Saturday 10th, May 2025
canara news

ಕೊಂಕಣ್ ರೈಲ್ವೇ ಅಧಿಕಾರಿಗಳ ಚಾಣಕ್ಷತೆ ಮತ್ತು ತ್ವರಿತ ಕ್ರಮದಿಂದ ತಪ್ಪಿದ ದುರಂತ

Published On : 24 May 2021   |  Reported By : Rons Bantwal


ಗೋವಾ ಮಡ್ಗಾಂವ್‍ನಲ್ಲಿ ಪ್ರಯಾಣಿಕರನ್ನಿಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ
(ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.22: ಕಳೆದ ಶುಕ್ರವಾರ ಉಡುಪಿಯಲ್ಲಿ ರೈಲುಯಾನದ ಮುಖೇನ ಮ್ಯಾಂಗ್ಳೊರ್ ಎಕ್ಸ್‍ಪ್ರೆಸ್ ಮೂಲಕ ಮುಂಬಯಿಗೆ ಹೊರಟಿದ್ದ ಒಂದೇ ಪರಿವಾರದ ನಾಲ್ವರನ್ನು ಗೋವಾ ಮಡ್‍ಗಾಂವ್‍ನಲ್ಲಿ ಇಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ ಎಂದು ಮೂಲಗಳಿಂದ ತಿಳಿದಿದೆ.

ಬಲ್ಲ ಮೂಲಗಳ ಪ್ರಕಾರ ಮ್ಯಾಂಗ್ಳೊರ್ ಎಕ್ಸ್‍ಪ್ರೆಸ್‍ನ ಬೋಗಿ ಸಂಖ್ಯೆ ಎಸ್3ನಲ್ಲಿ ಒಂದು ಕುಟುಂಬವಿದ್ದು ಮುಂಬಯಿಗೆ ಪ್ರಯಾಣಿಸುತ್ತಿತ್ತು. ಆ ಪೈಕಿ ಅವರಲ್ಲಿನ ಸುಮಾರು 38 ವಯಸ್ಸಿನ ಗಂಡಸು ಉಸಿರಾಟದ ತೊಂದರೆಯಿಂದ ರೈಲಿನಲ್ಲೇ ಬಿದ್ದು ಒದ್ದಾಡಿದರು. ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದನ್ನು ತಿಳಿದ ರೈಲ್ವೇ ಅಧಿಕಾರಿಗಳು ತಕ್ಷಣ ಧಾವಿಸಿ ತಪಾಸನೆಗೈದಾಗ ಕೋವಿಡ್ ಪಾಸಿಟಿವ್ ಲಕ್ಷಣ ಇರುವುದಾಗಿ ಕಂಡು ಬಂದಿತ್ತು ಎನ್ನಲಾಗಿದೆ. ತಕ್ಷಣ ಎಚ್ಚೆತ್ತ ರೈಲ್ವೇ ಟಿಸಿ ಮತ್ತಿತರ ಅಧಿಕಾರಿಗಳು, ಪೆÇೀಲಿಸರು ಸಹ ಪ್ರಯಾಣಿಕರನ್ನು ಎಚ್ಚರಿಸಿ ಗೋವಾ ಮಡ್‍ಗಾಂವ್ ರೈಲ್ವೇ ನಿಲ್ದಾಣದಲ್ಲಿ ಎಲ್ಲರನ್ನೂ ಇಳಿಯುವಂತೆ ಸೂಚಿಸಿದರು. ಪ್ರಯಾಣಿಕರು ಇಳಿಯುತ್ತಿದಂತೆ ಬಿಗು ಬಂದೋಬಸ್ತ್‍ನ ವ್ಯವಸ್ಥೆಯೊಂದಿಗೆ ಆ ದಂಪತಿ ಮತ್ತು ಇಬ್ಬರು ಮಕ್ಕಳನ್ನು ಇಳಿಸಿದರು. ಬಳಿಕ ಆ ಇಡೀ ಬೋಗಿಯನ್ನೇ ಸ್ಯಾನಿಟೈಸರ್ ಮಾಡಿಸಿದರು. ಎಲ್ಲಾ ಕ್ರಮಗಳನ್ನು ನಡೆಸಿದ ಬಳಿಕ ರೈಲನ್ನು ಸುಮಾರು ಮುಕ್ಕಾಲು ಗಂಟೆ ತಡವಾಗಿ ಬಿಡಲಾಯಿತು ಎಂದು ಪ್ರಯಾಣಿಕರೋರ್ವರು ತಿಳಿಸಿದ್ದಾರೆ.

ಪೆÇೀಲಿಸರು, ಕೊಂಕಣ್ ರೈಲ್ವೇಯ ಅಧಿಕಾರಿಗಳ ಚಾಣಕ್ಷತೆ ಮತ್ತು ತ್ವರಿತ ಕ್ರಮದಿಂದ ಸಂಭವಿಸಲಿರುವ ಅತೀದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಸಹಪ್ರಯಾಣಿಕರು ತಿಳಿಸಿದ್ದಾರೆ. ಮುಂದುವರಿದ ಯಾನದಂತೆ ರೈಲು ಮುಂಜಾನೆ 2.30 ಗಂಟೆಗೆ ಪನ್ವೇಲ್ ಹಾಗೂ ಬೆಳಿಗ್ಗೆ 3.45 ಗಂಟೆಗೆ ಥಾಣೆ (ಮುಂಬಯಿ) ಸೇರಿದ್ದು ಪ್ರಯಾಣಿಕರೆಲ್ಲರೂ ಮುಂಬಯಿ ಸೇರಿ ತಮ್ಮ ಆರೋಗ್ಯದ ಕಾಳಜಿಗಾಗಿ ಹೆಚ್ಚುವರಿ ಮುತುರ್ವಜಿ ವಹಿಸಿದ್ದಾರೆ ಎನ್ನಲಾಗಿದೆ.

