Friday 29th, March 2024
canara news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ

Published On : 08 May 2021   |  Reported By : Rons Bantwal


ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷರಿಗೆ ತಡೆ ಹಿಡಿದ ಅಧಿಕಾರಿಗಳು
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.06: ಉತ್ತರ ಮುಂಬಯಿ ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ, ತುಳುಕನ್ನಡಿರ, ಉದ್ಯಮಿಗಳಲ್ಲಿನ ಮುಂಬಯಿಯ ಪ್ರಭಾವಿ ವ್ಯಕ್ತಿ ಎಂದೇ ಹೆಸರಾಂತ ಎರ್ಮಾಳ್ ಹರೀಶ್ ಶೆಟ್ಟಿ ಕಳೆದ ಬುಧವಾರ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಮಂಗಳೂರು ಪ್ರಯಾಣಿಸಿದ್ದರು. ಕೋವಿಡ್ ಎರಡೂ ಲಸಿಕೆಗಳನ್ನು ಪಡೆದು 20 ದಿನಗಳ ಬಳಿಕ ಭಾರತದಲ್ಲಿ ಅಂದರೆ ಅಂತರಾಜ್ಯ ಪ್ರಯಾಣಿಸುವ ಆರೋಗ್ಯವಂತ ಜನರಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಗಳ ದೃಢೀಕರಣ ಪತ್ರ ಅಗತ್ಯವಿಲ್ಲ ಅದನ್ನು ತೆಗೆದು ಹಾಕಲಾಗಿದೆ ಎಂದು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಪ್ರಕಟವಾಗಿದ್ದ ಸುತ್ತೋಲೆ ಮಾನದಂಡವಾಗಿಸಿ ಹಾಗೂ ಕೋವಿಡ್ ಎರಡೂ ಲಸಿಕೆಗಳನ್ನು ಪಡೆದ ಪ್ರಮಾಣಪತ್ರವನ್ನು ಜೊತೆಗಿರಿಸಿ ಪ್ರಯಾಣ ಬೆಳೆಸಿದ್ದರು. ಅಂತೆಯೇ ಮುಂಬಯಿ ವಿಮಾನ ನಿಲ್ದಾಣದಲ್ಲಿ ಯಾವುದೇ ಅಡೆತಡೆವಿಲ್ಲದೆ ಮಂಗಳೂರು ತಲುಪಿದ್ದರು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನಿಲ್ದಾಣದಲ್ಲಿನ ಆರೋಗ್ಯ ತಪಸಣಾ ಅಧಿಕಾರಿಗಳು ಆರ್‍ಟಿ-ಪಿಸಿಆರ್ ಪ್ರಮಾಣಪತ್ರ ವಿನಹಃ ಹೊರಗೆ ಬಿಡಲಾಗುವುದಿಲ್ಲ ಎಂದಾಗ ಸರಕಾರಿ ಅಧಿಕಾರಿಗಳೇ ತಪಾಸನೆಗೈದು ಮುಂಬಯಿನಿಂದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವ ಬೋರ್ಡಿಂಗ್ ಪಾಸ್, ಇನ್ನಿತರ ಪ್ರಮಾಣಪತ್ರಗಳು ಇದೆ ಎಂದರೂ ಆರೋಗ್ಯಾಧಿಕಾರಿಯೋರ್ವ ತಮ್ಮ ಕರ್ತವ್ಯವನ್ನೇ ವಸ್ತುಸ್ಥಿತಿಯಾಗಿಸಿ ರೂಪಾಯಿ 800/- ನಗದು ಕಟ್ಟುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಆದರೆ ಎರ್ಮಾಳ್ ಇದನ್ನು ನಿರಾಕರಿಸಿ ನ್ಯಾಯಕ್ಕಾಗಿ ಅಲ್ಲಿಂದಲೇ ಮಂಗಳೂರು ಸಂಸÀದ ನಳೀನ್‍ಕುಮಾರ್ ಕಟೀಲ್‍ಗೆ ಪೆÇೀನಾಯಿಸಿ ದೇಶದೊಳಗಿನ ರಾಜ್ಯಗಳ ಪ್ರಯಣಕ್ಕೆ ಒಂದೊಂದು ಕಾನೂನುಗಳ ಬಗ್ಗೆ ಸ್ಪಷ್ಟೀಕರಣ ಕೇಳಿದರು ಎನ್ನಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಗಳವಾರ ಆರ್‍ಟಿ-ಪಿಸಿಆರ್ (Reverse Transcription - Polymerase Chain Reaction) ಪರೀಕ್ಷೆಯನ್ನು ಉತ್ತಮ ಗೊಳಿಸಲು ಮತ್ತು ಸಿಒವಿಐಡಿ-19 ಪ್ರಕರಣಗಳ ಹೆಚ್ಚಳದ ಮಧ್ಯೆ ಪರೀಕ್ಷೆಯ ಲಭ್ಯತೆಯನ್ನು ಹೆಚ್ಚಿಸಲು ಸಲಹೆ ನೀಡಿದೆ. ಅಂತರರಾಜ್ಯ ದೇಶೀಯ ಪ್ರಯಾಣವನ್ನು ಕೈಗೊಳ್ಳುವ ಆರೋಗ್ಯವಂತ ವ್ಯಕ್ತಿಗಳಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಎಂದು ಐಸಿಎಂಆರ್ ಹೇಳಿದೆ. ಲಕ್ಷಣರಹಿತ ದೇಶೀಯ ಪ್ರಯಾಣಿಕರು ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಅನುಸರಿಸಬೇಕು ಎಂಬುವುದನ್ನು ಮನವರಿಸಿರುವೆ. ಅಂತೆಯೇ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಅತ್ಯುತ್ತಮವಾಗಿಸಲು ಶಿಫಾರಸು ಮಾಡಲಾದ ಕ್ರಮಗಳಂತೆ(RAT- Rapid Antigen Tests) ಅಥವಾ ಆರ್‍ಟಿ-ಪಿಸಿಆರ್‍ನಿಂದ ಒಮ್ಮೆ ಧನಾತ್ಮಕ ಪರೀಕ್ಷೆ ಮಾಡಿದ ಯಾವುದೇ ವ್ಯಕ್ತಿಯಲ್ಲಿ ಆರ್‍ಟಿ-ಪಿಸಿಆರ್ ಪರೀಕ್ಷೆ ಪುನರಾವರ್ತಿಸ ಬಾರದು. ಒiಟಿisಣಡಿಥಿ oಜಿ ಊeಚಿಟಣh ಚಿಟಿಜ ಈಚಿmiಟಥಿ Weಟಜಿಚಿಡಿe ಅಂದರೆ ಒoಊ & ಈWನ ಡಿಸ್ಚಾರ್ಜ್ ನೀತಿಗೆ ಅನುಸಾರವಾಗಿ ಆಸ್ಪತ್ರೆಯ ವಿಸರ್ಜನೆಯ ಸಮಯದಲ್ಲಿ ಕೋವಿಡ್-19 ಚೇತರಿಸಿಕೊಂಡ ವ್ಯಕ್ತಿಗಳಿಗೆ ಯಾವುದೇ ಪರೀಕ್ಷೆಯ ಅಗತ್ಯವಿಲ್ಲ. ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಮಾಡಲು ಅಂತರರಾಜ್ಯ ದೇಶೀಯ ಪ್ರಯಾಣವನ್ನು ಕೈಗೊಳ್ಳುವ ಆರೋಗ್ಯವಂತ ವ್ಯಕ್ತಿಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆಯ ಅಗತ್ಯವನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ರೋಗಲಕ್ಷಣದ ವ್ಯಕ್ತಿಗಳ ಅನಿವಾರ್ಯವಲ್ಲದ ಪ್ರಯಾಣ ಮತ್ತು ಅಂತರರಾಜ್ಯ ಪ್ರಯಾಣ (ರೋಗ ಲಕ್ಷಣಗಳಂತಹ ಅಔಗಿIಆ19 ಅಥವಾ ಜ್ವರ) ಮೂಲಭೂತವಾಗಿ ತಪ್ಪಿಸಬೇಕು. ಅಗತ್ಯ ಪ್ರಯಾಣವನ್ನು ಕೈಗೊಳ್ಳುವ ಎಲ್ಲ ಲಕ್ಷಣರಹಿತ ವ್ಯಕ್ತಿಗಳು ಕೋವಿಡ್ ಅನುಮೋದನೆಯ ನಡವಳಿಕೆಯನ್ನು ಅನುಸರಿಸಬೇಕು. ಮೊಬೈಲ್ ಪರೀಕ್ಷಾ ಪ್ರಯೋಗಾಲಯಗಳು ಈಗ ಜಿಎಂ ಪೆÇೀರ್ಟಲ್‍ಗಳಲ್ಲಿ ಲಭ್ಯವಿದೆ. ಮೊಬೈಲ್ ವ್ಯವಸ್ಥೆಗಳ ಮೂಲಕ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಪೆÇ್ರೀತ್ಸಾಹಿಸಲಾಗುತ್ತದೆ ಎಂಬುವುದರ ಬಗ್ಗೆ ಎರ್ಮಾಳ್ ಆರೋಗ್ಯ ತಪಸಣಾ ಅಧಿಕಾರಿಗೆ ವಿವರಿಸಿದರೂ ಆ ಬಗ್ಗೆ ನಮಗೇನೂ ಮಾಹಿತಿಯಿಲ್ಲ ಎಂದು ರೂಪಾಯಿ 800/- ಕಟ್ಟಲು ಒತ್ತಾಯಿಸಿದರು ಎನ್ನಲಾಗಿದೆ .

