Saturday 10th, May 2025
canara news

ನೈಸರ್ಗಿಕ ಹವಾಮಾನ-ಆಮ್ಲಜನಕ ಸೇವಿಸಿ ಬದುಕು ಆನಂದಿಸುವ ಮಾರ್ಜಲ

Published On : 04 May 2021   |  Reported By : Rons Bantwal


ಶ್ವಾನದ ಬಾಯಿಗೆ ಬೆಕ್ಕು ಗಾಳಿ ನೀಡಿ ಶ್ವಾಸಕೋಶ ಸದೃಢ ಪಡಿಸುವ ದೃಶ್ಯ

(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮೇ.04: ಬಾಯಿಗೆ ಗಾಳಿ ಊದಿ ಜೀವ ಉಳಿಸಲು ಯತ್ನ ಇದು ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಾದ ಘಟನೆ. ಆಮ್ಲಜನಕ ಕೊರತೆಯಿಂದಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ನರಳುತ್ತಿರುವ ತಮ್ಮವರನ್ನು ರಕ್ಷಿಸಲು ಸದ್ಯ ಕುಟುಂಬಸ್ಥÀರು ಪಡುತ್ತಿರುವ ಪ್ರಯತ್ನಗಳು, ಸಂಕಷ್ಟಗಳು ಹೇಳತೀರದು. ತಮ್ಮ ಬಾಯಿಯಿಂದ ಅಸ್ವಸ್ಥರ ಬಾಯಿಗೆ ಗಾಳಿ ನೀಡುವ ಮೂಲಕ ನೈಸರ್ಗಿಕವಾಗಿ ಆಮ್ಲಜನಕ ಒದಗಿಸಿ ಸಾವಿನಿಂದ ಪಾರು ಮಾಡಲು ಹರಸಾಹಸ ಪಡುತ್ತಿರುವುದು. ಇದಕ್ಕೆ ಸರಿಸಾಟಿ ಎಂಬಂತೆ ಒಂದು ಬೆಕ್ಕು ತನ್ನ ಸಹಪಾಠಿ ಶ್ವಾನಕ್ಕೆ ಬಾಯಿಗೆ ಗಾಳಿ ನೀಡಿ ಶ್ವಾಸಕೋಶ ಸದೃಢ ಪಡಿಸುವಂತೆ ಕಂಡ ದೃಶ್ಯವಿದು.

ನಮ್ಮ ಪೂರ್ವಜರು ತಮ್ಮ ಭಾವೀ ಪೀಳಿಗೆಯ ಬಾಳಿನ ದೂರದೃಷ್ಠಿ ಹರಿಸಿ ಸಾಲುಸಾಲು ಗಿಡಮರಗಳನ್ನು ನೆಟ್ಟು ನೈಸರ್ಗಿಕ ಆಮ್ಲಜನಕಕ್ಕೆ ಒತ್ತು ನೀಡಿದ್ದರು. ಆದರೆ ಸದ್ಯದ ಪೀಳಿಗೆ ಮೋಜು ಮಸ್ತಿ, ಶ್ರೀಮಂತಿಕೆಯ ಬಾಳಿಗಾಗಿ ಇದ್ದದ್ದನ್ನೂ ಕಡಿದು ಕೃತಕ ಕಾಂಕ್ರೇಟ್ ಕಾಡು ನಿರ್ಮಿಸಿದ ಪರಿಣಾಮ ಇಂದು ನಾವು ಖುದ್ಧಾಗಿ ಅನುಭವಿಸುತ್ತಿರುವುದು ಶೋಚನೀಯ ಎಂದಣಿಸುತ್ತಿದೆ. ಮೂಕ ಪ್ರಾಣಿಗಳು ಸ್ವತಃ ಪ್ರಾಣಪಕ್ಷಿ ರಕ್ಷಿಸಿ ಕೊಳ್ಳಲು ಸದ್ಯದ ಬೆಚ್ಚಗಿನ ವಾತಾವರಣದಲ್ಲಿ ಪ್ರಾಕೃತಿಕ ತಂಪಿನ ಮಣ್ಣಲ್ಲಿ (ಗಿಡದ ಕುಡಿಕೆ) ಕುಂಡದಲ್ಲಿ ನಿದ್ರಿಸಿ ನೈಸರ್ಗಿಕವಾಗಿ ಆಮ್ಲಜನಕ ಸೇವಿಸಿ ಬದುಕು ಆನಂದಿಸುವ ಮಾರ್ಜಲ (ಬೆಕ್ಕು)ವನ್ನು ಕಂಡಾಗ ಬುದ್ಧಿವಂತ ಮಾನವರು ಬುದ್ಧುಜೀವಿಗಳಾಗಿ ಬದುಕುತ್ತಿರುವುದೇ ಮೂರ್ಖತನ ಅಲ್ಲವೇ....?




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here