Sunday 11th, May 2025
canara news

ಆರ್‍ಎಸ್‍ಎಸ್ ಮಾಟುಂಗಾ ಶಾಖೆಯಿಂದ ಸತೀಶ್ ಆರ್.ನಾಯಕ್‍ಗೆ ಗೌರವಾರ್ಪಣೆ

Published On : 24 Apr 2021   |  Reported By : Rons Bantwal


ಮುಂಬಯಿ, : ರಾಷ್ಟ್ರೀಯ ಸಯಂಸೇವಕ ಸಂಘ (ಆರ್‍ಎಸ್‍ಎಸ್) ಮಾಟುಂಗಾ ನಗರ ಶಾಖೆಯ ಪ್ರಮುಖ ಕಾರ್ಯಕರ್ತರಾದ ಪ್ರಹ್ಲಾದ್ ಡೇ, ಜಗದೀಶ್ ಮತ್ತಿತರರು ಜಿ.ಎಸ್ ಬಿ ಸೇವಾ ಮಂಡಲ ಕಿಂಗ್‍ಸರ್ಕಲ್ ಇದರ ಮುಖ್ಯಸ್ಥ ಸತೀಶ್ ರಾಮ ನಾಯಕ್ ಅವರಿಗೆ ಸ್ಮರಣಿಕೆಯನ್ನುತ್ತು ಗೌರವಿಸಿದರು.

ಇಂದಿಲ್ಲಿ ಬುಧವಾರ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ರಾಮನವಮಿ ಶುಭಾವಸರದಲ್ಲಿ ಅನಿಲ್ ಸಿಂಗ್ ಶ್ಹಾ, ನೈನೇಶ್ ಭಟ್ಟ್, ಆನಂದ್ ವೋರಾ ಆಗಮಿಸಿ ಆರ್‍ಎಸ್‍ಎಸ್‍ನ ಮಾಟುಂಗಾ ನಗರ ಘಟಕವನ್ನು ಮುನ್ನಡೆಸಲು ಹಾಗೂ ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀರಾಮ ಮಂದಿರಕ್ಕೆ ರಾಷ್ಟ್ರವ್ಯಾಪಿ ದೇಣಿಗೆ ಸಂಗ್ರಹಿಸಲು ಶ್ರೀರಾಮ ಮಂದಿರದ ನಿಧಿಸಂಗ್ರಹದ ಅಭಿಯಾನ ನಡೆಸಿ ದೇಣಿಗೆ ಸಂಗ್ರಹಿಸಲು ಸಹಕರಿಸಿದ್ದ ಸತೀಶ್ ನಾಯಕ್ ಅವರ ಸೇವೆಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಪರವಾಗಿ ಮಂದಿರದ ಪ್ರಧಾನ ಆರ್ಚಕ ವೇದಮೂರ್ತಿ ಗೋವಿಂದ ಆಚಾರ್ಯ ಮಹಾಪ್ರಸಾದವನ್ನಿತ್ತು ಅನುಗ್ರಹಿಸಿದರು. ಈ ಸಂದರ್ಭದಲ್ಲಿ ವೇ| ಮೂ| ಸುಧಾಮ ಭಟ್, ವೇ| ಮೂ| ಅನಂತ ಭಟ್, ವೇ| ಮೂ| ಭರತೇಶ್ ಭಟ್ ಕಟಪಾಡಿ, ಸಹ ಪುರೋಹಿತರು, ಮಠದ ಸಮಿತಿ ಕಾರ್ಯಾಧ್ಯಕ್ಷ ಮುಕುಂದ್ ವೈ.ಕಾಮತ್, ಉಪ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಜೊತೆ ಕೋಶಾಧಿಕಾರಿ ಪ್ರವೀಣ್ ಕಾಮತ್, ಮಹೇಶ್ ಭಂಡಾರ್ಕರ್, ಕಮಲಾಕ್ಷ ಜಿ.ಸರಾಫ್, ಹರೀಶ್ಚಂದ್ರ ಶ್ಯಾನ್‍ಭಾಗ್, ಅನ್ಮೋಲ್ ನಾಯಕ್ ಸೇರಿದಂತೆ ಕೆಲವೇ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here