Saturday 10th, May 2025
canara news

ದುಬಾಯಿನಲ್ಲಿ ತುಳುನಾಡಸೂರ್ಯಡಾಟ್‍ಕಾಂ ವೆಬ್‍ಸೈಟ್ ಅನಾವರಣ

Published On : 29 Apr 2021   |  Reported By : Rons Bantwal


ಮಾದ್ಯಮಗಳು ಭಾಷಾ ಏಳಿಗೆಯ ಜೀವನಾಡಿ : ಡಾ| ಫ್ರಾಂಕ್ ಫೆರ್ನಾಂಡಿಸ್

ಮುಂಬಯಿ (ಆರ್‍ಬಿಐ), ಎ.28: ಗಲ್ಫ್ ರಾಷ್ಟ್ರದ ದುಬಾಯಿ (ಯುಎಇ) ಇಲ್ಲಿನ ಬರ್-ದುಬೈಯಲ್ಲಿ ಗಲ್ಫ್ ದೇಶದಲ್ಲಿ ನೆಲೆಸಿರುವ ಪ್ರತಿಷ್ಠಿತ ಅನಿವಾಸಿ ಭಾರತೀಯ ಉದ್ಯಮಿ, ಫರ್ನ್'ಸ್ ಮೂವೀ ಇಂಟರ್ ನ್ಯಾಷನಲ್‍ನ ನಿರ್ದೇಶಕ, ಅಂತಾರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಕೆಮ್ಮಣ್ಣು (ದುಬಾಯಿ) ಮಂಗಳವಾರ (ಎ.27) ತಮ್ಮ ದಿವ್ಯ ಹಸ್ತದಿಂದ ತುಳುನಾಡಸೂರ್ಯ ಡಾಟ್‍ಕಾಂ ವೆಬ್‍ಸೈಟ್ ಅನಾವರಣ ಗೊಳಿಸಿದರು.

ಮಾದ್ಯಮಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಿ ಸಮಾಜದ ಹಿತ ಕಾಯುವಲ್ಲಿ ಶ್ರಮಿಸಬೇಕು. ತುಳುನಾಡ ತುಳುನಾಡಸೂರ್ಯ ವೆಬ್‍ಸೈಟ್ ಹಾಗೂ ತುಳುನಾಡ ಸೂರ್ಯ ಮಾಸಿಕ ಪತ್ರಿಕೆಯು ಇದೀಗಲೇ ಲೋಕಾರ್ಪಣೆ ಆಗಿದ್ದು ಸಮಾಜ ಜನರ ಬದುಕಿನ ಏಳಿಗೆಗೆ ಜೀವನಾಡಿ ಆಗಿ ಕಾರ್ಯನಿರ್ವಾಹಿಸುತ್ತಿದೆ. ಇವು ನೂರಾರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಕಟಿತಗೊಂಡು ಜನಮಾನಸಗಳಲ್ಲಿ ಬೆಳಗಲಿ ಎಂದು ಫ್ರಾಂಕ್ ಫೆರ್ನಾಂಡಿಸ್ ಹಾರೈಸಿದರು.

ಈ ಸಂದರ್ಭದಲ್ಲಿ ಬಹುಭಾಷಾ ಚಲನಚಿತ್ರ ನಟ ಹ್ಯಾರಿ ಫೆರ್ನಾಂಡಿಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಝೂಮ್ ಜಾಲತಾಣದ ಮುಖೇನ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here