Friday 9th, May 2025
canara news

ಬಂಟ್ಸ್ ಸಂಘ ಮುಂಬಯಿ ವರ್ಚುವಲ್ ವೆಬ್‍ನಾರ್‍ನಲ್ಲಿ ಆಯೋಜಿತ ಕಾರ್ಯಗಾರ

Published On : 30 May 2021   |  Reported By : Rons Bantwal


ನೆಮ್ಮದಿಯ ಬಾಳಿಗೆ ಮನಸ್ವಾಸ್ಥ ್ಯದ ಚಿಂತೆ ಪ್ರಧಾನವಾಗಿಸಿ-ಡಾ| ಹರೀಶ್ ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಮೇ.29: ಬಂಟ್ಸ್ ಸಂಘ ಮುಂಬಯಿ ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ವರ್ಚುವಲ್ ವೆಬ್‍ನಾರ್ (ಝೂಮ್ ಅಪ್ಲಿಕೇಶನ್) ಮೂಲಕ ಒತ್ತಡ ನಿರ್ವಹಣೆ ಕುರಿತು ಕಾರ್ಯಗಾರ ಆಯೋಜಿಸಿತ್ತು.

ಕೊರೋನಾ ಮಹಾಮಾರಿಯ ಮೃತ್ಯು ತಾಂಡವದಿಂದ ಜಗತ್ತಿನಾದ್ಯಂತ ಕೋವಿಡ್ ಕುಲುಮೆಯಲ್ಲಿ ಬೆಂದ ಜನತೆ ಮಾನಸಿಕವಾಗಿ ನೊಂದಿದ್ದು, ಕಳೆದ ಸುಮಾರು ಒಂದುಕಾಲು ವರ್ಷದಿಂದ ನಮ್ಮಲ್ಲಿನ ಜನಜೀವನವೂ ಕುಂಟಿತ ಗೊಂಡಿದೆ. ಈ ಮೂಲಕ ಉಂಟಾದ ಅಸ್ತವ್ಯಸ್ಥೆ, ಮನೋಸ್ಥಿತಿ, ಆರೋಗ್ಯಸ್ಥಿತಿ ಬಗ್ಗೆ ಅವಲೋಕಿಸಲು ಹಾಗೂ ಲಾಕ್‍ಡೌನ್‍ನ ಪರಿಣಾಮದಿಂದ ವ್ಯವಹಾರವಿಲ್ಲದೆ ಹಣಕಾಸು ಗಳಿಕೆಯಿಲ್ಲದೆ ಉಂಟಾದ ಆಂತರಿಕ ವಿಶ್ವಾಸದ ನಷ್ಟ, ಉದ್ವೇಗ ಮತ್ತು ಮಾನಸಿಕ ಶಾಂತಿ ಬಗ್ಗೆ ಮನಗಂಡು ಬಂಟ್ಸ್ ಸಂಘವು ಒತ್ತಡ ನಿರ್ವಹಣೆ ಕುರಿತು ವರ್ಚುವಲ್ ಕಾರ್ಯಗಾರ ಆಯೋಜಿಸಿತ್ತು.

ಕಾರ್ಯಗಾರದಲ್ಲಿ ಮುಂಬಯಿ ಅಲ್ಲಿನ ಪ್ರತಿಷ್ಠಿತ ಮತ್ತು ಪ್ರಸಿದ್ಧ ಮನೋವೈದ್ಯ ಡಾ| ಹರೀಶ್ ಶೆಟ್ಟಿ ಅವರು ಕೋವಿಡ್ ಹತಾಶೆಯನ್ನು ಉತ್ಕರ್ಷತೆಯಿಂದ ಸೋಲಿಸೋಣ (ಬೀಟಿಂಗ್ ದ ಕೋವಿಡ್ ಬ್ಲ್ಯೂಸ್ ಫ್ರಾಮ್ ಡೂಮ್ ಟು ಬೂಮ್) ವಿಷಯವಾಗಿಸಿ ಮಾಹಿತಿಯನ್ನಿತ್ತರು.

