Saturday 2nd, December 2023
canara news

ಕೋವಿಡ್ ನಿಯಂತ್ರಣಕ್ಕೆ ಸುರಕ್ಷಿತ ಅಭ್ಯಾಸಗಳೇ ವೈಯಕ್ತಿಕ ರಕ್ಷಣಾ ಸಾಧನಗಳು

Published On : 17 Apr 2021   |  Reported By : Rons Bantwal


ಮಲಾಡ್ ಮಾರ್ವೇಯ ಚೌಕ್ಸಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ಆರಂಭ

ಮುಂಬಯಿ (ಆರ್‍ಬಿಐ), ಎ.16: ಮಲಾಡ್ ಪಶ್ಚಿಮದ ಮಾರ್ವೇ ರಸ್ತೆಯಲ್ಲಿನ ಚೌಕ್ಸಿ ಆಸ್ಪತ್ರೆಯಲ್ಲಿ ಇಂದಿಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಕೇಂದ್ರವನ್ನು ಆರಂಭಿಸಲಾಯಿತು. ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಉದ್ಘಾಟಿಸಿದರು.

ಕೊರೊನಾ ವೈರಸ್ ಕಾಯಿಲೆ (ಕೋವಿಡ್-19)ಗೆ ಕಾರಣವಾಗುವ ಸಾರ್ಸ್‍ಕೋವ್-2 ಸೋಂಕಿನಿಂದ ಜನÀರನ್ನು ರಕ್ಷಿಸುವಲ್ಲಿ ಕೋವಿಡ್ ಲಸಿಕೆ ಅತ್ಯವಶ್ಯವಾಗಿದೆ. ಈ ಬಗ್ಗೆ ಅನುಮಾನ ಪಡಬೇಕಾಗಿಲ್ಲ. ಕೋವಿಡ್ ಲಸಿಕೆ ಸೋಂಕಿನಿಂದ ರಕ್ಷಿಸುವ ಅಗತ್ಯ ಕ್ರಮಗಳಲ್ಲಿ ಒಂದಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ ಲಸಿಕೆಯ ಫಲಾನುಭವ ಪಡೆದು ಆರೋಗ್ಯವಂತನಾಗಬೇಕು. ಪ್ರತಿಯೊಬ್ಬ ನಾಗರೀಕನ ಸ್ವಸ್ಥತೆಯೇ ಸಮಾಜ, ರಾಷ್ಟ್ರದ ಸ್ವಾಸ್ಥ ್ಯ ಎಂದು ಗೋಪಾಲ್ ಶೆಟ್ಟಿ ತಿಳಿಸಿದರು.

ಪರಸ್ಪರ ಸೇರುವಲ್ಲಿ ಅಪಾಯ ತನ್ನಷ್ಟಕ್ಕೆ ಅವಲಂಬಿಸಿರುತ್ತದೆ ಇವೆಲ್ಲವೂಗಳಿಂದ ಸುರಕ್ಷಿತರಾಗಲು ಮಾಸ್ಕ್ ಧರಿಸುವುದು ಅತೀ ಅಗತ್ಯವಾಗಿದೆ. ಆದ್ದರಿಂದ ಜನರು ತಮ ಸುರಕ್ಷಿತ ಅಭ್ಯಾಸಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸೂಕ್ತ ಸಂಯೋಜನೆಗಳೊಂದಿಗೆ ಬಳಸಿಕೊಂಡು ಸಮಾಜದ ಸಂಪೂರ್ಣ ಕಾಳಜಿ ವಹಿಸಬೇಕು. ಸೋಂಕು ತಡೆಗಟ್ಟುವಿಕೆ ಮತ್ತು ರೋಗ ನಿಯಂತ್ರಣದ ಬಗ್ಗೆ ಸ್ವತಃ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಕಾನೂನು ಪಾಲನಾ ಅನುಸರಣೆ ಎಲ್ಲರ ಜವಾಬ್ದಾರಿ ಆಗಲಿ ಎಂದೂ ಸಂಸದ ಶೆಟ್ಟಿ ಜನರಿಗೆ ಮನವರಿಸಿದರು.

ಸ್ಥಾನೀಯ ನಗರ ಸೇವಿಕಾ ಯೋಗಿತಾ ಸುನಿಲ್ ಕೋಲಿ ಮುಂದಾಳುತ್ವದಲ್ಲಿ ಆರಂಭಿಸಲ್ಪಟ್ಟ ಲಸಿಕೆ ಕೇಂದ್ರದ ಕಾರ್ಯಕ್ರಮದಲ್ಲಿ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಖಂಕರ್, ಕಾರ್ಯದರ್ಶಿ ವಿನೋದ್ ಶ್ಹೆಲಾರ್, ಬಿಜೆಪಿ ಧುರೀಣರಾದ ದೀಪಕ ಜೋಶಿ, ನರೇಂದ್ರ ರಾಥೋಡ್ ಮತ್ತು ಮಂಡಲ್ ವಾರ್ಡ್‍ನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

 




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here