದ ಕಂಚೇಶ್ವರ ನಿವಾಸಿ, ಹಿರಿಯ ಕಲ್ಲಂಗಡಿ ಕೃಷಿಕ ಶತಾಯುಷಿ ಕೆ.ಸೇಸು ಸಪಲ್ಯ (102) ಇವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪ್ರಗತಿಪರ ಕೃಷಿಕರಾಗಿ, ತರಕಾರಿ ಮತ್ತು ಕಲ್ಲಂಗಡಿ ಕೃಷಿ ಜೊತೆಗೆ ಜಾನಪದ ಕ್ರೀಡೆ ಕಂಬಳ ಪ್ರೇಮಿಯಾಗಿ, ಪೊಳಲಿ ವಲಯ ಗಾಣಿಗ ಸಂಘದ ಹಿರಿಯ ಸದಸ್ಯರಾಗಿದ್ದರು. ಪೆÇಳಲಿ ಜಾತ್ರೆ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಬೇಗನೆ ಎದ್ದು ದೇವಳಕ್ಕೆ ತೆರಳಿ ಮನೆಗೆ ಬಂದಿದ್ದು, ಹೃದಯಾಘಾತ ಉಂಟಾಗಿ ನಿಧನರಾದರು.
ಮೃತರು ಪತ್ನಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎ ವಿಶ್ವನಾಥ್ ಬಿ.ಸಿ ರೋಡು ಸಹಿತ ಮೂವರು ಸುಪುತ್ರರು, ಏಳು ಸುಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಸಮೀಪದ ಕಂಚೇಶ್ವರ ಗದ್ದೆಯಲ್ಲಿ ಸೋಮವಾರ ಸಂಜೆ ನೆರವೇರಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here