ಬುದ್ಧಿಜೀವಿ ಮನುಷ್ಯನಿಗೆ ವ್ಯವಹಾರ ನಿಷ್ಠೆಕ್ಕಿಂತ ಮರ್ಯಾದೆ ಮುಖ್ಯವಾಗಿದೆ. ಆದರೆ ವ್ಯಾಪಾರ, ವ್ಯವಹಾರದ ಮರ್ಯಾದೇಯನ್ನೇ ಪ್ರಧಾನವಾಗಿಸದೆ ಬದುಕನ್ನು ಎದುರಿಸಿ ಬಾಳುವುದು ಸದ್ಯದ ಅಗತ್ಯವಾಗಿದೆ. ನಾಳಿನ ಬಾಳಿನ ಚಿಂತೆ ಎಷ್ಟೇಯಿದ್ದರೂ ಅದನ್ನು ಮನದಲ್ಲಿರಿಸದೆ ಹಗುರವಾಗಿಸಬೇಕು. ಇಲ್ಲವಾದರೆ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗೆ ಒಳಗಾಗಿ ಬದುಕನ್ನೇ ಕೊನೆಯಾಗುವುದು. ವ್ಯಪಾರ, ಉದ್ಯಮ, ಆಸ್ತಿ, ಆಶ್ಚರ್ಯ ಇವೆಲ್ಲವುಕ್ಕಿಂತ ಮನುಷ್ಯನಿಗೆ ಆರೋಗ್ಯವೇ ಮುಖ್ಯವಾದುದು. ಆರೋಗ್ಯವೇ ಇಲ್ಲವೆಂದಾದರೆ ಎಲ್ಲವೂ ಶೂನ್ಯವಾಗುವುದು. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಪರಸ್ಪರ ಜೊತೆಗೂಡಿ ಬಾಳನ್ನು ರೂಢಿಸಿ. ಕಾರಣ ಇಂತಹ ಸಂಧಿಗ್ಧ ಕಾಲಘಟ್ಟದಲ್ಲಿ ಹಣದ ಶ್ರೀಮಂತಿಕೆಕ್ಕಿಂತ ಮಾನವೀಯತೆಯೇ ಮುಖ್ಯವಾಗಿದೆ ಎಂದು ಡಾ| ಹರೀಶ್ ಶೆಟ್ಟಿ ತಿಳಿಸಿದರು. ಅನೇಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಕೊರೋನಾ ಲಸಿಕೆ ಪಡೆಯುವ ಬಗ್ಗೆಯೂ ಸೂಕ್ತ ಮಾಹಿತಿಯನ್ನಿತ್ತರು.

ನಮ್ಮವರಲ್ಲಿ ಬಹುತೇಕರು ಆಹಾರೋದ್ಯಮವನ್ನೇ ನಂಬಿ ಕೊಂಡವರು. ಅದರಲ್ಲೂ ಮುಂಬಯಿನಲ್ಲಂತೂ ಹೊಟೇಲು ಉದ್ಯಮಕ್ಕೆ ಬಂಟರದ್ದೇ ಎತ್ತಿದಕೈ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಅನ್ಯೋನ್ಯತೆಯಿಂದ ವ್ಯಾಪಾರ ವಹಿವಾಟುನತ್ತ ಗಮನ ಹರಿಸಿ ಪರಸ್ಪರ ಒಗ್ಗೂಡಿ ಸಹಯೋUವನ್ನಿತ್ತು ಬಾಳುವುದಕ್ಕೆ ಉತ್ತೇಜಿಸೋಣ ಎಂದು ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ಬಂಟ್ಸ್ ಹೆಲ್ತ್ ಸೆಂಟರ್‍ನ ಕಾರ್ಯಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಇವರ ಪ್ರಧಾನ ಭೂಮಿಕೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ ವೇದಿಕೆಯಲ್ಲಿದ್ದು ಕಾರ್ಯಕ್ರಮ ನಡೆಸಿದರು. ಅಂತೆಯೇ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಪ್ರಾದೇಶಿಕ ಸಮನ್ವಯ ಸಮಿತಿಗಳ ಸಮನ್ವಯಕರು, ಎಲ್ಲಾ ಸಮಿತಿಗಳ ಮುಖ್ಯಸ್ಥರು, ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಝೂಮ್ ಅಪ್ಲಿಕೇಶನ್ ಪಾಲ್ಗೊಂಡು ಕಾರ್ಯಗಾರದ ಫಲಾನುಭ ಪಡೆದರು.

ಬಂಟ್ಸ್ ಸಂಘದ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಪ್ರಸಕ್ತ ಮನುಕುಲದ ಬದುಕನ್ನು ಸ್ವತಃ ನಾವೇ ಮಾನಸಿಕವಾಗಿ ನಿಭಾಯಿಸಲು ಸಹಾಯ ಮಾಡುವ ಮತ್ತು ನಮ್ಮ ಕುಟುಂಬ ಸದಸ್ಯರೊಂದಿಗೆ ಈ ಸಮಯೋಚಿತ ವಿಷಯವನ್ನು ಹಂಚಿಕೊಳ್ಳಲು ಸಹಾಯ ಮಾಡುವ ಉದ್ದೇಶವಾಗಿಸಿ ಈ ಕಾರ್ಯಕ್ರಮವನ್ನು ವರ್ಚುವಲ್ ವೆಬ್‍ನಾರ್ ಮೂಲಕ ಸಂಘವು ನಡೆಸುವುದು ಅನಿವಾರ್ಯವಾಯಿತು ಎಂದರು.

ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ ಅತಿಥಿü ಪರಿಚಯಗೈದರು. ಡಾ| ಆರ್.ಕೆ ಶೆಟ್ಟಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here