Thursday 28th, October 2021
canara news

ಕರ್ನಿರೆ ಹಳ್ಳಿಯಲ್ಲಿ ಬೆಳೆದು ಸೌದಿಯಾ ಸಾಹುಕಾರನಾದ ಅಪರೂಪದ ಸಮಾಜ ಸೇವಕ

Published On : 07 Jun 2021   |  Reported By : Rons Bantwal


ಶಿಕ್ಷಣಪ್ರೇಮಿ-ಮಾನವತಾವಾದಿ ಹಾಜಿ ಕೆ.ಎಸ್ ಸಯೀದ್ ಕರ್ನಿರೆ
(ರೋನ್ಸ್ ಬಂಟ್ವಾಳ್)


ಮುಂಬಯಿ (ಆರ್‍ಬಿಐ), ಜೂ.06: ಮನುಷ್ಯ ಎಷ್ಟು ದಿನ ಬದುಕುತ್ತಾನೆ ಎಂಬುದು ಮುಖ್ಯವಲ್ಲ, ಆದರೆ ಆತನ ಬದುಕು ಎಷ್ಟು ಆಳ ಮತ್ತು ಫಲಪ್ರದವಾಗಿತ್ತು ಅನ್ನುವುದು ಮುಖ್ಯ. ಹೃದಯಶೀಲತೆಯೊಂದಿಗೆ ಒಂದು ಜೀವವು ಅನೇಕ ಜೀವಗಳನ್ನು ಮುಟ್ಟಿದ ಹೃದಯವು ಸದಾ ಪ್ರೀತಿಸಿದವರಲ್ಲಿ ಜೀವಿಸುತ್ತದೆ ಅನ್ನುತ್ತಾರೆ. ಸಂಕಷ್ಟದ ಸಂಧಿಗ್ಧ ಸಮಯದಲ್ಲಿ ಜನರಿಗೆ ಅಭಯಾಸ್ತ ಚಾಚುತ್ತಾ ಅವರ ಇಡೀ ಕುಟುಂಬದಲ್ಲಿ ಆಳವಾದ ಸಹಾನುಭೂತಿ ತೋರಿ ಅವರೂ ತಮ್ಮಂತೆ ಬಾಳುವಂತೆ ತೋರುವ ಕಾಳಜಿ ಮುಖ್ಯವಾದುದು. ಇಂತಹ ಹೃದಯಶೀಲತ್ವದ ಅಪರೂಪದ ಸಮಾಜ ಸೇವಕ-ಶಿಕ್ಷಣಪ್ರೇಮಿ ಹಾಜಿ ಕೆ.ಎಸ್ ಸಯೀದ್ ಕರ್ನಿರೆ ಎಲ್ಲರಲ್ಲೂ ತಮ್ಮ ಬದುಕನ್ನು ಜೀವಂತವಾಗಿಸಿ ಶಾಶ್ವತ ವಿಶ್ರಾಂತಿ ಕಂಡುಕೊಂಡಿದ್ದಾರೆ ಅನ್ನುವುದು ನಂಬಲಸಾಧ್ಯ. ಆದರೂ ಸತ್ಯವೇ ಸರಿ.

ಹೌದು, ಹುಟ್ಟು ಪಡೆದ ಪ್ರತಿಯೊಂದು ಜೀವಿಗೂ ಸಾವು ಶಾಸ್ವತ. ಆದ್ದರಿಂದ ಇಲ್ಲಿ ಅಗಲುವಿಕೆ ಮುಖ್ಯವಲ್ಲ.

