Tuesday 19th, March 2024
canara news

ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಸೇವೆಯಲ್ಲಿ ಬಳಸಿ ಕೊಳ್ಳಿರಿ

Published On : 16 Apr 2021   |  Reported By : Rons Bantwal


ಅಮೆಜಾನ್ (ಭಾರತ) ಸಂಸ್ಥೆಗೆ ಶಿವಸೇನೆ ಧುರೀಣ ಕೃಷ್ಣ ಎಸ್.ಹೆಗ್ಡೆ ಮನವಿ

ಮುಂಬಯಿ (ಆರ್‍ಬಿಐ), ಎ.15: ಕೋವಿಡ್ 19 ಸಾಂಕ್ರಾಮಿಕ ಕಾಲಘಟ್ಟದಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಜೀವನೋಪಾಯವನ್ನೇ ಚಲನಾವೃತ್ತಿಯನ್ನು ಅವಲಂಬಿಸಿ ಕೊಂಡಿದ್ದು, ಸದ್ಯ ದಿನ ಬಾಡಿಗೆಯು ತೀವ್ರಗತಿಯಲ್ಲಿ ಕ್ಷಿಣಿಸಿದ ಪರಿಣಾಮ ದೈನಂದಿನಾ ಸಂಪಾದನಾ ನಷ್ಟವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಮೆಜಾನ್ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿಕ್ಷಾ ಯಾ ಟ್ಯಾಕ್ಸಿ ಚಾಲಕರುನ್ನು ಬಳಸಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವಲ್ಲಿ ಅವಕಾಶ ಒದಗಿಸುವಂತೆ ಅಮೆಜಾನ್ ಜಾಗತಿಕ ಹಿರಿಯ ಉಪಾಧ್ಯಕ್ಷ, ಅಮೆಜಾನ್ (ಭಾರತ) ವ್ಯವಸ್ಥಾಪಕ ನಿರ್ದೇಶಕ ಅಮಿತ್ ಅಗರ್ವಾಲ್ ಇವರಿಗೆ ಅಂಧೇರಿ ಪಶ್ಚಿಮದ ಮಾಜಿ ಶಾಸಕ, ಹಾಲಿ ಶಿವಸೇನೆ ಪಕ್ಷದ ಧುರೀಣ, ಮುಂಬಯಿ ಉಪನಗರಗಳಲ್ಲಿನ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್‍ಗಳ ಒಕ್ಕೂಟ ಆಗಿರುವ ಕಾಮ್ಗಾರ್ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಎಸ್.ಹೆಗ್ಡೆ ಮನವಿ ಮಾಡಿದ್ದಾರೆ.

ಅಮೆಜಾನ್ ಸಂಸ್ಥೆ ಪ್ರಸ್ತುತ ಜಾಗತಿಕವಾಗಿ ಪಸರಿಸಿದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ವಿಶ್ವದ ಅತಿದೊಡ್ಡ ಲಾಜಿಸ್ಟಿಕ್ ಮತ್ತು ಮಾನವಶಕ್ತಿ ತೊಡಗಿಸಿಕೊಳ್ಳುವ ಕಂಪನಿಯೂ ಹೌದು. ಆದ್ದರಿಂದ ಮುಂಬಯಿ ಮತ್ತು ಉಪನಗರಗಳಲ್ಲಿನ ಆಟೋ ರಿಕ್ಷಾ ಯಾ ಟ್ಯಾಕ್ಸಿ ಚಾಲಕರು ಸೇವೆಯನ್ನು ತಮ್ಮ ಸಂಸ್ಥೆಯಲ್ಲಿ ತೊಡಗಿಸಿ ಕೊಂಡು ತಮ್ಮ ಉತ್ಪನ್ನಗಳನ್ನು ತಲುಪಿಸಲು ಅಮೆಜಾನ್ ಗಮನ ಹರಿಸಿದರೆ ಈ ಚಾಲಕರಿಗೆ ಒಪೆÇ್ಪತ್ತಿನ ಊಟದ ಗಳಿಕೆಯನ್ನು ಮಾಡುತ್ತಾ ತಮ್ಮ ಸಂಸಾರ ನಡೆಸಲು ಆಧಾರವಾಗಬಲ್ಲದು.

ಚಾಲಕರು ದೊಡ್ಡ ಪ್ರಮಾಣದ ಮತ್ತು ಬೃಹತ್ ಉತ್ಪನ್ನಗಳನ್ನು ಸಹ ತಲುಪಿಸಬಹುದು. ಈ ಚಾಲಕÀರು ತಮ್ಮ ಕಂಪನಿಗೆ ಸಮಯೋಚಿತ, ವೇಗದ, ವಿಶ್ವಾಸಾರ್ಹ ಕೆಲಸ ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿ ಮಾಡುವÉ ಭರವಸೆ ನಾವು ತಮಗೆ ನೀಡಬಲ್ಲೆ. ಇದು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಈ ಕಷ್ಟದ ಸಮಯದಲ್ಲಿ ಸ್ವಲ್ಪ ಆದಾಯವನ್ನು ಗಳಿಸಲು ಸಹಕಾರಿ ಆಗಬಲ್ಲದು. ಇದು ತಮ್ಮ ಉದ್ಯಮದ ಸಿಎಸ್‍ಆರ್ ಸೇವೆಯ ಉದ್ದೇಶವನ್ನೂ ಪೂರೈಸಿದಂತಾಗಬಹುದು ಎಂದೂ ಪತ್ರದ ಮೂಲಕ ಕೃಷ್ಣ ಹೆಗ್ಡೆ ಮನವಿ ಮಾಡಿದ್ದಾರೆ.




More News

 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್  ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ

Comment Here