Friday 9th, May 2025
canara news

ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Published On : 12 Jun 2021   |  Reported By : Rons Bantwal


ಸಿದ್ದಲಿಂಗಯ್ಯ : ಮಾನವತೆ ಎತ್ತಿ ಹಿಡಿದ ಕವಿ-ನಾಡೋಜ ಡಾ| ಮನು ಬಳಿಗಾರ್

ಮುಂಬಯಿ (ಆರ್‍ಬಿಐ), ಜೂ.11: ಕಳೆದ ಶುಕ್ರವಾರ ನಮ್ಮನ್ನಗಲಿದ ಡಾ| ಸಿದ್ದಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠ ಕವಿಗಳÀಲ್ಲಿ ಒಬ್ಬರು. ಅವರನ್ನು ದಲಿತ ಕವಿ ಅಥವಾ ಬಂಡಾಯ ಕವಿ ಎಂದು ಕರೆಯುವುದಕ್ಕಿಂತ ಮಾನವತೆಯನ್ನು ಪ್ರತಿಪಾದಿಸಿದ ಕವಿ ಎಂದು ಬಣ್ಣಿಸುವುದು ಸೂಕ್ತ. ಆ ದೃಷ್ಟಿಯಿಂದ ಅವರದು ಆದಿಕವಿ ಪಂಪನ ಹಾದಿ. ಅದು ಆನೆ ನಡೆದ ದಾರಿ.

ಕನ್ನಡ ಕಾವ್ಯಕ್ಕೆ ಅವರು ಹೊಸ ಸಂವೇದನೆಯನ್ನು ಕೊಟ್ಟರು. ಅವರÀ ಹೊಲೆ ಮಾದಿಗರ ಹಾಡು ಕವನ ಸಂಕಲನ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ಇಡೀ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನÀ ಗಳಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಸತ್ತು ಹೋದ ಸಂವೇದನೆಗಳನ್ನು ಬಡಿದೆಬ್ಬಿಸಿದಸಿದ ಕಾವ್ಯವದು. ಅವರ ಇಡೀ ಸಾಹಿತ್ಯ ಸೃಷ್ಟಿಗೂ ಇದೇ ರೀತಿ ಒಂದು ಅನನ್ಯವಾದ ಸ್ಥಾನ ಇದೆ.

ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಅನೇಕ ಸ್ಥಾನಮಾನಗಳ ಸಿಕ್ಕಿವೆ. ಅವುಗಳಿಗೆ ಶಿಖರಪ್ರಾಯವಾದ ಕನ್ನಡದ ಜ್ಞಾನಪೀಠ ಎಂದೇ ಹೆಸರಾಗಿರುವ ನೃಪತುಂಗ ಪ್ರಶಸ್ತಿಯನ್ನು ನಮ್ಮಅವಧಿಯಲ್ಲಿಯೇ ಅವರಿಗೆ ನೀಡಿ ಗೌರವಿಸಲಾಯಿತು ಎಂಬುದನ್ನು ಇಲ್ಲಿ ಅತ್ಯಂತ ಹೆಮ್ಮೆಯಿಂದ ನೆನಪಿಸಿ ಕೊಳ್ಳುತ್ತೇನೆ.

ನನ್ನ ಅವರ ಒಡನಾಟ ಅನೇಕ ದಶಕಗಳದ್ದು. ಅವರ ನಮ್ರತೆ, ಜೀವನ ಪ್ರೀತಿ, ಹಾಸ್ಯಪ್ರಜ್ಞೆಗಳು ಅವರಿಗೇ ವಿಶಿಷ್ಟವಾದುವು. ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ಸೇರಿದಾಗ ಅವರ ಗುಣಮುಖರಾಗಿ ವಾಪಸು ಬಂದು ನಮ್ಮ ಜೊತೆಗೆ ಇನ್ನೂ ಅನೇಕ ವರ್ಷಗಳ ಕಾಲ ಬಾಳುತ್ತಾರೆ, ನಮ್ಮನ್ನು ಮತ್ತೆ ನಗಿಸುತ್ತಾರೆ ಎಂದು ಅನಿಸಿತ್ತು. ಆದರೆ, ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡಿದೆ.

ಸಿದ್ದಲಿಂಗಯ್ಯ ಅವರಿಗೆÉ ಅವರೇ ಸಾಟಿ. ಅವರ ಜಾಗದಲ್ಲಿ ಇನ್ನೊಬ್ಬರನ್ನು ಊಹಿಸುªÅÀದು ಸಾಧ್ಯವಿಲ್ಲ. ಆ ಅರ್ಥದಲ್ಲಿ ಅವರ ಸಾವು ನಿಜವಾಗಿಯೂ ತುಂಬಿಬಾರದ ನಷ್ಟ. ಅವರ ಕುಟುಂಬಕ್ಕೆ ಅವರÀ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಪ್ರಾಥಿರ್üಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಮ್ಮ ಶೋಕ ಸಂದೇಸದಲ್ಲಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here