ಆದರೆ ಇಹಲೋಕ ತ್ಯಜಿಸಿ ಸ್ವರ್ಗಕ್ಕೆ ಹೋಗುವುದು ಮತ್ತು ಆನಂದಧಾಮದಲ್ಲಿ ಅಲಂಕರಿಸುವುದು ಮುಖ್ಯ ಅಂತಾರೆ. ಜನನ ಮರಣದ ಮಧ್ಯೆಯ ನಾಲ್ಕು ದಿನಗಳನ್ನು ಸತ್ಕÀರ್ಮಗಳಿಂದ ಬಾಳಿ ಭುವಿಯಿಂದ ಹೊರಡುವ ಮೊದಲು ಇನ್ನೊಬ್ಬರ ಹೃದಯದಲ್ಲಿದ್ದು ಹೋದಾಗಲೇ ಪ್ರೀತಿಪಾತ್ರರಾದವರÀು ನಮ್ಮನ್ನು ನಿಜಾರ್ಥದಲ್ಲಿ ಕಳೆದುಕೊಳ್ಳುವಂತಾಗಿರುತ್ತಾರೆ. ಮನುಕುಲದ ಬದುಕು ಈ ಶಾಶ್ವತವಾಗಿರುತ್ತದೆ. ಇವೆಲ್ಲಕ್ಕೂ ನಿದರ್ಶನವಾಗಿ ಬಾಳು ಬೆಳಗಿಸಿದವರೇ ಮಾನವತಾವಾದಿ ಹಾಜಿ ಕೆ.ಎಸ್ ಸಯೀದ್ ಕರ್ನಿರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಲ್ಕಿ ಸನಿಹದ ಬಳ್ಕುಂಜೆ ಗ್ರಾಮ ಪಂಚಾಯತ್‍ನ ಚಿಕ್ಕದಾದ ಊರೇ ಕರ್ನಿರೆ. ಇಲ್ಲಿ ಸದ್ಯ ಸುಮಾರು ಇನ್ನೂರು ಕುಟುಂಬಗಳು ವಾಸವಾಗಿದ್ದು ಸಾವಿರ ಮಂದಿ ಬಾಳುವ ಊರು. ಸಾಮರಸ್ಯದ ಬಾಳಿಗೆ ಇದೊಂದು ಆದರ್ಶ ಗ್ರಾಮವಾಗಿದ್ದು ಇಂತಹ ಕರ್ನಿರೆ ಎಂಬ ಇಂದು ವಿಶ್ವದ ಭೂಪಟದಲ್ಲಿ ಎದ್ದ್ದು ಕಾಣುತ್ತಿರಲು ಸಯೀದ್ ಕರ್ನಿರೆ ಕಾರಣಕರ್ತರಾಗಿದ್ದಾರೆ.

ಕೆ.ಎಸ್ ಶೇಖಬ್ಬ ಮತ್ತು ಬಿ.ಫಾತಿಮಾ ದಂಪತಿಯ 8 ಮಕ್ಕಳಲ್ಲಿ ಹಿರಿಯ ಮಗನಾಗಿ 1940ರಲ್ಲಿ ಹುಟ್ಟಿದÀ ಸಯೀದ್, ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಸರಕಾರಿ ಪ್ರಾಥಮಿಕ ಶಾಲೆ ಕರ್ನಿರೆಯಲ್ಲಿ ಮತ್ತು ಪ್ರೌಢ ಶಿಕ್ಷಣ ಮೂಲ್ಕಿಯಲ್ಲಿ ಪೂರೈಸಿದ್ದರು. ಓದಿನಲ್ಲಿ ಸದಾ ಮುಂಚೂಣಿಯಲ್ಲಿದ್ದ ಸಯೀದ್ ಲೆಕ್ಕಾಚಾರದಲ್ಲಿ ನಿಪುಣ. 1962ರಲ್ಲಿ ಪಲಿಮಾರುನ ಕೋಟೆ ಮನೆತನದ ಆಮೀನಾ ಅವರನ್ನು ವರಿಸಿದ್ದ ಇವರ ದಾಂಪತ್ಯ ಬಾಳಿಗೆ 6 ಗಂಡು ಹಾಗೂ 5 ಹೆಣ್ಣು ಮಕ್ಕಳು. ಇವೆಲ್ಲರನ್ನೂ ಸುಶಿಕ್ಷಿತ ಮತ್ತು ಸಂಸ್ಕಾರಯುತವಾಗಿ ಬೆಳೆಸಿರುವುದು ಆಧುನಿಕ ಜನಾಂಗಕ್ಕೆ ಮಾದರಿ. ಇವರದ್ದು ಅಲ್ಪಸಂಖ್ಯಾತ ಸಮಾಜವಾಗಿದ್ದೂ ಹನ್ನೊಂದು ಮಕ್ಕಳಿಗೂ ಅತ್ಯುನ್ನತ ಶಿಕ್ಷಣ ನೀಡುವ ಜೊತೆಗೆ ಒಳ್ಳೆಯ ನಾಗರೀಕತೆ, ಮಾನವೀಯ ಮೌಲ್ಯಗಳನ್ನಿತ್ತು ಬೆಳೆಸಿ ಸಮಾಜಕ್ಕೆ ಉಪಕಾರಿ ಆಗುವ ಸಮಾಜಮುಖಿ ಸಂಸಾರ ರೂಪಿಸಿ ಒಂದು ಸುಸಂಸ್ಕೃತ ಜನಾಂಗವನ್ನೇ ರೂಪಿಸಿದ ಕೀರ್ತಿ ಸಯೀದ್ ಇವರದ್ದು.

