Sunday 11th, May 2025
canara news

ಡಾ| ಕ್ಲೆಮೆಂಟ್ ತೋಮಸ್ ಕುಟಿನ್ಹೋ ಕಿನ್ನಿಗೋಳಿ ನಿಧನ

Published On : 24 Apr 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.24: ಮಂಗಳೂರು ಮೂಡಬಿದ್ರೆ ತಾಲೂಕು ಕಿನ್ನಿಗೋಳಿ ಇಲ್ಲಿನ ಹೆಸರಾಂತ ತಜ್ಞ ಡಾ| ಕ್ಲೆಮೆಂಟ್ ತೋಮಸ್ ಕುಟಿನ್ಹೋ (80.) ಇಂದಿಲ್ಲಿ ಕಿನ್ನಿಗೋಳಿ ಇಲ್ಲಿನ ಗೋಲಿಜೊರ ರಸ್ತೆಯಲ್ಲಿನ ತನ್ನ ಸ್ವನಿವಾಸ ಫ್ಲಾವಿಯಾ ವಿಲ್ಲಾದಲ್ಲಿ ನಿಧನರಾದರು.

ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯ ಬರುವ ಶುಕ್ರವಾರ (ಎ.30) ಸಂಜೆ 3.30 ಗಂಟೆಗೆ ಫ್ಲಾವಿಯಾ ನಿವಾಸದಿಂದ ಹೊರಟು ಬಳಿಕ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್ ಕಿನ್ನಿಗೋಳಿ ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಎಂಬಿಬಿಎಸ್ ವೈದ್ಯಕೀಯ ಸನದು ಪದವೀದರರಾಗಿದ್ದ ಇವರು ಸುಮಾರು 1970 ಇಸವಿಯಲ್ಲಿ ಡಾ| ಕ್ಲೆಮೆಂಟ್ ಕುಟಿನ್ಹೋ ಇವರು ಮುಂಡ್ಕೂರು, ಕಿನ್ನಿಗೋಳಿ ದಾಮಸ್‍ಕಟ್ಟೆ, ಪೆÇಂಪೈ, ಬಳ್ಕುಂಜೆ, ಪಕ್ಷಿಕೆರೆ, ನೀರುಡೆ, ಪರಿಸರದಲ್ಲಿ ತಮ್ಮ ಸ್ವದವಾಖನೆಗಳನ್ನು ಸ್ಥಾಪಿಸಿ ದೀನದಲಿತರಿಗೆ, ಬಡವರಿಗೆ ಧರ್ಮಾರ್ಥ ಚಿಕಿತ್ಸೆ ನೀಡಿ ಉಪಚರಿಸುತ್ತಿದ್ದರು. ಅಲ್ಲದೆ ಇತರ ಅಸ್ವಸ್ಥರಿಗೆ ಬಾರೀ ಕಡಿಮೆ ದರದಲ್ಲಿ ಉಪಚರಿಸುತ್ತ್ತಿದ್ದರು. ಪ್ರಮುಖ ರೋಗಿಗಳ ಇಲಾಜುಗಾಗಿ ಹಗಲಿರುಳು ಚಳಿ,ಮಳೆ ಬಿಸಿಲೆನ್ನದೆ ಎನ್ನದೆ ತನ್ನ ಸ್ವಂತಃ ಕಾರಿನಲ್ಲಿ ದೂರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಮಾಡಿಸುವಲ್ಲಿ ಶ್ರಮಿಸಿದ್ದರು. ಸಾವಿರಾರು ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿ ನಾಡಿನ ಹೆಸರಾಂತ ವೈದ್ಯರಾಗಿ ಬಡವರ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದರು. ಸುಮಾರು ಐದುವರೆ ದಶಕಗಳ ಅದ್ವೈತ ವೈದ್ಯಕೀಯ ಸೇವೆಗೈದು ಜನಾನುರೆಣಿಸಿದ್ದ ಅಪರೂಪದ ಜನಸೇವಕರಾಗಿದ್ದ ಇವರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿರುವರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here