ಕಳೆದ ಶುಕ್ರವಾರ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಹೋಮ್ ಐಸೋಲೇಶನ್‍ನಲ್ಲಿದ್ದ ನಾಲ್ವರು ಮುಂಬಯಿಗೆ ತೆರಳಿದ್ದಾರೆ ಎಂದು ವರದಿಗಳು ಭಿತ್ತರಿಸಿದಂತೆ ಇವರೇ ಆಗಿರಬೇಕು ಎಂದು ಶಂಕಿಸಲಾಗಿದೆ. ಹಾಗಿದ್ದರೆ ಇವರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣದೊಂದಿಗೆ ಎಫ್‍ಐಆರ್ ದಾಖಲಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದನ್ನು ಮುಂಬಯಿವಾಸಿ ಜನತೆ ನೆನಪಿಸಿ ಕೊಂಡಿದ್ದಾರೆ. ಸರಕಾರದ ಐಸೋಲೇಶನ್ ಆದೇಶ ಉಲ್ಲಂಘಿಸಿ ನಿರ್ಲಕ್ಷತನ ತೋರಿ ಮುಂ¨ಯಿಗೆ ಆಗಮಿಸಿರುವುದು ದೊಡ್ಡ ದುರಂತವೇ ಸರಿ ಎಂದು ಮುಂಬಯಿ ಜನತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆರ್‍ಟಿ-ಪಿಸಿಆರ್ ವರದಿಗಿಲ್ಲ ಕಿಮ್ಮತ್ತು:
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಅವರ ಸರಕಾರಿ ಆದೇಶದಂತೆ ಉಭಯ ರಾಜ್ಯಗಳಿಗೆ ಆಗಮಿಸುವ ಪ್ರಯಾಣಿಕರಲ್ಲಿ ಆರ್‍ಟಿ-ಪಿಸಿಆರ್ ಪರೀಕ್ಷೆಯ ನೆಗೆಟೀವ್ ವರದಿ ಪ್ರಮಾಣಪತ್ರ ಕಡ್ದಾಯವಾಗಿ ಬೇಕು ಎಂದು ಕಟ್ಟಪ್ಪಣಾ ಆದೇಶ ಹೊರಡಿಸಿದ್ದಾರೆ. ಆದರೆ ಯಾವ ರೈಲು ನಿಲ್ದಾಣಗಳಲ್ಲೂ ಯಾವನೂ ಇದನ್ನು ನಮ್ಮಲ್ಲಿ ಕೇಳಿಲ್ಲ. ಯಾನದ ಸಮಯ ಟಿಕೇಟು ಪರೀಕ್ಷಕರು (ಟಿಸಿ) ಪ್ರತಿಯೊಬ್ಬರ ದೇಹದ ತಾಪಮಾನ (ಟೆಂಪ್ರಚರ್ ಟೆಸ್ಟ್) ಪರಿಶೀಲಿಸಿದರು ಬಿಟ್ಟರೆ ಮತ್ತೆನೂ ಕೇಳಿಲ್ಲ. ಆರ್‍ಟಿ-ಪಿಸಿಆರ್ ವರದಿ ಮಾಡಿಸಲು ಇಡೀ ಒಂದು ದಿನವೇ ಬೇಕು. ಅಲ್ಲದೆ ಅದು ತುಂಬಾ ದುಬಾರಿಯೂ ಆಗಿದೆ. ನಾಲ್ವರ ಆರ್‍ಟಿ-ಪಿಸಿಆರ್ ಟೆಸ್ಟ್‍ಗೆ ನಾವು ಎಲ್ಲಿಂದ ಹತ್ತು ಸಾವಿರ ರೂಪಾಯಿ ಭರಿಸುವುದು..? ರೈಲು ಯಾನದ ಟಿಕೇಟು ದರವೇ ಭರಿಸುವುದು ತುಂಬಾ ಕಷ್ಟವಾಗಿದ್ದು ಅದರ ಟಿಕೇಟು ದರಕ್ಕಿಂತ ಮೂರು ಪಾಲು ಹೆಚ್ಚು ಮೊತ್ತ ಆರ್‍ಟಿ-ಪಿಸಿಆರ್‍ಗೆ ಖರ್ಚು ಮಾಡಬೇಕಾಗುತ್ತೆ. ಇದು ನಮ್ಮಿಂದ ಸಾಧ್ಯವೂ ಇಲ್ಲ. ಈಗ ಕೆಲಸ, ಉದ್ಯೋಗವಿಲ್ಲದೆ ಒಪೆÇ್ಪತ್ತಿನ ಊಟಕ್ಕೂ ಅಲೆದಾಡುವ ಪರಿಸ್ಥಿತಿಯಲ್ಲೂ ಸರಕಾರಗಳು ನಮ್ಮನ್ನು ಸುಳಿಯುವುದು ನಮ್ಮ ದುರದೃಷ್ಟವಾಗಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವದ ಮಾತನ್ನು ತುಂಬಾ ಬೇಜಾರಿನಿಂದ ಹಂಚಿಕೊಂಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here