ತಾನು ಉನ್ನತ ಶಿಕ್ಷಣ ವಂಚಿತನಾಗಿ, ಜೀವನವೆಂಬ ನೌಕೆಯನ್ನು ಮುನ್ನಡೆಸಲು ಹೊರ ಜಿಲ್ಲೆಗಳಲ್ಲಿ ವ್ಯಾಪಾರ ನಡೆಸುವ ಪರಿಸ್ಥಿತಿ ಆಯಿತಾದರೂ, ತನಗಾದ ಅನುಭವಗಳು ತನ್ನ ಜೀವನದ ಒಂದೊಂದೇ ಪುಟಗಳನ್ನೂ ಬರೆಯುತ್ತಿರುವಾಗ ತನ್ನ ಮಕ್ಕಳು ವಿದ್ಯೆವಿಲ್ಲದೆ ಜೀವನಕ್ಕಾಗಿ ಪರದಾಡಬಾರದು ಅಲ್ಲದೆ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂಬ ಕನಸುಕಂಡ ಸಾಯೀದ್ ಇಂದು ಶಿಕ್ಷಣದ ಮಹತ್ವದಿಂದ ತನ್ನೂರನ್ನು ವಿಶ್ವದ ಭೂಪಟಲ್ಲಿ ಗುರುತಿಸಲ್ಪಡುವಂತೆ ಮಾಡಿದ ಅಪರೂಪದ ಶಿಕ್ಷಣ ಪ್ರೇಮಿ ಆಗಿದ್ದಾರೆ. ವ್ಯಾಪಾರ ವಹಿವಾಟುವಿನಿಂದ ತನ್ನ ಮಕ್ಕಳಿಗೆ ಕೊಟ್ಟ ಅತ್ಯಮೂಲ್ಯವಾದ ಉಡುಗೊರೆ ಅಂದರೆ ಅದೇ ವಿದ್ಯಾಭ್ಯಾಸ. 6 ಗಂಡು ಮಕ್ಕಳಲ್ಲಿ ಐವರು ಇಂಜಿನೀಯರಿಂಗ್ ಪದವಿಧರರು ಹಾಗು ಓರ್ವ ವಾಣಿಜ್ಯ ಪದವೀಧರ. ಎಲ್ಲಾ ಹೆಣ್ಣು ಮಕ್ಕಳೂ ಸುಶಿಕ್ಷಿತರು. ಸುಮಾರು 30 ವರ್ಷಗÀಳ ಹಿಂದೆ ಅವರು ತನ್ನ ಮಕ್ಕಳಿಗೆ ನೀಡಿದ ವಿದ್ಯಾಭ್ಯಾಸದ ಪ್ರತಿಫಲವಾಗಿ ಇಂದು ಸಯೀದ್ ಅವರ ಮಕ್ಕಳು ಗಲ್ಫ್‍ನ ಸೌದಿ ಅರೇಬಿಯಾದಲ್ಲಿ ಎಕ್ಸ್‍ಪರ್‍ಟೈಸ್ (ಇxಠಿeಡಿಣise) ಸಂಸ್ಥೆಯನ್ನು ನಡೆಸುತ್ತಾ ಸುಮಾರು 8,000 ಕ್ಕಿಂತಲೂ ಅಧಿಕ ಕುಟುಂಬಗಳಿಗೆ ಆಧಾರವಾಗಿ ನಿಂತಿದ್ದಾರೆ. ಇದರಿಂದ ಸುಮಾರು 40,000 ಕ್ಕಿಂತಲೂ ಅಧಿಕ ಜನರ ಬದುಕು ಸುಗಮವಾಗಿ ಸಾಗುವಂತೆ ಮಾಡಿದ್ದಾರೆ.

