Sunday 11th, May 2025
canara news

ಕಲಬುರಗಿ ; ದಕ್ಷಿಣ ಕನ್ನಡ ಸಂಘದ 56ನೇ ಸಂಸ್ಥಾಪನಾದಿನ ಸರಳ ಆಚರಣೆ

Published On : 24 Apr 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.22: ದಕ್ಷಿಣ ಕನ್ನಡ ಸಂಘದ 56ನೇ ಸಂಸ್ಥಾಪನಾ ದಿನವನ್ನು ಕಳೆದ ಬುಧವಾರ (ಎ.21) ರಂದು ಕಲಬುರಗಿಯ ರಾಮ ಮಂದಿರದಲ್ಲಿ ವಿಶೇಷ ಪೂಜೆಯೊಂದಿಗೆ ಸರಳವಾಗಿ ಆಚರಿಸಲಾಯಿತು.

ಸಂಘವನ್ನು 55 ವರ್ಷಗಳ ಹಿಂದೆ ರಾಮನವಮಿಯ ದಿನ ಕಲಬುರಗಿಯಲ್ಲಿ ಹುಟ್ಟು ಹಾಕಲಾಗಿತ್ತು. ಸಾಮಾಜಿಕ, ಸಾಂಸ್ಕøತಿಕ ಸಂಘವಾಗಿ ಬೆಳೆದು ನಿಂತಿದೆ. ಶಿಕ್ಷಣ, ಆರೋಗ್ಯ, ಸಮಾಜ ಸೇವೆಯ ಮೂಲಕ ತನ್ನ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದೆ. ಕೋವಿಡ್ ಹಿನ್ನಲೆಯಲ್ಲಿ ರಾಮ ಮಂದಿರದಲ್ಲಿ ಸಂಸ್ಥಾಪನಾ ದಿನದಂಗವಾಗಿ ಶ್ರೀರಾಮದೇವರಿಗೆ ವಿಶೇಷ ಪೂಜೆ ನೆರವೇರಿಸಿ ಲೋಕ ಕಲ್ಯಾಣರ್ಥವಾಗಿ ಪ್ರಾಥಿರ್üಸಲಾಯಿತು ಎಂದು ಅಧ್ಯಕ್ಷ ಡಾ| ಸದಾನಂದ ಪೆರ್ಲ ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ಅಧ್ಯಕ್ಷ ಡಾ| ಸದಾನಂದ ಪೆರ್ಲ, ಅನ್ನಬ್ರಹ್ಮ ಯೋಜನೆಯ ಸಂಚಾಲಕ ಶ್ರೀನಿವಾಸ ಆಚಾರ್ಯ, ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಪ್ರಶಾಂತ ಪೈ, ಸದಸ್ಯರಾದ ಪ್ರಭಾಕರ ಉಪಾಧ್ಯಾಯ, ಪ್ರಶಾಂತ ಪೈ, ಶ್ರೀಮತಿ ಸುಶೀಲಾ ನಾಗೇಶ್, ಶ್ರೀಮತಿ ಚಂದ್ರಕಲಾ, ರಾಮ ಮಂದಿರದ ವ್ಯವಸ್ಥಾಪಕ ನಿರಂಜನ ರಾವ್, ಅರ್ಚಕರಾದ ನಾಗರಾಜ್ ಆಚಾರ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ರಾಮದೇವರ ವಿಶೇಷ ಪ್ರಸಾದ ಪಾನಕ, ಕೋಸುಂಬರಿ ಪಾಯಸ ವಿತರಿಸಲಾಯಿತು. ಸಂಘದ ಸದಸ್ಯರೆಲ್ಲರೂ ಕೋವಿಡ್ ನಿಯಮ ಪಾಲಿಸಿಕೊಂಡು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸುವಂತೆ ಕೋರಲಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here