Saturday 10th, May 2025
canara news

ಸಿಟಿ ಸ್ಕಾ ್ಯನ್ ನೆಪದಲ್ಲಿ ಲೋನಾವಾಲಾ ಡಯಾಗ್ನೋಸ್ಟಿಕ್ ಸೆಂಟರ್ ವಂಚನೆ

Published On : 04 May 2021   |  Reported By : Rons Bantwal


ಅಮಾಯಕರಿಗೆ ಹಣ ಮರಳಿಸಿ ಕೊಟ್ಟ ನಗರಸೇವಕ ಶ್ರೀಧರ್ ಪೂಜಾರಿ

ಮುಂಬಯಿ (ಆರ್‍ಬಿಐ), ಮೇ.04: ಕೋವಿಡ್ 19 ಎಂಬ ಸಾಂಕ್ರಾಮಿಕ ಕಾಯಿಲೆಯಿಂದ ಸೋಂಕಿತ ರೋಗಿಗಳ ಸಿಟಿ ಸ್ಕ್ಯಾನ್ ಪರೀಕ್ಷೆಯನ್ನು ಲೋನಾವಾಲಾ ಮುನ್ಸಿಪಲ್ ಕೌನ್ಸಿಲ್‍ನ ಅಧೀನದಲ್ಲಿರುವ ಲೋನಾವಾಲಾ ರೋಗನಿರ್ಣಯ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಸಿಟಿ ಸ್ಕ್ಯಾನ್‍ಗೆ ಸರ್ಕಾರ ಒಂದು ಮೊತ್ತವನ್ನು ನಿಗದಿಪಡಿಸಿ ಅದಕ್ಕೆ ಅನುಗುಣವಾಗಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಧಿಕ್ಕರಿಸಿ ಲೋನಾವಾಲಾ ಡಯಾಗ್ನೋಸ್ಟಿಕ್ ಸೆಂಟರ್ ಸಿಟಿ ಸ್ಕಾ ್ಯನ್ ಪರೀಕ್ಷೆಯ ಸೋಗಿನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಸುಲಿಗೆ ಮಾಡುವ ಮೂಲಕ ರೋಗಿಗಳನ್ನು ವಂಚಿಸುತ್ತಿತ್ತು. ನಾಗರಿಕರ ಅನೇಕ ರೋಗಿಗಳ ದೂರುಗಳನ್ನು ಪಡೆದ ಲೋನಾವಾಲಾ ಇಲ್ಲಿನ ಬಿಜೆಪಿ ಧುರೀಣ, ಲೋನವಲಾ ನಗರ ಪರಿಷತ್‍ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ (ಕಾರ್ಕಳ) ಇದನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡು ವಂಚನೆಗೆ ಒಳಪಟ್ಟ ಅಮಾಯಕರಿಗೆ ಹೆಚ್ಚುವರಿ ಮೊತ್ತ ಹಿಂತಿರುಗಿಸುವಲ್ಲಿ ಸಫಲರಾಗಿದ್ದಾರೆ.

ದೂರುಗಳನ್ನು ಸ್ವೀಕರಿಸಿದ ಶ್ರೀಧರ್ ಪೂಜಾರಿ ಅವರು ಲೋನಾವಾಲಾ ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಪ್ರಕಾರ, ಡಯಾಗ್ನೋಸ್ಟಿಕ್ ಸೆಂಟರ್ ಸುಮಾರು 100 ಜನರ ಹಣವನ್ನು ಸುಮಾರು ರೂಪಾಯಿ 3.00 ಲಕ್ಷ ಮೊತ್ತವನ್ನು ಹಿಂತಿರುಗಿಸುವಲ್ಲಿ ಯಶಕಂಡಿದ್ದಾರೆ. ಸಿಟಿ ಸ್ಕಾ ್ಯನಿಂಗ್ ಹೆಸರಿನಲ್ಲಿ ನಾಗರಿಕರಿಂದ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರವÀನ್ನು ತೆಗೆದುಕೊಂಡ ಡಯಾಗ್ನೋಸ್ಟಿಕ್ ಸೆಂಟರ್ ಸಿಟಿ ಸ್ಕಾ ್ಯನ್ ಮಾಡಿಸಿಕೊಂಡ ಜನರಿಗೆ ಸ್ಪಂದಿಸಿ ನಾಗರಿಕರ ಹಣ ಮರಳಿಸಿದೆ. ಕೋವಿಡ್ ಸಂಕಷ್ಟದ ಭೀಕರ ಕಾಲದಲ್ಲಿ ಒಪೆÇ್ಪತ್ತಿಗೆ ಊಟದ ವ್ಯವಸ್ಥೆಗೂ ಪರದಾಡುತ್ತಿರುವ ತಮಗೆ ಸಕಾಲದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಟ್ಟ ಶ್ರೀಧರ್ ಪೂಜಾರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here