ಬಸ್ಸು ಕಾರು ಸಾರಿಗೆ ಸಂಚಾರವಿಲ್ಲದ ಅಂದಾಜು 1955ರ ಸಮಯ ದೂರದ ಊರುಗಳಿಗೆ ತೆರಳಿ ವ್ಯಾಪಾರ ನಡೆಸುವುದು ಕಷ್ಟವಾಗಿದ್ದರೂ ಉದರ ಪೆÇೀಷಣೆ ಅರಸುತ್ತಾ ಸಯೀದ್ ದೂರದ ಶಿವಮೊಗ್ಗ ಜಿಲ್ಲೆಗೆ ಹೋಗಿ ಬದುಕು ಕಂಡುಕೊಂಡರು. ತೀರಾ ಸರಳ, ಸಜ್ಜನ ಮತ್ತು ಪ್ರಾಮಾಣಿಕತೆಯ ಜೀವನಶೈಲಿಯಿಂದ ಹಗಲಿರುಳು ಶ್ರಮಿಸಿ ವ್ಯಾಪಾರದಲ್ಲಿ ಯಶಕಂಡರು. ಆದರೆ ಜಗದ ಯಾವುದೇ ಮಕ್ಕಳಿಗೆ ಇಂತಹ ಪರಿಸ್ಥಿತಿ ಬರಬಾರದು ಎಂದೇ ಸದಾ ಪ್ರಾಥಿರ್üಸುತ್ತಿದ್ದಂತೆ ಇಂತಹ ಪರಿಸ್ಥಿತಿ ಎದುರಿಸಲು ಶಿಕ್ಷಣವೊಂದೇ ಶಕ್ತಿವಾಗಿದೆ ಅನ್ನುತ್ತಾ ತಮ್ಮ ಮಕ್ಕಳೊಬ್ಬರಂತೆ ಒಬ್ಬರಿಗೆ ವಿದ್ಯಾವಂತರನ್ನಾಗಿಸಿದರು.

ಮೊದಲ ಮಗ ಶೇಖ್, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರುನಲ್ಲಿ ಆಟೋಮೊಬೈಲ್ ಇಂಜಿನೀಯರಿಂಗ್ ಎರಡನೆಯ ಮಗ ರಹೋಮ್ ಬಿಕಾಂ ಪದವೀಧರನಾಗಿ ನ್ಯೂ ಮಂಗಳೂರು ಪೆÇೀರ್ಟ್ ಟ್ರಸ್ಟ್‍ನಲ್ಲಿ ಸರಕಾರಿ ಉದ್ಯೋಗಿಯಾದರು. ತೃತೀಯ ಪುತ್ರ ಆಸಿಫ್ ಹಾಗೂ ನಾಲ್ಕನೇ ಪುತ್ರ ಅಷ್ಫಾಕ್ ನಿಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ಓದಿ ಇಂಜಿನೀಯರ್‍ಗಳಾದರು. ಐದನೇ ಪುತ್ರ ಅಶಿಫ್ ಸುರತ್ಕಲ್‍ನ ಎನ್‍ಐಟಿಕೆ ಮತ್ತು ಆರನೇ ಪುತ್ರ ಅನ್ಶಿಫ್ ಅವರು ಎಂಐಟಿ ಶಿಕ್ಷಣ ಸಂಸ್ಥೆಯಲ್ಲಿ ಓದಿ ಇಂಜಿನೀಯರ್‍ಗಳಾಗಿ ಇಂಗ್ಲೇಡ್‍ನಲ್ಲಿ ಅಂತರಾಷ್ಟ್ರೀಯ ಸನದು ತನ್ನದಾಗಿಸಿದರು.

