Saturday 10th, May 2025
canara news

ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Published On : 09 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.08: ರಾಜ್ಯದಲ್ಲಿ ಜನತಾ ಕಫ್ರ್ಯೂ ಜಾರಿಯಲ್ಲಿರುವುದರಿಂದ ನಿರ್ಗತಿಕರು, ಬಡವರಿಗೆ ಔಷಧಿ ಮತ್ತಿತರ ಕೆಲಸಕ್ಕೆ ಆಥಿರ್üಕ ತೊಂದರೆಯಾಗಬಾರದು ಎಂದು ನಿರ್ಗತಿಕರ ಮನೆಗಳಿಗೆ ನೇರವಾಗಿ ನಗದು ನೆರವು ಸೇರಿದಂತೆ ವಿವಿಧ ಯೋಜನೆಯನ್ನು ಡಾ| ಡಿ.ವೀರೇಂದ್ರ ಹೆಗ್ಗಡೆ ದಂಪತಿ ಮುದುವರಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ತಿಳಿಸಿದರು. ಕೃಷ್ಣ ರಾಜ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಶ್ರೀಕ್ಷೇತ್ರದ ನಿಧಿಯಿಂದ ನಿರ್ಗತಿಕ ಯೋಜನೆಯ ಅಡಿಯಲ್ಲಿ ವೃದ್ಧೆಯೊಬ್ಬರಿಗೆ ಮಾಶಾಸನ ನೆರವಿನ ಹಣವನ್ನು ವಿತರಿಸಿ ಮಮತಾ ಮಾತನಾಡಿದರು.

ವೀರೇಂದ್ರ ಹೆಗ್ಗೆಡೆ ದಂಪತಿಗಳು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನೂರಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ನೆರವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈಗ ಮಹಾಮಾರಿ ಕೋರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿ ಸಾವಿರರು ಕುಟುಂಬಗಳ ನೋವಿಗೆ ಕಾರಣವಾಗಿದೆ. ಈ ಕಾರಣದಿಂದ ನಮ್ಮ ಕಛೇರಿಗಳ ಆಥಿರ್üಕ ಚಟುವಟಿಕೆಗಳನ್ನು ಸ್ಥಗಿತ ಮಾಡಿದ್ದರೂ ಕೂಡಾ ಜನರಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ನಾವುಗಳು ನಮ್ಮ ಎಲ್ಲಾ ಪ್ರತಿನಿಧಿಗಳನ್ನು ಬಳಸಿಕೊಂಡು ತಾಲೂಕಿನಲ್ಲಿ ಗುರುತಿಸಿರುವ 64 ಬಡವರು ಹಾಗೂ ನಿರ್ಗತಿಕರಿಗೆ ತಲಾ 750 ರಿಂದ 1000 ರೂಪಾಯಿಗಳ ವರೆವಿಗೆ ಒಟ್ಟು 48,500 ರೂಪಾಯಿಗಳನ್ನು ನೊಂದವರ ಮನೆಗಳಿಗೆ ತೆರಳಿ ವಿತರಣೆ ಮಾಡಿದ್ದೇವೆ. ಲಾಕ್‍ಡೌನ್ ಮುಂದುವರಿದರೆ ಪೂಜ್ಯರ ಸೂಚನೆಯಂತೆ ಮತ್ತಷ್ಟು ಆಥಿರ್üಕ ನೆರವನ್ನು ನೀಡಲಾಗುತ್ತದೆ ಎಂದು ಯೋಜನಾಧಿಕಾರಿ ಮಮತಾಶೆಟ್ಟಿ ತಿಳಿಸಿದರು.

ವಾಹನಗಳ ವ್ಯವಸ್ಥೆ:
ಕೊರೊನಾದಿಂದಾಗಿ ಗ್ರಾಮೀಣ ಭಾಗದ ಜನರಿಗೆ ವಾಹನಗಳ ತೊಂದರೆಯಾಗುತ್ತಿರುವುದನ್ನು ಗಮನಸಿರುವ ಖಾವಂದರು ಗ್ರಾಮೀಣ ಭಾಗದ ಕೊರೊನಾ ಪೀಡಿತರಿಗೆ ಅನುಕೂಲವಾಗಲಿ ಎಂದು ತಾಲೂಕಿನಲ್ಲಿ ನಮ್ಮ ಸಂಘದ ವತಿಯಿಂದ ಎರಡು ಪ್ರಯಾಣಿಕರ ವಾಹನಗಳನ್ನು ಉಚಿತವಾಗಿ ಓಡಿಸಲಾಗುತ್ತಿದೆ. ಯಾರಿಗೆ ವಾಹನದ ಅವಶ್ಯಕತೆ ಇರುತ್ತದೆಯೋ ಅವರು ನಮ್ಮ ಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾ ತಾಲೂಕು ಯೋಜನಾಧಿಕಾರಿಗಳಿಗೆ ಕರೆಮಾಡಿದರೆ ನಾವು ಅವರ ಮನೆಯ ಬಾಗಿಲಿಗೆ ವಾಹವನ್ನು ಕಳುಹಿಸಿ ಅವರಿಗೆ ಆರೋಗ್ಯ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುತ್ತೇವೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆ ಇರುವುದು ಕಂಡು ಬಂದರೆ ಅವರಿಗೆ ಊಟವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಒಟ್ಟಾರೆ ನಮ್ಮ ಸಂಘದ ವತಿಯಿಂದ ಕೊರೊನಾ ಸಂಕಷ್ಟ ಮುಗಿಯುವವರೆವಿಗೂ ಸಾರ್ವಜನಿಕರಿಗೆ ಅಗತ್ಯ ನೆರವನ್ನು ನೀಡಲಾಗುತ್ತದೆ ಎಂದು ಮಮತಾ ಶೆಟ್ಟಿ ತಿಳಿಸಿದರು. ಈ ಸಮಯದಲ್ಲಿ ಶ್ರೀಕ್ಷೇತ್ರ ಯೋಜನೆಯ ಮೇಲ್ವಿಚಾರಕಿ ಎಸ್.ಅನ್ನಪೂರ್ಣ, ಕೆ.ಮಹದೇವಿ ಮತ್ತಿತರರು ಹಾಜರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here