ಹಣ ಕಟ್ಟಲು ಬಲವಾಗಿ ನಿರಾಕರಿಸಿದ ಹರೀಶ್ ಅವರ ವಾದವಿವಾದ ಮುಂದುವರಿಯುತ್ತಿದ್ದತೆಯೇ ಪೆÇೀಲಿಸರ ಆಗಮನವಾಗಿದ್ದು ನನಗೆ ಹಣ ಕಟ್ಟುವ ಪ್ರಶ್ನೆಯಲ್ಲ ಇದು ಸಾರ್ವಜನಿಕರಿಗೆ ಆಗುವ ಸಮಸ್ಯೆ, ಅನ್ಯಾಯ ಎಂದೆಲ್ಲಾ ವಾಗ್ದಾನ, ಹಂಗಾಮ ಮುಂದುವರಿಯಿತು. ಅಷ್ಟರಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೆÇೀಲಿಸ್ ಅಧಿಕಾರಿ ಗೋಪಾಲ್ ಕುಂದರ್ ಮಧ್ಯಸ್ಥಿಕೆ ವಹಿಸಿ ಎರಡು ಕಡೆಗೂ ಸಮಜಾಯಿಸಿ ಘಟನೆಯನ್ನು ತಣ್ಣಗಾಗಿಸಿದರು.

ಎರ್ಮಾಳ್ ಹರೀಶ್ ಹೇಳುವಂತೆ ರೂಪಾಯಿ 800/- ಕಟ್ಟಿದ್ದಲ್ಲಿ ಯಾವನೇ ವ್ಯಕ್ತಿಯೊಳಗಿದ್ದ ಕೊರೋನಾ ಹಣದ ಜೊತೆ ಹೋಗಿ ಬಿಡುತ್ತದೆಯೇ...? ಹಣ ಪಾವಿತಿಸಿದರೆ ಆರ್‍ಟಿಪಿಸಿಆರ್ ವರದಿ ಬೇಡ ಎಂದಾಯಿತಲ್ಲವೇ..? ಅವರು ತಿಳಿಸಿದ ಮೊತ್ತ ಕಟ್ಟಿದಾಕ್ಷಣ ಎಲ್ಲವೂ ಸುಖ್ಯಾಂತವಾಗುವಂತಿದ್ದರೆ ಕೊರೋನಾ ನೆಪ ಹಣ ಮಾಡುವ ಉದ್ದೇಶ ಎಂದಾಯಿತಲ್ಲವೇ ಎಂದು ಜಿಜ್ಞಾಸೆ ವ್ಯಕ್ತ ಪಡಿಸಿದ್ದಾರೆÉ. ಒಂದೇ ದೇಶದೊಳಗಿನ ನಾಗರಿಕ ವಿಮಾನಯಾನ ಅಧಿಕಾರ ಅಥವಾ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆಯು ರಾಜ್ಯಕ್ಕೊಂದು ಕಾನೂನು ಮಾಡಿದೆಯೇ ಅಥವಾ ರಾಜ್ಯ ಸರಕಾರ ಇಂತಹ ಆದೇಶವನ್ನು ಯಾವ ಉದ್ದೇಶಕ್ಕಾಗಿ ಜಾರಿಯಲ್ಲಿರಿಸಿದೆ ಎಂದು ಸ್ವಪಕ್ಷೀಯ ಸರಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

 

Need for RT-PCR tests for healthy people travelling in India may be removed: ICMR

The Indian Council of Medical Research (ICMR) on Tuesday issued and advisory to “optimize” RT-PCR testing and increase the availability of testing amid a surge in COVID-19 cases. “The need of RT-PCR test [for]healthy individuals undertaking inter-state domestic travel may be completely removed” said ICMR. asymptomatic domestic travelers must follow COVID-19 appropriate behaviours, it added.

 

Recommended measures to optimize RTPCR testing.

1. RTPCR test must not be repeated in any individual who has tested positive once either by

RAT or RTPCR.

2. No testing is required for COVID-19 recovered individuals at the time of hospital discharge in

accordance with the discharge policy of MoH&FW

(https://www.mohfw.gov.in/pdf/ReviseddischargepolicyforCOVID19.pdf)

3. The need for RTPCR test in healthy individuals undertaking inter-state domestic travel may

be completely removed to reduce the load on laboratories.

4. Non-essential travel and interstate travel of symptomatic individuals(COVID19or flu like

symptoms)should be essentially avoided to reduce the risk of infection.

5. Alll asymptomatic individuals undertaking essential travel must follow COVID approptiate

behavior.

6. Mobile testing laboratories are now available in GeM portals. States are encouraged to

augment RTPCR testing through mobile systems.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here