ಭಾರತ, ಸೌದಿ ಅರೇಬಿಯಾ ರಾಷ್ಟ್ರÀಗಳ ವಿವಿಧ ಸಂಸ್ಥೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಮಕ್ಕಳೆಲ್ಲರೂ 2002ರಲ್ಲಿ ಕೂಡು ಕುಟುಂಬಸ್ಥರಾಗಿ ಸೌದಿ ಅರೇಬಿಯಾ ಇಲ್ಲಿನ ಜುಬೈಲ್ ಎಂಬಲ್ಲಿ ಎಕ್ಸ್‍ಪರ್‍ಟೈಸ್ (ಇxಠಿeಡಿಣise) ಸಂಸ್ಥೆಯನ್ನು ಸ್ಥಾಪಿಸಿದರು. ಕೇವಲ ಒಂದು ಕ್ರೇನ್‍ನಿಂದ ಆರಂಭವಾದ ಈ ಸಂಸ್ಥೆ ಇಂದು ಸೌದಿ ಅರೇಬಿಯಾದ ಅತ್ಯಂತ ಪ್ರತಿಷ್ಠಿತ ಮತ್ತು ವಿಶ್ವಸಾರ್ಹ ಸಂಸ್ಥೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಕೈಗಾರಿಕಾ ಸೇವೆಗಳ ಏಕೈಕಸಂಸ್ಥೆಯಾಗಿ ಬೆಳೆದುನಿಂತು ಸುಮಾರು 8,000 ಕ್ಕಿಂತಲೂ ಅಧಿಕ ಮಂದಿಗೆ ಕೆಲಸವನ್ನು ಒದಗಿಸಿ ಸಾವಿರಾರು ಕುಟುಂಬಗಳಿಗೆ ಆಧಾರವಾಗಿ ನಿಂತಿತು. ಬಳಿಕ ಅಲ್ಲಾಹನ ಕೃಪೆಯಿಂದ ನಡೆದದ್ದೆಲ್ಲವೂ ಇತಿಹಾಸ.

ಕರ್ನಿರೆ ಎಂಬ ಪುಟ್ಟ ಊರಿನ ಹಾಜಿ ಸಯೀದ್ ಜಗತ್ತಿನ ಮೂಲೆಮೂಲೆಗಳ ಜನರಿಗೆ ಆಸರೆಯಾಗಿ ಜಗಮೆಚ್ಚಿದ ಸಾಹುಕಾರನಾಗಿ ಜೀವನದ ಕನಸನ್ನು ನನಸಾಗಿಸಿದ್ದಾರೆ. ಮಕ್ಕಳೇ... ಆಗುವುದಾದರೆ ಯಾರಿಗಾದರೂ ಉಪಕಾರ ಮಾಡಿರಿ. ಎಂದೂ ಉಪದ್ರ ಮಾಡದಿರಿ. ಅನ್ಯಾಯ, ಅನಾಚಾರಕ್ಕೆ ಜೀವನ ಮುಡಿಪಾಗಿರಿಸದೆ ಪರರನ್ನು ಅಲ್ಲಾಹನೆಂದೇ ಪ್ರೀತಿಸಿ ಪೆÇ್ರೀತ್ಸಾಹಿಸಿರಿ ಅನ್ನುವುದನ್ನು ತನ್ನ ಮಕ್ಕಳೆಲ್ಲರಿಗೂ ಹಿತನುಡಿಗಳನ್ನಾಡುತ್ತಿದ್ದು, ಇದನ್ನೇ ಇಂದಿಗೂ ಎಲ್ಲಾ ಮಕ್ಕಳೂ ಅಕ್ಷರಶಃ ಪಾಲಿಸಿ ತಂದೆ ಹಾಕಿಕೊಟ್ಟ ಪಥದಲ್ಲೇ ಆ ಪರಂಪರೆಯನ್ನು ಮುನ್ನಡೆಸುತ್ತಿರುವುದು ಈ ಯುಗದ ಬುದ್ಧಿಜೀವಿಗಳಿಗೆ ಮಾದರಿ ಆಗಿದೆ. ಪ್ರತಿಭಾನ್ವಿತರಿಗೆ, ವಿಧವೆಯರು, ಬಡವರು, ಅಸಹಾಯಕತೆಯ ಜನರನ್ನು ಗುರುತಿಸಿ, ಜಾತಿಮತ ಬೇಧವಿಲ್ಲದೆ ತಾವೇ ಸ್ವತಃ ಅವರ ಮನೆಗಳಿಗೆ ತೆರಳಿ ತೆರೆಮರೆಯಲ್ಲಿದ್ದೇ ಅಭಯಾಸ್ತ ಚಾಚುತ್ತಾ ಪ್ರೇರಕರಾಗಿದ್ದ ಹಾಜಿ ಸಯೀದ್ ವಾಸ್ತವ್ಯ, ಆರೋಗ್ಯ, ಶಿಕ್ಷಣಕ್ಕೆ ಮಹತ್ವವನ್ನಿತ್ತು ಇದು ದೇವರ ಕೆಲಸ ಅನ್ನುತ್ತಾ ಎಲ್ಲರಿಗೂ ಆಯಾ ವ್ಯವವಸ್ಥೆ ಮಾಡಿಕೊಡುತ್ತಿದ್ದರು. ಅದರಲ್ಲೂ ಹಣಕಾಸು ಇಲ್ಲದೆ ಶಿಕ್ಷಣ ವಂಚಿತ ಮಕ್ಕಳಿಗೆ ವಿದ್ಯಾದಾನ ನೀಡಿ ಬೆನ್ನೆಲುಬುವಾಗಿ ನಿಲ್ಲುತ್ತಿದ್ದರೆ. ಕಲಿತು ಪಾಸಾಗಿ ನಿರುದ್ಯೋಗಿಗಳೆಂದು ತಿಳಿದರೆ ಅವರನ್ನು ಸ್ವತಃ ಕರೆಸಿ ತನ್ನ ಮಕ್ಕಳಿಗೆ ಪರಿಚಯಿಸಿ ನೌಕರಿ ಕೊಡಿಸುವಲ್ಲಿ ಶ್ರಮಿಸುತ್ತಿದ್ದರು.

