Sunday 11th, May 2025
canara news

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಆಡಳಿತ ಮಂಡಳಿ ಚುನಾವಣೆ

Published On : 29 Apr 2021   |  Reported By : Rons Bantwal


ಶ್ರೀನಿವಾಸ ನಾಯಕ್ ಇಂದಾಜೆ ಭಾರೀ ಮತಗಳಿಂದ ಜಯಭೇರಿ

ಮುಂಬಯಿ (ಆರ್‍ಬಿಐ), ಎ.27: ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಗೆ ಇಂದಿಲ್ಲಿ ಚುನಾವಣೆ ನಡೆಸಲ್ಪಟ್ಟಿತು. 15 ಸ್ಥಾನಗಳ ಆಡಳಿತ ಮಂಡಳಿಗೆ 9 ಸಾಮಾನ್ಯ ಸ್ಥಾನಕ್ಕೆ 12 ಸ್ಪರ್ಧಿಗಳು ಮತ್ತು ಹಿಂದುಳಿದ ವರ್ಗ ಎ ಮೀಸಲು 2 ಸ್ಥಾನಗಳಿಗೆ 7 ಸ್ಪರ್ಧಿಗಳು ಕಣದಲ್ಲಿದ್ದು ಆ ನಿಮಿತ್ತ ಚುನಾವಣೆ ಏರ್ಪಟ್ಟಿತ್ತು. ಇಂದು ಮಂಗಾಳವಾರ ಬೆಳಿಗ್ಗೆನಿಂದ ಸಂಜೆ ವರೆಗೆ ಮಂಗಳೂರು ಉರ್ವಾ ಲೇಡಿಹಿಲ್ಲ್ ಇಲ್ಲಿನ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಸಲ್ಪಟ್ಟಿದ್ದು ಸಹಕಾರಿ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

9 ಸಾಮಾನ್ಯ ಸ್ಥಾನಗಳಿಗೆ ಶ್ರೀನಿವಾಸ ನಾಯಕ್ ಇಂದಾಜೆ (ದಿ ನ್ಯೂಸ್ 24 ಮಂಗಳೂರು ವರದಿಗಾರ), ಭಾಸ್ಕರ್ ರೈ ಕಟ್ಟಾ (ಸುದ್ದಿ ಬಿಡುಗಡೆ ಮಂಗಳೂರು), ಪುಷ್ಪರಾಜ್ ಬಿ.ಎನ್ (ಬ್ಯೂರೋ ಚೀಫ್, ವಾರ್ತಾ ಭಾರತಿ ಮಂಗಳೂರು) ಭಾರೀ ಮತಗಳಿಂದ ವಿಜೇತರಾಗಿದ್ದು ಸುಖ್‍ಪಾಲ್ ಪೆÇಳಲಿ (ಪಬ್ಲಿಕ್ ಟಿವಿ ಮಂಗಳೂರು), ಇಬ್ರಾಹಿಂ ಅಡ್ಕಸ್ಥಳ (ವಾರ್ತಾ ಭಾರತಿ ಮಂಗಳೂರು), ಜಿತೇಂದ್ರ ಭಟ್ ಕುಂದೇಶ್ವರ (ವಿಶ್ವವಾಣಿ ಮಂಗಳೂರು), ಕೆ.ವಿಲ್ಫ್ರೇಡ್ ಡಿಸೋಜಾ (ಟಿವಿ9 ಕೆಮಾರಾಮೆನ್ ಮಂಗಳೂರು), ಆತ್ಮಭೂಷಣ್ ಭಟ್ (ಕನ್ನಡಪ್ರಭ ಮಂಗಳೂರು), ಕೇಶವ ಕುಂದರ್ (ಉದಯವಾಣಿ ಮಂಗಳೂರು) ಅತಾಧಿಕ ಮತಗಳಿಂದ ಚುನಾಯಿತರಾದರು. ಹಿಂದುಳಿದ ವರ್ಗ ಎ ಮೀಸಲು 2 ಸ್ಥಾನಗಳಿಗೆ ಸ್ಪರ್ಧಿಸಿದ್ದ ಮಹಮ್ಮದ್ ಆರೀಫ್ ಪಡುಬಿದ್ರೆ ಮತ್ತು ವಿಜಯ ಕೋಟ್ಯಾನ್ ಪಡು (ವಿಜಯ ಕರ್ನಾಟಕ ಮಂಗಳೂರು) ಚುನಾಯಿತರಾಗಿದ್ದಾರೆ.

ಪರಿಶಿಷ್ಟ ಜಾತಿ (ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‍ಟಿ) ಮೀಸಲು ಸ್ಥಾನಕ್ಕೆ ಎರಡೇ ಉಮೇದುವರರು ಮಾತ್ರ ಕಣದಲ್ಲಿದ್ದು ಎಸ್‍ಸಿ ಮೀಸಲು ಸ್ಥಾನದಿಂದ ಸುರೇಶ್ ಡಿ., (ಹೊಸದಿಗಂತ ಮಂಗಳೂರು) ಮತ್ತು ಎಸ್‍ಟಿ ಸ್ಥಾನಕ್ಕೆ ಹರೀಶ್ ಮೋಂಟುಕಾನ (ವಿಜಯವಾಣಿ ಮಂಗಳೂರು) ಇಬ್ಬರೇ ಆಕಾಂಕ್ಷಿಗಳಾಗಿದ್ದರು. ಮಹಿಳಾ ಮೀಸಲು 2 ಸ್ಥಾನಗಳಿಗೂ ಎರಡೇ ಉಮೇದುವರರು ಮಾತ್ರ ಕಣದಲ್ಲಿದ್ದು ಸತ್ಯವತಿ (ವಾರ್ತಾ ಭಾರತಿ ಮಂಗಳೂರು) ಮತ್ತು ಶಿಲ್ಪಾ ಕುಮಾರಿ (ನಮ್ಮ ಟಿವಿ ವರದಿಗಾರ್ತಿ) ಸ್ಪರ್ಧಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದರು.

ಶ್ರೀನಿವಾಸ ನಾಯಕ್ ಇಂದಾಜೆ ಮೂಲತಃ ಪುತ್ತೂರು ಈಶ್ವರಮಂಗಳ ಇಲ್ಲಿನ ಇಂದಾಜೆ ಅಟ್ಲಾರು ನಿವಾಸಿ ಆಗಿದ್ದು ಸದ್ಯ ಇಡೀ ಕರ್ನಾಟಕಕ್ಕೆ ಮಾದರಿ ಪತ್ರಕರ್ತ ಸಂಸ್ಥೆಗೆ ಕಾರಣಕರ್ತರಾದ ಸಕ್ರೀಯ ಪತ್ರಕರ್ತ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಡಿಕೆಕೆಡಬ್ಲೂ ್ಯಜೆಎಸ್) ಇದರ ಅಧ್ಯಕ್ಷರಾಗಿದ್ದಾರೆ. ಪ್ರೆಸ್‍ಕ್ಲಬ್ ಆಫ್ ಮಂಗಳೂರು, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ದಕ್ಷಿಣ ಕನ್ನಡ ಇದರ ಸಕ್ರೀಯ ಸದಸ್ಯರೂ ಆಗಿ ನಾಡಿನಾದ್ಯಂತ ಭಾರೀ ಜನಮನ್ನಣೆ ಪಡೆದ ಪಾದರಸ ಚಟುವಟಿಕೆ ಪತ್ರಕರ್ತರಾಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here