Friday 9th, May 2025
canara news

ಕೆಡಬ್ಲ್ಯೂಜೆಎ ಕಾಸರಗೋಡು ಜಿಲ್ಲಾ ಸಮಿತಿಯಿಂದ ಮಂಜೇಶ್ವರ ಕ್ಷೇತ್ರದ

Published On : 15 Jun 2021   |  Reported By : Rons Bantwal


ಶಾಸಕರಿಗೆ ಸನ್ಮಾನ-ಕನ್ನಡಿಗ ಪತ್ರಕರ್ತರ ಸ್ಪಂದನೆಗೆ ಮನವಿ

ಮುಂಬಯಿ (ಆರ್‍ಬಿಐ), ಜೂ.13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲ್ಯೂಜೆಎ) ಇದರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಇಂದಿಲ್ಲಿ ಮಂಜೇಶ್ವರ ಕ್ಷೇತ್ರದ ನೂತನ ಶಾಸಕ ಹೆಚ್ ಕುಂಞಬು ಹಾಗೂ ಎ.ಕೆ.ಎಂ ಅಶ್ರಫ್ ಅವರನ್ನು ಸಂಘದ ಪರವಾಗಿ ಕೆಡಬ್ಲ್ಯೂಜೆಎ ಕಾಸರಗೋಡು ಜಿಲ್ಲಾ ಘಟಕಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್, ಕೋಶಾಕಾರಿ ಪುರುಷೋತ್ತಮ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಮಾರ್ಚ್‍ನಲ್ಲಿ ಆಸ್ತಿತ್ವಕ್ಕೆ ತರಲಾದ ಕೆಡಬ್ಲ್ಯೂಜೆಎ ಕಾಸರಗೋಡು ಜಿಲ್ಲಾ ಸಮಿತಿಯು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಕೋವಿಡ್ 2ನೇ ಅಲೆಯಲ್ಲಿ ಸಂಕಷ್ಟಕ್ಕೊಳಗಾದ ಪತ್ರಕರ್ತರಿಗೆ ವಿಶೇಶವಾಗಿ ಸ್ಪಂದಿಸುತ್ತಿದೆ.

ಕಳೆದ ಭಾನುವಾರÀ ಮಂಗಳೂರು ಜೆಪ್ಪು ಇಲ್ಲಿನ ಸಂತ ಅಂತೋನಿ ಆಶ್ರಮದಲ್ಲಿ ಆಚರಿಸಲಾದ ವಾರ್ಷಿಕ ಹಬ್ಬದ ನಿಮಿತ್ತ ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಅವರ ಮಾರ್ಗದರ್ಶನ ದಂತೆ ಆಶ್ರಮದ ವತಿಯಿಂದ ಪತ್ರಕರ್ತರಿಗೆ ವಿತರಿಸಲಾಗಿತ್ತು. ಈ ಆಹಾರದ ಕಿಟ್‍ಗಳನ್ನು ಸ್ಟೇನ್ಲಿ ಬಿಕರ್ಣಕಟ್ಟೆ ಸಹಯೋಗದೊಂದಿಗೆ ಇದೇ ಬುಧವಾರ (ಜೂ.16) ಕಾಸರಗೋಡು ಕನ್ನಡಿಗ ಪತ್ರಕರ್ತರಿಗೂ ಹಂಚಲಾಗು -ವುದು ಎಂದು ಎ.ಆರ್ ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here