ಹಾಜೀ ಸಯೀದ್ ಬಡತನದ ತಳಮಟ್ಟದ ಅನುಭವ ರೂಢಿಸಿದ್ದ ಇವರು ಸ್ಥಿತಿವಂತ ಜೀವನವನ್ನು ಸಾಗಿಸಲು ಸಾಕಷ್ಟು ಅನುಕೂಲತೆಗಳನ್ನು ಹೊಂದಿದ್ದರೂ ಎಂದೂ ಐಷಾರಾಮಿ ಬದುಕಿಗೆ ಬಲಿಯಾಗದೆ ಗ್ರಾಮೀಣ ಜನರ ಮುಗ್ಧತೆಯನ್ನೇ ತನ್ನ ಜೀವನದುದ್ದಕ್ಕೂ ಕಾಯ್ದುಕೊಂಡಿದ್ದರು. ಅನೇಕರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿರುವರು. ಊರಿನಾದ್ಯಂತ ನಡೆಯುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಮುಂಜಿ ಮದುವೆÉ ಸಮಾರಂಭಗಳಲ್ಲಿ ತಾವು ಕಾಲಕ್ಕೆ ಅಧೀನ ಎಂದು ಭಾವಿಸುತ್ತಾ ನಿಮಿಷವೂ ಹೆಚ್ಚು ಕಡಿಮೆ ಆಗದಂತೆ ಸಕಾಲದಲ್ಲಿ ಹಾಜರಾಗುವುದು ಇವರ ಸಮಯಪ್ರಜ್ಞೆಗೆ ಸಾಕ್ಷಿಯಾಗಿತ್ತು. ತನ್ನ ಒಡನಾಟದಲ್ಲಿದ್ದ ಎಲ್ಲರನ್ನೂ ಸದಾ ನೆನೆಯುತ್ತಿದ್ದ ಸಾಹೇಬ್ರುರು ತನ್ನ ಬಾಲ್ಯದ ಕಾಲಾವಸ್ಥೆಯನ್ನು ಮೆಲುಕು ಹಾಕುತ್ತಾ ಭಾವೀ ಜನಾಂಗಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಎಂದೂ ತಮ್ಮ ಸಂಸೃತಿ, ಸ್ವಂತಿಕೆಗಳನ್ನು ಬಿಟ್ಟುಕೊಡುತ್ತಿರುವುದಕ್ಕೆ ಅಧ್ವಾನವಾಗಿದ್ದ ಇವರು ತಮ್ಮ ಹೆಸರಿನಲ್ಲಿ ಚಾರೀಟೇಬಲ್ ಟ್ರಸ್ಟ್ ರಚಿಸಿ ಅದರ ಮುಖೇನ ಹಲವಾರು ಬಡ, ಆಥಿರ್üಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾಸಿಕವೇತನ ನೀಡುತ್ತಿದ್ದರು.

ಒಂದನೇ ಮತ್ತು ಎರಡನೇ ಅಲೆಯ ಕೊರೋನಾ ಸಂದಿಗ್ಧ ಕಾಲದಲ್ಲಿ ಅಸಂಖ್ಯಾತ ಮಂದಿಗೆ ನೆರವಾಗಿ ಉದಾರತೆ ಮೆರೆದಿದ್ದರು. ಆದರೆ ದುರದೃಷ್ಟವಶಾತ್ ಕೊರೋನಾದ ಕರಿಛಾಯೆಯು ತನ್ನ ಪ್ರೀತಿಯ ಮಡದಿ ಆಮೀನಾ ಅವರನ್ನೇ ಮರೆಮಾಚಿಸಿದ್ದು ಸುಮಾರು ಆರು ದಶಕಗಳ (59) ಸುದೀರ್ಘಾವಧಿಯ ಸುಮಧುರ ದಾಂಪತ್ಯ ಜೀವನದ ಬೆಸುಗೆ ಕಡಿದಂತಾಗಿಸಿ ಸಯೀದ್ ಅವರಿಗೆ ತೀವ್ರ ಅಘಾತಕ್ಕೊಳಪಡಿಸಿತು. ಬಾಳಸಾಂಗಾತಿಯ ಸ್ಮರಣಾರ್ಥ ಮಂಗಳೂರು-ಉಡುಪಿ ನಡುವಿನ ಹೆಜಮಾಡಿ ಟೋಲ್‍ಗೇಟ್ ಸಮೀಪ ಆಮೀನಾ ಕಲ್ಚರಲ್ ಸೆಂಟರ್ ನಿರ್ಮಿಸಿದ್ದು ಇದು ಲೋಕಾರ್ಪಣೆಗೈಯುವ ವಾರದ ಮೊದಲೇ ಹಾಜಿ ಕೆ.ಎಸ್ ಸಯೀದ್ ಕರ್ನಿರೆ 80ರ ಹರೆಯದಲ್ಲೇ ಅಕಾಲಿಕವಾಗಿ ಅಗಲಿದರು.

ಸಾಮಾಜಿಕ ಕಾರ್ಯವು ಮಾನವ ಸಂಬಂಧಗಳಲ್ಲಿ ಸಾಮಾಜಿಕ ಬದಲಾವಣೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಜನರ ಸಬಲೀಕರಣ ಮತ್ತು ವಿಮೋಚನೆಯನ್ನು ಉತ್ತೇಜಿಸುವ ಒಂದು ಪ್ರವೃತ್ತಿಯಂತೆ. ಅಂತೆಯೇ ಹಾಜಿ ಸಯೀದ್ ಕರ್ನಿರೆ ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯನಿಷ್ಠೆಗೆ ಬಹಳ ಬದ್ಧರಾಗಿದ್ದು ಕೊನೆಯವರೆಗೂ ಅವರು ನಂಬಲಾಗದಷ್ಟು ಸಕಾರಾತ್ಮಕ ಸೇವೆಗೈದಿರುವರು. ಸದಾ ಆಶಾವಾದಿಯಾಗಿದ್ದು ಇಂದೂ ಜನಮಾನದದÀಲ್ಲಿ ಅಮರವಾಗಿರುವರು. ಜೀವನುದ್ದಕ್ಕೂ ಅವರು ತೋರಿದ ಸಾಧನಾಸಿದ್ಧಿ ಛಲ, ಸರಳತೆ, ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಪರೋಪಕಾರ ನವ ಪೀಳಿಗೆಗೆ ಅನುಕರನೀಯವಾಗಲಿ ಎಂದೇ ಹಾರೈಕೆ.

 
More News

`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ  ದುರ್ಗಪ್ಪ ವೈ.ಕೋಟಿಯವರ್
`ವಿದ್ಯಾ ವಿಭೂಷಣ ಪ್ರಶಸ್ತಿ'ಗೆ ಭಾಜನರಾದ ದುರ್ಗಪ್ಪ ವೈ.ಕೋಟಿಯವರ್
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಮಹಾಸಭೆ-ಸಾಧಕರಿಗೆ ಸನ್ಮಾನ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ
ಸುರತ್ಕಲ್ ಬಂಟರ ಸಂಘಕ್ಕೆ ಸುಧಾಕರ ಎಸ್.ಪೂಂಜ ನೂತನ ಸಾರಥಿ

Comment Here